Select Your Language

Notifications

webdunia
webdunia
webdunia
webdunia

ಉಮೇಶ್ ಯಾದವ್‌ಗೆ ಬದಲಿಯಾಗಿ ಏಕದಿನಕ್ಕೆ ಶ್ರೀನಾಥ್ ಅರವಿಂದ್

ಉಮೇಶ್ ಯಾದವ್‌ಗೆ ಬದಲಿಯಾಗಿ  ಏಕದಿನಕ್ಕೆ ಶ್ರೀನಾಥ್ ಅರವಿಂದ್
ಮುಂಬೈ , ಸೋಮವಾರ, 19 ಅಕ್ಟೋಬರ್ 2015 (16:56 IST)
ರವೀಂದ್ರ ಜಡೇಜಾ ಅವರು ಭಾರತದ ಟೆಸ್ಟ್ ತಂಡದ ಭಾಗವಾಗಿ ಪುನಃ ಬರಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳಿಗೆ ಅವರನ್ನು ಆಯ್ಕೆ ಮಾಡಲಾಗಿದೆ.  ಆದರೆ ಸೌರಾಷ್ಟ್ರ ಎಡಗೈ ಸ್ಪಿನ್ನರ್ ಐದು  ಏಕದಿನ ಪಂದ್ಯಗಳ ಸರಣಿಯಲ್ಲಿ ಕೊನೆಯ ಎರಡು ಪಂದ್ಯಗಳಿಗೆ ಆಯ್ಕೆಯಾಗಲು ವಿಫಲರಾಗಿದ್ದಾರೆ.
 ಜಡೇಜಾ ಅವರು ಹರ್ಭಜನ್ ಬದಲಿಯಾಗಿ ಬರಲಿದ್ದಾರೆ. ಹರ್ಭಜನ್ ಅವರು ಶ್ರೀಲಂಕಾ ಪ್ರವಾಸದಲ್ಲಿ ಟೆಸ್ಟ್ ತಂಡದಲ್ಲಿದ್ದರು.
 
ರಾಷ್ಟ್ರೀಯ ಆಯ್ಕೆದಾರರ ತಂಡವು ದೆಹಲಿಯಲ್ಲಿ ಸೋಮವಾರ ಭೇಟಿ ಮಾಡಿ ಕೊನೆಯ ಎರಡು ಏಕದಿನಗಳಿಗೆ ಮತ್ತು ಮೊದಲ ಎರಡು ಟೆಸ್ಟ್‌ ಪಂದ್ಯಗಳಿಗೆ ತಂಡವನ್ನು ಪ್ರಕಟಿಸಿತು.  ದಕ್ಷಿಣ ಆಫ್ರಿಕಾ ವಿರುದ್ಧ ಟ್ವೆಂಟಿ 20 ಸರಣಿ ಆಡಿದ್ದ ಕರ್ನಾಟಕದ ಶ್ರೀನಾಥ್ ಅರವಿಂದ್ ಅವರನ್ನು ಉಮೇಶ್ ಯಾದವ್‌ಗೆ  ಬದಲಿಯಾಗಿ ಏಕದಿನ ಸರಣಿಗೆ ಸೇರ್ಪಡೆ ಮಾಡಲಾಗಿದೆ. 
 
ಇಶಾಂತ್ ಶರ್ಮಾ ಮತ್ತು ರವಿಚಂದ್ರನ್ ಅಶ್ವಿನ್ ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇಬ್ಬರೂ ಆಟಗಾರರು ಈಗ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. 
 ತಂಡಗಳು ಇಂತಿವೆ 
ಭಾರತದ ಏಕದಿನ ತಂಡ: ಮಹೇಂದ್ರ ಸಿಂಗ್ ಧೋನಿ (ನಾಯಕ), ರೋಹಿತ್ ಶರ್ಮ, ಶಿಖರ್ ಧವನ್, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಅಕ್ಸರ್ ಪಟೇಲ್, ಹರ್ಭಜನ್ ಸಿಂಗ್, ಅಮಿತ್ ಮಿಶ್ರಾ, ಮೋಹಿತ್ ಶರ್ಮ, ಭುವನೇಶ್ವರ ಕುಮಾರ್, ಎಸ್ ಅರವಿಂದ್, ಸ್ಟುವರ್ಟ್ ಬಿನ್ನಿ, ಅಂಬಟಿ ರಾಯುಡು, ಗುರುಕೀರತ್ ಮನ್.
ಭಾರತ ಟೆಸ್ಟ್ ತಂಡದಲ್ಲಿ (ಮೊದಲ ಎರಡು ಟೆಸ್ಟ್): ವಿರಾಟ್ ಕೊಹ್ಲಿ (ನಾಯಕ), ಮುರಳಿ ವಿಜಯ್, ಶಿಖರ್ ಧವನ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜಾ, ಅಮಿತ್ ಮಿಶ್ರಾ, ಭುವನೇಶ್ವರ ಕುಮಾರ್, ಉಮೇಶ್ ಯಾದವ್, ಕೆ.ಎಲ್ ರಾಹುಲ್, ಸ್ಟುವರ್ಟ್ ಬಿನ್ನಿ, ವರುಣ್ ಆರೋನ್, ಇಶಾಂತ್ ಶರ್ಮ.
ಮಂಡಳಿ ಅಧ್ಯಕ್ಷರ ಇಲೆವೆನ್: ಚೇತೇಶ್ವರ ಪೂಜಾರ, ಕೆ.ಎಲ್ ರಾಹುಲ್, ಉನ್ಮುಕ್ತ್ ಚಾಂದ್, ಕರುಣ್ ನಾಯರ್, ಶ್ರೇಯಸ್ ಅಯ್ಯರ್ ನಮಾನ್ ಓಜಾ ಹಾರ್ದಿಕ್  ಪಾಂಡ್ಯ, ಜಯಂತ್ ಯಾದವ್ ಕುಲದೀಪ್ ಯಾದವ್ ಶರ್ದುಲ್ ಠಾಕೂರ್ ನಾಥು ಸಿಂಗ್ ಕರಣ್ ಶರ್ಮಾ, ಶೆಲ್ಡಾನ್ ಜಾಕ್ಸನ್
 

Share this Story:

Follow Webdunia kannada