Webdunia - Bharat's app for daily news and videos

Install App

ರವಿಚಂದ್ರನ್ ಅಶ್ವಿನ್-ಎಂಎಸ್ ಧೋನಿ ಮಧ್ಯೆ ಎಲ್ಲವೂ ಸರಿಯಿಲ್ಲ?

Webdunia
ಭಾನುವಾರ, 25 ಡಿಸೆಂಬರ್ 2016 (07:57 IST)
ಚೆನ್ನೈ: ವರ್ಷದ ಕ್ರಿಕೆಟಿಗನಾಗಿ ಆಯ್ಕೆಯಾದ ಬಳಿಕ ಟೀಂ ಇಂಡಿಯಾ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ತಮ್ಮ ಯಶಸ್ಸಿಗೆ ಕಾರಣರಾದವರಿಗೆಲ್ಲಾ ಟ್ವಿಟರ್ ನಲ್ಲಿ ಧನ್ಯವಾದ ತಿಳಿಸಿದ್ದರು. ಆದರೆ ಏಕದಿನ ನಾಯಕ ಎಂಎಸ್ ಧೋನಿ ಹೆಸರು ಪ್ರಸ್ತಾಪಿಸದೇ ವಿವಾದಕ್ಕೆ ಕಾರಣವಾಗಿದ್ದರು. ಇದೀಗ ಈ ವಿವಾದಕ್ಕೆ ಇನ್ನೊಂದು ಟ್ವಿಸ್ಟ್ ಸಿಕ್ಕಿದೆ.


ಧೋನಿ ಟೆಸ್ಟ್ ತಂಡದ ನಾಯಕನಾಗಿದ್ದಾಗ ಅಶ್ವಿನ್ ಗೆ ಬ್ಯಾಟಿಂಗ್ ಅವಕಾಶವನ್ನೇ ನೀಡುತ್ತಿರಲಿಲ್ಲ. ಆದಷ್ಟು ಕೆಳಕ್ರಮಾಂಕದಲ್ಲಿ ಆಡಿಸುತ್ತಿದ್ದರು. ಇದರಿಂದ ಅವರಿಗೆ ಹೆಚ್ಚು ರನ್ ಗಳಿಸುವ ಅವಕಾಶವೇ ಸಿಗುತ್ತಿರಲಿಲ್ಲ. ಇಲ್ಲಿಂದ ಅಶ್ವಿನ್ ಅಸಮಾಧಾನ ಪ್ರಾರಂಭವಾಗಿತ್ತಂತೆ.

ವಿರಾಟ್ ಕೊಹ್ಲಿ ನಾಯಕರಾದ ಮೇಲೆ ಅಶ್ವಿನ್ ಗೆ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಅವಕಾಶ ಕೊಟ್ಟರು. ಅಷ್ಟರವರೆಗೆ ಅವರು ಆಡುವ ಆರನೇ ಕ್ರಮಾಂಕದಲ್ಲಿ ಧೋನಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಧೋನಿ ನಿವೃತ್ತಿಯಾದ ಮೇಲೆ ಅಶ್ವಿನ್ ಕ್ರಮಾಂಕ ಆರಕ್ಕೇರಿತು. ರನ್ ಕೂಡಾ ಸರಾಗವಾಗಿ ಬಂತು. ಈ ಸಂದರ್ಭದಲ್ಲೊಮ್ಮೆ ಅವರು ತಮ್ಮನ್ನು ಮೇಲಿನ ಕ್ರಮಾಂಕಕ್ಕೆ ಕರೆತಂದ ಕೋಚ್ ಅನಿಲ್ ಕುಂಬ್ಳೆ ಮತ್ತು ನಾಯಕ ಕೊಹ್ಲಿಗೆ ಧನ್ಯವಾದವನ್ನೂ ತಿಳಿಸಿದ್ದರು.

ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ಸರಣಿಯಲ್ಲೂ ಅಶ್ವಿನ್ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿ ನಾಲ್ಕು ಅರ್ಧಶತಕ ಗಳಿಸಿದ್ದರು. ತಮ್ಮನ್ನು ಕೇವಲ ಬೌಲರ್ ಆಗಿ ಬಳಸಿಕೊಳ್ಳುತ್ತಿದ್ದುದಕ್ಕೆ ಅವರಿಗೆ ಧೋನಿ ಮೇಲೆ ಅಸಮಾಧಾನವಿತ್ತು ಎನ್ನಲಾಗಿದೆ. ಇದು ಇವರಿಬ್ಬರ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು ಎನ್ನಲಾದರೂ, ಧೋನಿ ಬಹಿರಂಗವಾಗಿ ಅದನ್ನು ನಿರಾಕರಿಸಿದ್ದರು. ಆದರೆ ಇದು ತೇಪೆ ಹಚ್ಚುವ ಕೆಲಸವಷ್ಟೇ ಎನ್ನುವುದು ಈಗ ಸ್ಪಷ್ಟವಾಗುತ್ತಿದೆ.

ಇತ್ತೀಚೆಗೆ ಅಶ್ವಿನ್ ಅಷ್ಟೊಂದು ಏಕದಿನ ಪಂದ್ಯಗಳನ್ನು ಆಡುತ್ತಿಲ್ಲ. ವಿಶ್ರಾಂತಿಯ ನೆಪವೊಡ್ಡಿ ಅವರನ್ನು ಏಕದಿನ ಪಂದ್ಯಗಳಿಂದ ದೂರವಿಡಲಾಗುತ್ತಿದೆ. ಹೀಗಾಗಿ ಇವರಿಬ್ಬರ ಸಂಬಂಧದ ಬಗ್ಗೆ ಸ್ಪಷ್ಟತೆಯಿಲ್ಲ. ಆದರೂ, ಕಳೆದ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಅಶ್ವಿನ್ ಗೆ ಬೇಕೆಂದೇ ಧೋನಿ ಹೆಚ್ಚು ಓವರ್ ನೀಡದೇ ಸತಾಯಿಸಿದ್ದೆಲ್ಲಾ ಇವರಿಬ್ಬರ ಸಂಬಂಧದಲ್ಲಿ ಏನೋ ಹಳಸಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ಇದೇ ಕಾರಣಕ್ಕೆ ತಮ್ಮ ಯಶಸ್ಸಿಗೆ ಕಾರಣರಾದವರಿಗೆ ಧನ್ಯವಾದ ತಿಳಿಸುವ ಹೆಸರುಗಳಲ್ಲಿ ಧೋನಿ ಹೆಸರನ್ನು ಬೇಕೆಂದೇ ಅಶ್ವಿನ್ ಪ್ರಸ್ತಾಪಿಸಲಿಲ್ಲ ಎಂಬ ಗುಸು ಗುಸು ಹರಿದಾಡುತ್ತಿದೆ. ಏನೇ ಆದರೂ ಇಂತಹದ್ದೆಲ್ಲಾ ಭಾರತೀಯ ಕ್ರಿಕೆಟ್ ಗೆ ಒಳ್ಳೆಯದಂತೂ ಅಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG:ಟೀಂ ಇಂಡಿಯಾ ಕ್ಯಾಪ್ಟನ್ ಶುಭಮನ್ ಗಿಲ್ ಟಾಸ್ ಸೋಲುವುದರಲ್ಲೇ ದಾಖಲೆ

IND vs ENG: ಐದನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ 3 ಬದಲಾವಣೆ ಖಚಿತ

ENG vs IND: ಇಂಗ್ಲೆಂಡ್ ತಂಡಕ್ಕೆ ದೊಡ್ಡ ಆಘಾತ, ತಂಡದ ನಾಯಕನೇ ಪ್ರಮುಖ ಪಂದ್ಯದಿಂದ ಹೊರಕ್ಕೆ

ENG vs IND: ನಾಳೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಟೀಂ ಇಂಡಿಯಾಗೆ ಬಿಗ್ ಶಾಕ್‌, ಪ್ರಮುಖ ಆಟಗಾರನೇ ಪಂದ್ಯಕ್ಕಿಲ್ಲ

ಟಿ20 ಕ್ರಿಕೆಟ್‌ನಲ್ಲಿ ಅಗ್ರಸ್ಥಾನಕ್ಕೇರಿದ ಭಾರತದ ಎಡಗೈ ಬ್ಯಾಟರ್‌ ಅಭಿಷೇಕ್ ಶರ್ಮಾ

ಮುಂದಿನ ಸುದ್ದಿ
Show comments