Webdunia - Bharat's app for daily news and videos

Install App

ಅಶ್ವಿನ್‌ರನ್ನು ಯಾವುದೇ ವಿಕೆಟ್‌ನಲ್ಲಿ ಎದುರಿಸುವುದು ಕಷ್ಟ: ಸಿಮ್ಮನ್ಸ್

Webdunia
ಸೋಮವಾರ, 1 ಆಗಸ್ಟ್ 2016 (12:04 IST)
ಎರಡನೇ ದಿನದಾಟದಲ್ಲಿ ಶಿಸ್ತಿನ ಪ್ರದರ್ಶನ ನೀಡಿದ ಬೌಲರುಗಳನ್ನು ಮನಸಾರೆ ಶ್ಲಾಘಿಸಿದ ವೆಸ್ಟ್ ಇಂಡೀಸ್ ಕೋಚ್ ಫಿಲ್ ಸಿಮ್ಮನ್ಸ್, ಇನ್ನುಳಿದ ಭಾರತದ ವಿಕೆಟ್‌‍ಗಳನ್ನು ಉರುಳಿಸಿದ ಬಳಿಕ, ಎರಡನೇ ಟೆಸ್ಟ್‌ನಲ್ಲಿ ಪುಟಿದೇಳಲು ಬ್ಯಾಟ್ಸ್‌ಮನ್‌ಗಳು ನೆರವಾಗಬೇಕೆಂದು ಹೇಳಿದರು.
 
ಭಾರತ ಎರಡನೇ ದಿನ 88 ಓವರುಗಳಲ್ಲಿ 232 ರನ್ ಮಾತ್ರ ಸ್ಕೋರ್ ಮಾಡಲು ಸಾಧ್ಯವಾಗಿ 358ಕ್ಕೆ 5 ವಿಕೆಟ್ ಉರುಳಿದೆ. ಈ ಹಿನ್ನೆಲೆಯಲ್ಲಿ ತಮ್ಮ ಬೌಲರುಗಳು ಸಾಕಷ್ಟು ಸುಧಾರಿಸಿದ್ದಾರೆಂದು ಸಿಮ್ಮನ್ಸ್ ಹೇಳಿದರು. ನಾವು ಉತ್ತಮವಾಗಿ ಬೌಲ್ ಮಾಡಿದ್ದೇನೆಂದು ಎಣಿಸಿದ್ದೇನೆ. ಟೆಸ್ಟ್ ಕ್ರಿಕೆಟ್‌ನಲ್ಲಿ 90 ಪೂರ್ಣ ಓವರಿನಲ್ಲಿ ಸರಾಸರಿ 270 ರನ್ ಸ್ಕೋರ್ ಮಾಡಬಹುದಾಗಿದ್ದು ನಾವು ಭಾರತ ತಂಡವನ್ನು ನಿಯಂತ್ರಿಸಿದ್ದೇವೆ. 90 ಓವರುಗಳಲ್ಲಿ ಅವರನ್ನು 230 ರನ್‌ಗೆ ನಿಯಂತ್ರಿಸಿದ್ದರಿಂದ ಆಂಟಿಗಾಗಿಂತ ಹೆಚ್ಚು ಸುಧಾರಣೆಯಾಗಿದ್ದನ್ನು ತೋರಿಸುತ್ತದೆ ಎಂದು ಸಿಮ್ಮನ್ಸ್ ಅಭಿಪ್ರಾಯಪಟ್ಟರು.
 
 ಟೆಸ್ಟ್ ಕ್ರಿಕೆಟ್‌ನಲ್ಲಿ ಸಹನೆಯಿಂದ ಇರಬೇಕೆಂದು ನಾನು ಕಳೆದ 6 ತಿಂಗಳಿಂದ ಹೇಳುತ್ತಿದ್ದ ವಿಷಯವನ್ನು ಬೌಲರು‌ಗಳು ಇಂದು ಕಲಿತಿದ್ದಾರೆ. ವಿಕೆಟ್ ನಮಗೆ ನೆರವಾಗದಿದ್ದಾಗ ನಾವು ಸಹನೆಯಿಂದ ಬೌಲಿಂಗ್ ಮಾಡಬೇಕು. ಆಗ ಸಹನೆಯಿಂದ ನೀವು ತರುವ ಒತ್ತಡವು ವಿಕೆಟ್ ಗಳಿಸಿಕೊಡುತ್ತದೆ ಎಂದು ಹೇಳಿದರು.  ಅಶ್ವಿನ್ ವಿಶ್ವದಲ್ಲೇ ನಂಬರ್ ಒನ್ ಬೌಲರ್. ಅವರ ಎಸೆತವನ್ನು ಯಾವುದೇ ವಿಕೆಟ್‌ನಲ್ಲಿ ಕೂಡ ಆಡುವುದು ಕಷ್ಟ ಎಂದು ಸಿಮ್ಮನ್ಸ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಭಾರತ ವರ್ಸಸ್ ಇಂಗ್ಲೆಂಡ್ ಟೆಸ್ಟ್, ಲಾರ್ಡ್ ಪಿಚ್ ರಿಪೋರ್ಟ್, ಟೀಂ ಇಂಡಿಯಾ

ಸಿಎಸ್‌ಕೆಯನ್ನು ಹಿಂದಿಕ್ಕಿದ ಅತ್ಯಂತ ಮೌಲ್ಯಯುತ ತಂಡವಾಗಿ ಹೊರಹೊಮ್ಮಿದ ಆರ್‌ಸಿಬಿ

ಚಿನ್ನಸ್ವಾಮಿ ಕಾಲ್ತುಳಿತಕ್ಕೆ ನಿಜ ಕಾರಣ ಬಯಲು: ಎಲ್ಲದಕ್ಕೂ ಮೂಲ ಕಾರಣ ಕೊಹ್ಲಿನಾ

ಆರ್​ಸಿಬಿಯ ಎಡಗೈ ವೇಗಿಗೆ ಸಂಕಷ್ಟ: ಲೈಂಗಿಕ ದೌರ್ಜನ್ಯ ಆರೋಪದಡಿ ಯಶ್‌ ದಯಾಳ್‌ಗೆ ಬಂಧನ ಭೀತಿ

IND vs ENG: ಬೇಜ್ ಬಾಲ್ ಕೈ ಬಿಟ್ಟು ಹಳೇ ಸ್ಟೈಲ್ ಗೆ ಮರಳಲಿದೆ ಇಂಗ್ಲೆಂಡ್

ಮುಂದಿನ ಸುದ್ದಿ
Show comments