Select Your Language

Notifications

webdunia
webdunia
webdunia
webdunia

ರಾಜಕೋಟ್ ಟೆಸ್ಟ್: ಇಂಗ್ಲೆಂಡ್ 537, ಟೀಂ ಇಂಡಿಯಾ 63/0

ರಾಜಕೋಟ್ ಟೆಸ್ಟ್: ಇಂಗ್ಲೆಂಡ್ 537, ಟೀಂ ಇಂಡಿಯಾ 63/0
Rajkot , ಶುಕ್ರವಾರ, 11 ನವೆಂಬರ್ 2016 (08:46 IST)
ರಾಜಕೋಟ್: ಭಾರತೀಯ ಬೌಲಿಂಗ್ ನ ಲಾಭ ಪಡೆದ ಇಂಗ್ಲೆಂಡ್ 537 ರನ್ ಗಳ ಬೃಹತ್ ಮೊತ್ತವನ್ನೇ ಪೇರಿಸಿದೆ. ಅದಕ್ಕೆ ತಕ್ಕ ಉತ್ತರ ನೀಡಲಾರಂಭಿಸಿರುವ ಭಾರತೀಯ ಬ್ಯಾಟ್ಸ್ ಮನ್ ಗಳು ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 63 ರನ್ ಗಳಿಸಿದೆ. ಇದು ರಾಜ್ ಕೋಟ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ನ ಎರಡನೇ ದಿನದ ವರದಿ.

ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡದ ಮೂವರು ಶತಕ ಗಳಿಸಿದರು. ನಿನ್ನೆ ಅಜೇಯರಾಗಿದ್ದ ಬೆನ್ ಸ್ಟೋಕ್ಸ್ ಇಂದು ತಮ್ಮ ಇನಿಂಗ್ಸ್ ನ್ನು 128 ರವರೆಗೆ ವಿಸ್ತರಿಸಿದರು. ವಿಕೆಟ್ ಕೀಪರ್ ಜಾನಿ ಬೇರ್ ಸ್ಟೋ 46 ರನ್ ಗಳಿಸಿ ಸ್ಟೋಕ್ಸ್ ಗೆ ತಕ್ಕ ಸಾಥ್ ನೀಡಿದರು. ಭಾರತದ ಪರ ರವೀಂದ್ರ ಜಡೇಜಾ 3, ಆರ್.ಅಶ್ವಿನ್ 2, ಮೊಹಮ್ಮದ್ ಶಮಿ 2, ಉಮೇಶ್ ಯಾದವ್ 2 ಹಾಗೂ ಅಮಿತ್ ಮಿಶ್ರಾ 1 ವಿಕೆಟ್ ಗಳಿಸಿದರು.

ಎರಡನೇ ದಿನದ ಅಂತ್ಯಕ್ಕೆ ಮೊದಲ ಸರದಿ ಆರಂಭಿಸಿರುವ ಭಾರತ 63 ರನ್ ಗಳಿಸಿದೆ. ಆರಂಭಿಕರಾದ ಗೌತಮ್ ಗಂಭೀರ್ (28), ಹಾಗೂ ಮುರಳಿ ವಿಜಯ್ (25) ಕ್ರೀಸ್ ಕಾಯ್ದುಕೊಂಡಿದ್ದಾರೆ.  ಇಂದು ಇದೇ ರೀತಿ ಸ್ಥಿರ ಬ್ಯಾಟಿಂಗ್ ಕಾಯ್ದುಕೊಂಡು ಮೊದಲ ಇನಿಂಗ್ಸ್ ನ ಮೊತ್ತ ಸರಿಗಟ್ಟುವತ್ತ ಭಾರತ ದೃಷ್ಟಿ ಹರಿಸಬೇಕಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ತಂಡಕ್ಕೆ ಪಾಠ ಹೇಳಲು ಶೇನ್ ವಾರ್ನ್ ರೆಡಿ