Webdunia - Bharat's app for daily news and videos

Install App

ಚೊಚ್ಚಲ ದ್ವಿಶತಕ ಸಿಡಿಸಿ ಯಶಸ್ವಿ ಜೈಸ್ವಾಲ್ ಸಾಲಿಗೆ ಸೇರಿದ ರಚಿನ್ ರವೀಂದ್ರ

Krishnaveni K
ಸೋಮವಾರ, 5 ಫೆಬ್ರವರಿ 2024 (09:20 IST)
Photo Courtesy: Twitter
ಬೇ ಓವಲ್: ದ.ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ರಚಿನ್ ರವೀಂದ್ರ ದ್ವಿಶತಕ ಸಿಡಿಸಿ ಟೀಂ ಇಂಡಿಯಾ ಯುವ ಬ್ಯಾಟಿಗ ಯಶಸ್ವಿ ಜೈಸ್ವಾಲ್ ಸಾಲಿಗೆ ಸೇರ್ಪಡೆಯಾಗಿದ್ದಾರೆ.

ನ್ಯೂಜಿಲೆಂಡ್‍ ಮೊದಲ ಇನಿಂಗ್ಸ್ ನಲ್ಲಿ 511 ರನ್ ಗೆ ಆಲೌಟ್ ಆಗಿತ್ತು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿದ ರಚಿನ್ ರವೀಂದ್ರ 366 ಎಸೆತಗಳಿಂದ 240 ರನ್ ಗಳಿಸಿದರು. ಇದು ಅವರ ವೃತ್ತಿ ಜೀವನದ ನಾಲ್ಕನೇ ಟೆಸ್ಟ್ ಪಂದ್ಯವಾಗಿತ್ತು. ಕೇವಲ ನಾಲ್ಕನೇ ಪಂದ್ಯಕ್ಕೇ ಅವರು ಚೊಚ್ಚಲ ದ್ವಿಶತಕ ಸಿಡಿಸಿ ಮಿಂಚಿದರು. ಅವರಿಗೆ ಸಾಥ್ ನೀಡಿದ ಕೇನ್ ವಿಲಿಯಮ್ಸನ್ 118 ರನ್ ಗಳಿಸಿ ಮಿಂಚಿದರು.

ರಚಿನ್ ರವೀಂದ್ರ ದಾಖಲೆ, ಯಶಸ್ವಿ ಜೈಸ್ವಾಲ್ ಸಾಲಿಗೆ ಸೇರ್ಪಡೆ
ಭಾರತೀಯ ಮೂಲದ ರಚಿನ್ ರವೀಂದ್ರ  ಚೊಚ್ಚಲ ಶತಕವನ್ನೇ ದ್ವಿಶತಕವಾಗಿ ಮಾರ್ಪಡಿಸಿದರು. ಅವರ ಈ ಇನಿಂಗ್ಸ್ ನಿಂದಾಗಿ ಈ ಡಬ್ಲುಟಿಸಿ ಸರಣಿಯಲ್ಲಿ ದ್ವಿಶತಕ ಸಿಡಿಸಿದ ಭಾರತದ ಯಶಸ್ವಿ ಜೈಸ್ವಾಲ್ ಸಾಲಿಗೆ ಸೇರ್ಪಡೆಯಾದರು. ಜೈಸ್ವಾಲ್ ಕೂಡಾ ಇದೀಗ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದ್ದರು. ಇದು ಅವರ ಐದನೇ ಪಂದ್ಯವಾಗಿದೆ. ಈ ಮೂಲಕ ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಆಟಗಾರನೆನಿಸಿಕೊಂಡಿದ್ದರು. ಈಗ ಆ ಸಾಲಿಗೆ ರಚಿನ್ ಸೇರಿಕೊಂಡಿದ್ದಾರೆ. ವಿಶೇಷವೆಂದರೆ ಇಬ್ಬರೂ ಒಂದೇ ಸಮಯಕ್ಕೆ ಈ ದಾಖಲೆ ಮಾಡಿದ್ದಾರೆ.

ಇತ್ತೀಚೆಗೆ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ವೇಳೆ ರಚಿನ್ ರವೀಂದ್ರ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಇತ್ತೀಚೆಗೆ ನಡೆದ ಐಪಿಎಲ್ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕ್ರಿಕೆಟಿಗ ರಿಂಕು ಸಿಂಗ್‌ ನಿಶ್ಚಿತಾರ್ಥ: ಕೈ ಹಿಡಿಯಲಿರುವ ಯುವತಿ ಹಿನ್ನೆಲೆ ಕೇಳಿದ್ರೆ ಶಾಕ್ ಆಗ್ತೀರಾ

French Open: ಯಾನಿಕ್‌ ಸಿನ್ನರ್‌- ಕಾರ್ಲೋಸ್‌ ಅಲ್ಕರಾಜ್‌ ಪೈಪೋಟಿಯಲ್ಲಿ ಯಾರಿಗೆ ಒಲಿಯಲಿದೆ ಫ್ರೆಂಚ್‌ ಓಪನ್‌ ಕಿರೀಟ

IPL 2025: ಆರ್‌ಸಿಬಿಗೆ ಐಪಿಎಲ್‌ ಕಿರೀಟ: ಇಡೀ ಗ್ರಾಮಕ್ಕೆ ಮಾಂಸದೂಟ ಹಾಕಿ ಸಂಭ್ರಮಿಸಿದ ಯುವಕರು

Norway Chess: ಮ್ಯಾಗ್ನಸ್ ಕಾರ್ಲ್‌ಸನ್ ಏಳನೇ ಬಾರಿ ಕಿರೀಟ: ಪ್ರಶಸ್ತಿ ರೇಸ್‌ನಲ್ಲಿದ್ದ ಗುಕೇಶ್‌ಗೆ ನಿರಾಸೆ

Chinnaswamy Stampede: ಕಾಲ್ತುಳಿತಕ್ಕೆ ಮತ್ತಷ್ಟು ವಿಕೆಟ್‌ ಪತನ: ಕೆಎಸ್‌ಸಿಎ ಪದಾಧಿಕಾರಿಗಳು ಗುಡ್‌ಬೈ

ಮುಂದಿನ ಸುದ್ದಿ
Show comments