Select Your Language

Notifications

webdunia
webdunia
webdunia
webdunia

ರವಿಚಂದ್ರನ್ ಅಶ್ವಿನ್ ಜಗತ್ತಿನ ಶ್ರೇಷ್ಟ ಸ್ಪಿನ್ನರ್: ಮುರಳೀಧರನ್

ರವಿಚಂದ್ರನ್ ಅಶ್ವಿನ್ ಜಗತ್ತಿನ ಶ್ರೇಷ್ಟ ಸ್ಪಿನ್ನರ್: ಮುರಳೀಧರನ್
ಸಿಡ್ನಿ , ಬುಧವಾರ, 6 ಜುಲೈ 2016 (11:27 IST)
ಶ್ರೀಲಂಕಾದ ಲೆಜೆಂಡ್ ಮುತ್ತಯ್ಯ ಮುರಳೀಧರನ್ ಮಂಗಳವಾರ ಪ್ರಸಕ್ತ ಆಫ್‌ಸ್ಪಿನ್ನರುಗಳ ಪೈಕಿ ಭಾರತದ ರವಿಚಂದ್ರನ್ ಅಶ್ವಿನ್  ಶ್ರೇಷ್ಟ ಬೌಲರ್ ಎಂದು ಪರಿಗಣಿಸಿದ್ದಾರೆ. 800 ಟೆಸ್ಟ್ ವಿಕೆಟ್ ವಿಶ್ವದಾಖಲೆ ಹೊಂದಿರುವ ಮುರಳೀಧರನ್, ಅಶ್ವಿನ್ ಈ ಕ್ಷಣದಲ್ಲಿ ಟಾಪ್ ಸ್ಥಾನದಲ್ಲಿದ್ದಾರೆಂದು ಹೇಳಿದರು.

ಆಸ್ಟ್ರೇಲಿಯಾದ ನಾಥನ್ ಲಯನ್ ಅವರನ್ನು ಕೂಡ ಶ್ಲಾಘಿಸಿದ ಮುರಳೀಧರನ್, ವಿವಿಧ ಪರಿಸ್ಥಿತಿಗಳಲ್ಲಿ ಬೌಲ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆಂದು ಅಭಿಪ್ರಾಯಪಟ್ಟರು.
 
ಶ್ರೇಷ್ಟ ಪ್ರಸಕ್ತ ಟೆಸ್ಟ್ ಸ್ಪಿನ್ನರ್ ಆಗಿ ಅಶ್ವಿನ್ ಟಾಪ್ ಸ್ಥಾನದಲ್ಲಿದ್ದಾರೆ ಎಂದು ಮುರಳೀಧರನ್ ಹೇಳಿದರು.  ಲಯನ್ ಕೂಡ ಉತ್ತಮ ಬೌಲರ್ ಮತ್ತು ಆಫ್ ಸ್ಪಿನ್ನರ್. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅದನ್ನು ಸ್ವತಃ ಸಾಬೀತು ಮಾಡಿದ್ದಾರೆ ಮತ್ತು ಆಸ್ಟ್ರೇಲಿಯಾ ಪರ ಅನೇಕ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ವಿವಿಧ ಪಿಚ್ ಸ್ಥಿತಿಗಳಲ್ಲಿ ಬೌಲ್ ಮಾಡಿದ್ದು, ಅವು ಸ್ಪಿನ್‌ಗೆ ಹೆಚ್ಚು ನೆರವಾಗಿಲ್ಲ. ಆದರೆ ಸ್ಪಿನ್‌ಗೆ ನೆರಪಾಗುವ ಪಿಚ್‌ಗಳಲ್ಲಿ ಅವರು ಕೆಲವು ವಿಕೆಟ್ ಕಬಳಿಸಿದ್ದಾರೆ ಎಂದು ಮುರಳೀಧರನ್ ಹೇಳಿದರು.
 
2014ರಲ್ಲಿ ಆಸ್ಟ್ರೇಲಿಯಾ ಜತೆ ಕನ್ಸಲ್ಟೆಂಟ್ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡಿದ್ದ ಮುರಳೀಧರನ್,  ಕಾಂಗರೂಗಳು ಶ್ರೀಲಂಕಾ ವಿರುದ್ಧ ಮೂರು ಟೆಸ್ಟ್ ಸರಣಿಯಲ್ಲಿ ಫೇವರಿಟ್ ಆಗಿದ್ದಾರೆಂದು ಅಭಿಪ್ರಾಯಪಟ್ಟರು. ಆಸ್ಟ್ರೇಲಿಯಾಕ್ಕೆ ಸರಣಿ ಗೆಲ್ಲುವ ಅವಕಾಶವಿದೆ. ಏಕೆಂದರೆ ಶ್ರೀಲಂಕಾದಲ್ಲಿ ಅನೇಕ ಮಂದಿ ಹಿರಿಯ ಆಟಗಾರರು ನಿವೃತ್ತಿಯಾಗಿದ್ದರಿಂದ ಅನನುಭವಿ ಆಟಗಾರರಿಂದ ಕೂಡಿದ್ದು, ತಂಡದ ಪುನರ್ನಿರ್ಮಾಣದಲ್ಲಿ ತೊಡಗಿದೆ ಎಂದು ಮುರಳೀಧರನ್ ಹೇಳಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಮ್ಮದ್ ಅಮೀರ್‌ಗೆ ಪಾಕ್ ಬೌಲಿಂಗ್ ದಾಳಿಯ ಸಾರಥ್ಯ: ವಾಸಿಂ ಅಕ್ರಂ