Select Your Language

Notifications

webdunia
webdunia
webdunia
webdunia

ರವಿ ಶಾಸ್ತ್ರಿ ಟೀಂ ಇಂಡಿಯಾ ಕೋಚ್ ಆಗುವ ಸಾಧ್ಯತೆ

ರವಿ ಶಾಸ್ತ್ರಿ ಟೀಂ ಇಂಡಿಯಾ ಕೋಚ್ ಆಗುವ ಸಾಧ್ಯತೆ
ಮುಂಬೈ , ಗುರುವಾರ, 11 ಜೂನ್ 2015 (16:06 IST)
ಟೀಂ ಇಂಡಿಯಾಗೆ ಹೆಡ್ ಕೋಚ್ ಯಾರಾಗಬಹುದೆಂಬ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಡಂಕನ್ ಫ್ಲೆಚರ್ ಸ್ಥಾನವನ್ನು ಟೀಂ ಇಂಡಿಯಾ ಡೈರೆಕ್ಟರ್ ರವಿ ಶಾಸ್ತ್ರಿ ತುಂಬುವ ಸಾಧ್ಯತೆಯಿದ್ದು, ಅವರಿಗೆ ವರ್ಷಕ್ಕೆ 7 ಕೋಟಿ ರೂ. ಸಂಭಾವನೆ ಸಿಗುವುದೆಂದು ನಿರೀಕ್ಷಿಸಲಾಗಿದೆ. ಹೆಡ್ ಕೋಚ್ ಹುದ್ದೆಗೆ ರವಿ ಶಾಸ್ತ್ರಿ ಆಯ್ಕೆಯಾಗುವುದು ಬಹುಮಟ್ಟಿಗೆ ಖಚಿತವಾಗಿದೆ ಎಂದು ಪತ್ರಿಕೆಯೊಂದು ದೃಢಪಡಿಸಿದೆ. 
 
53 ವರ್ಷ ವಯಸ್ಸಿನ ಶಾಸ್ತ್ರಿ ಜಗತ್ತಿನಲ್ಲೇ ಅತ್ಯಧಿಕ ವೇತನದ ಕ್ರಿಕೆಟ್ ಕೋಚ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದು, ಈ ಒಪ್ಪಂದವನ್ನು ವರ್ಷಕ್ಕೆ 7 ಕೋಟಿ ರೂ.ಗಳೆಂದು ಅಂದಾಜು ಮಾಡಲಾಗಿದೆ.  ಶಾಸ್ತ್ರಿ ಟಿವಿ ವೀಕ್ಷಕವಿವರಣೆಕಾರರಾಗಿ ಬಿಸಿಸಿಐನಿಂದ ವರ್ಷಕ್ಕೆ 4 ಕೋಟಿ ರೂ. ಪಡೆಯುತ್ತಿದ್ದರು ಮತ್ತು  ಟೀಂ ಡೈರೆಕ್ಟರ್ ಹುದ್ದೆಯಲ್ಲಿ ವರ್ಷಕ್ಕೆ 6 ಕೋಟಿ ರೂ. ಗಳಿಸುತ್ತಾರೆ.  ಪ್ರಸಕ್ತ ವರದಿಗಳು ನಿಖರವಾಗಿದ್ದರೆ, ಶಾಸ್ತ್ರಿ ಅವರು ಡಂಕನ್ ಫ್ಲೆಚರ್ ಅವರಿಗೆ ನೀಡಿದ್ದ 4.2 ಕೋಟಿ ರೂ.ಗಳಿಗಿಂತ ಹೆಚ್ಚು ಪಡೆಯಲಿದ್ದಾರೆ. 
 ಜುಲೈನಲ್ಲಿ ಜಿಂಬಾಬ್ವೆ ಪ್ರವಾಸಕ್ಕೆ ಮುನ್ನ ಹೊಸ ನೇಮಕವನ್ನು ಪ್ರಕಟಿಸುವ ನಿರೀಕ್ಷೆಯಿದೆ. 
 
ತಾವು ಬಾಂಗ್ಲಾದೇಶದ ವಿರುದ್ಧ ಏಕೈಕ ಟೆಸ್ಟ್ ಮತ್ತು ಮೂರು ಏಕದಿನಗಳ ನಂತರ ಬಿಸಿಸಿಐ ಜೊತೆ ಮಾತನಾಡುವುದಾಗಿ ಹೇಳಿದ್ದಾರೆ. ಶಾಸ್ತ್ರಿ ಅವರ ಸಂಭಾವನೆ ಪ್ಯಾಕೇಜ್ ಕುರಿತು ಈ ಚರ್ಚೆಗಳನ್ನು ಮಾಡಬಹುದೆಂದು ಭಾವಿಸಲಾಗಿದೆ.  80 ಟೆಸ್ಟ್ ಪಂದ್ಯಗಳನ್ನು 150 ಏಕದಿನ ಪಂದ್ಯಗಳನ್ನು ಆಡಿರುವ ಶಾಸ್ತ್ರಿ ಕಳೆದ ವರ್ಷ ಇಂಗ್ಲೆಂಡ್ ಪ್ರವಾಸದಲ್ಲಿ ನಿರ್ದೇಶಕರಾದ ಬಳಿಕ ಹಿರಿಯ ಆಟಗಾರರಿಗೆ ಅವರ ಬಗ್ಗೆ ಆತ್ಮವಿಶ್ವಾಸ ಮೂಡಿತ್ತು. ನಾಯಕ ವಿರಾಟ್ ಕೊಹ್ಲಿ ಕೂಡ ಶಾಸ್ತ್ರಿ ಅವರಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದರು.  ತಂಡದಲ್ಲೇ ಶಾಸ್ತ್ರಿಗೆ ಸಂಪೂರ್ಣ ಬೆಂಬಲವಿದ್ದಿದ್ದರಿಂದ ತಕ್ಷಣಕ್ಕೆ ಕೋಚ್ ಹುಡುಕುವುದನ್ನು ಬಿಸಿಸಿಐ ಕೈಬಿಟ್ಟಿದೆ. 
 

Share this Story:

Follow Webdunia kannada