Select Your Language

Notifications

webdunia
webdunia
webdunia
webdunia

ವಿಶ್ವದಾಖಲೆ ಮಾಡಲು ರವಿಚಂದ್ರನ್ ಅಶ್ವಿನ್ ಇನ್ನೂ ಕಾಯಬೇಕು!

ವಿಶ್ವದಾಖಲೆ ಮಾಡಲು ರವಿಚಂದ್ರನ್ ಅಶ್ವಿನ್ ಇನ್ನೂ ಕಾಯಬೇಕು!
Hyderabad , ಶನಿವಾರ, 11 ಫೆಬ್ರವರಿ 2017 (11:26 IST)
ಹೈದರಾಬಾದ್: ಭಾರತೀಯ ಬೌಲರ್ ಗಳ ಕರಾರುವಾಕ್ ದಾಳಿಗೆ ಬಾಂಗ್ಲಾದೇಶ ಬ್ಯಾಟ್ಸ್ ಮನ್ ಗಳು ಸಂಪೂರ್ಣ ಎಡವಿದ್ದಾರೆ. ಆದರೆ ಅತೀ ವೇಗದ 250 ವಿಕೆಟ್ ಪಡೆದ ವಿಶ್ವ ದಾಖಲೆ ಮಾಡಲು ರವಿಚಂದ್ರನ್ ಅಶ್ವಿನ್ ಇನ್ನೂ ಕಾಯಬೇಕಿದೆ.

 
ಬಾಂಗ್ಲಾದೇಶ ಮೂರನೇ ದಿನದ ಭೋಜನ ವಿರಾಮದ ವೇಳೆಗೆ 43 ಓವರ್ ಎದುರಿಸಿ 4 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿದೆ. ಇಷ್ಟು ಓವರ್ ಗಳಲ್ಲಿ ಅಶ್ವಿನ್ ಬೌಲಿಂಗ್ ಮಾಡಿದ್ದು ಕೇವಲ 5 ಓವರ್. ಅದೂ ಭೋಜನ ವಿರಾಮಕ್ಕೆ ಕೆಲವೇ ಕ್ಷಣಗಳ ಮೊದಲು ಅವರಿಗೆ ಬೌಲಿಂಗ್ ಅವಕಾಶ ಸಿಕ್ಕಿದೆ. ಹೀಗಾಗಿ ಅತೀ ವೇಗದ  250 ವಿಕೆಟ್ ಪಡೆದ ವಿಶ್ವ ದಾಖಲೆ ಮಾಡಲು ಅಶ್ವಿನ್ ಗೆ 2 ವಿಕೆಟ್ ಬೇಕು. ಅದಕ್ಕೆ ಅವರಿನ್ನೂ ಕಾಯಬೇಕಿದೆ.

ಭಾರತದ ವೇಗಿ ಉಮೇಶ್ ಯಾದವ್ ದಾಳಿಗೆ ಪ್ರವಾಸಿಗರು ತಡಬಡಾಯಿಸಿದರು. ಯಾದವ್ ಎರಡು ವಿಕೆಟ್ ಕಿತ್ತರು. ಇಶಾಂತ್ ಶರ್ಮಾ ಕೊಂಚ ರನ್ ಬಿಟ್ಟುಕೊಟ್ಟರೂ ಒಂದು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಜಡೇಜಾ ಉತ್ತಮವಾಗಿಯೇ ಬೌಲಿಂಗ್ ಮಾಡುತ್ತಿದ್ದರೂ, ವಿಕೆಟ್ ಪಡೆಯುವ ಭಾಗ್ಯ ಇನ್ನೂ ಸಿಕ್ಕಿಲ್ಲ.  ಸದ್ಯಕ್ಕೆ ಬಾಂಗ್ಲಾ ಪರ ಹಿರಿಯ ಶಕೀಬ್ ಅಲ್ ಹಸನ್ ಜಿಗುಟಿನ ಆಟವಾಡುತ್ತಿದ್ದಾರೆ.

ಆದರೂ ಬಾಂಗ್ಲಾಗೆ ಭಾರತದ ಮೊದಲ ಇನಿಂಗ್ಸ್ ಮೊತ್ತ ದಾಟಲು 562 ರನ್ ಗಳ ಬೃಹತ್ ಗುರಿಯಿದೆ. ಅದನ್ನು ದಾಟುವುದು ಬಿಡಿ, ಫಾಲೋ ಆನ್ ತಪ್ಪಿಸಿದರೆ ಸಾಕು ಎಂಬಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅನಿಲ್ ಕುಂಬ್ಳೆಗಾಗಿ ಕಿತ್ತಾಡಿಕೊಂಡ ಪಾಕ್ ಕ್ರಿಕೆಟಿಗರು!