Select Your Language

Notifications

webdunia
webdunia
webdunia
webdunia

ಟೆಸ್ಟ್ ಸಾಮರ್ಥ್ಯ ತೋರಿಸಲು ಇನ್ನಷ್ಟು ಅವಕಾಶಗಳು ಬೇಕು: ಸುರೇಶ್ ರೈನಾ

ಟೆಸ್ಟ್ ಸಾಮರ್ಥ್ಯ ತೋರಿಸಲು ಇನ್ನಷ್ಟು ಅವಕಾಶಗಳು ಬೇಕು: ಸುರೇಶ್ ರೈನಾ
ನವದೆಹಲಿ , ಗುರುವಾರ, 30 ಜುಲೈ 2015 (15:11 IST)
ಸುರೇಶ್ ರೈನಾ ಅವರಿಗೆ ಕೊಲಂಬೊ ಫ್ಲೈಟ್‌ಗೆ ತಾವು ತೆರಳಲು ಅವಕಾಶ ಸಿಕ್ಕದಿರುವುದು ಬೇಸರ ತಂದಿದೆ. ಭಾರತ ಆಗಸ್ಟ್ 12ರಿಂದ ಗಾಲೆಯಲ್ಲಿ ಮೂರು ಟೆಸ್ಟ್ ಸರಣಿ ಆಡುತ್ತಿದೆ.  2100ರಲ್ಲಿ ಚೊಚ್ಚಲ ಆಟದಲ್ಲೇ ಶತಕ ಬಾರಿಸಿದ್ದ ರೈನಾ ಟೆಸ್ಟ್ ವೃತ್ತಿಜೀವನ ಅಪೂರ್ಣತೆಯಿಂದ ಕೂಡಿದ್ದು, ರೈನಾಗೆ ಇದರಿಂದ ಬೇಸರವಾಗಿದೆ.ಉತ್ತರಪ್ರದೇಶದ ಎಡಗೈ ಆಟಗಾರನಿಗೆ ಇನ್ನುಮುಂದೆ ಟೆಸ್ಟ್‌ನಲ್ಲಿ ಅವಕಾಶ ಸಿಗುವ ಸಾಧ್ಯತೆಗಳೂ ಕಡಿಮೆಯಾಗಿದೆ.
 
ನಾನು ಟೆಸ್ಟ್ ಕ್ರಿಕೆಟರ್‌ ಆಗಿ ನನ್ನ ಕೌಶಲ್ಯ ತೋರಿಸಲು ಸಾಕಷ್ಟು ಅವಕಾಶ ಸಿಗಲಿಲ್ಲ. ಏಕದಿನ ಮತ್ತು ಟಿ 20ಯ ಬಿಡುವಿಲ್ಲದ ಸರಣಿಯ ಬಳಿಕ ಕೇವಲ ಒಂದು ಪಂದ್ಯದ ಆಧಾರದ ಮೇಲೆ ನೀವು ಆಟಗಾರರನ್ನು ತೀರ್ಮಾನಿಸಲು ಸಾಧ್ಯವಿಲ್ಲ. ನನ್ನ ಸಾಮರ್ಥ್ಯ ಸಾಬೀತಿಗೆ ಐದು ಟೆಸ್ಟ್ ಪಂದ್ಯಗಳು ಬೇಕೆಂದು ಹೇಳುತ್ತಿಲ್ಲ.  ನನಗೆ 2- 3 ಪಂದ್ಯಗಳನ್ನು ನೀಡಿ. ನಾನು ಸರಿಯಾಗಿ ಪ್ರದರ್ಶನ ನೀಡದಿದ್ದರೆ ಡ್ರಾಪ್ ಮಾಡಿ ಎಂದು ರೈನಾ ಹೇಳಿದ್ದಾರೆ.

 ರೈನಾ ಅವರ 18 ಟೆಸ್ಟ್ ವೃತ್ತಿಜೀವನವು ಅಸ್ತವ್ಯಸ್ತವಾಗಿತ್ತು. ಅವನ ಆರಂಭದ ಟೆಸ್ಟ್ ಓಟ ಕೇವಲ 8 ಪಂದ್ಯಗಳಿಗೆ ಮಾತ್ರ ಉಳಿಯಿತು. ಆದರೆ ಮೂರು ಬಾರಿ ರೈನಾ ಕಮ್‌ಬ್ಯಾಕ್ ಆಗಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ವಿಫಲರಾಗಿದ್ದರು. ಎಂಎಸ್ ಧೋನಿಯ ನೀಲಿ ಕಣ್ಣಿನ ಹುಡುಗ ಎಂದು ರೈನಾರನ್ನು ಕಾಣಲಾಗಿದ್ದರೂ, ಟೆಸ್ಟ್ ಕ್ರಿಕೆಟ್‌ನಲ್ಲಿ ತೋರಿಸಲು ರೈನಾ ಸಾಕಷ್ಟು ರನ್ ಸ್ಕೋರ್ ಮಾಡದಿರುವುದರಿಂದ ಧೋನಿ ಕೂಡ ರೈನಾರನ್ನು ಬೆಂಬಲಿಸುವುದರಿಂದ ಹಿಂದೆ ಸರಿದಿದ್ದಾರೆ. 
 

Share this Story:

Follow Webdunia kannada