Select Your Language

Notifications

webdunia
webdunia
webdunia
webdunia

ಕ್ಯಾಸಿನೋಗೆ ಭೇಟಿ ನೀಡಿ ಪಾಕ್ ಆಯ್ಕೆ ಸಮಿತಿ ಅದ್ಯಕ್ಷ ಮೋಯಿನ್ ಖಾನ್ ವಜಾಕ್ಕೆ ಪಿಸಿಬಿ ಸಿದ್ದತೆ

ಕ್ಯಾಸಿನೋಗೆ ಭೇಟಿ ನೀಡಿ ಪಾಕ್ ಆಯ್ಕೆ ಸಮಿತಿ ಅದ್ಯಕ್ಷ ಮೋಯಿನ್ ಖಾನ್ ವಜಾಕ್ಕೆ ಪಿಸಿಬಿ ಸಿದ್ದತೆ
ಕರಾಚಿ , ಶುಕ್ರವಾರ, 27 ಫೆಬ್ರವರಿ 2015 (17:12 IST)
ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ಪಂದ್ಯದ ಹಿಂದಿನ ರಾತ್ರಿ ಕ್ಯಾಸಿನೋಗೆ ಭೇಟಿ ನೀಡಿದ ಪಾಕ್ ಕೋಚ್ ಮೋಯಿನ್ ಖಾನ್ ಅವರನ್ನು ವಜಾಗೊಳಿಸುವ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಚಿಂತನೆ ನಡೆಸಿದೆ.
 
ಪ್ರಸಕ್ತ ವಾರಂತ್ಯಕ್ಕೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಅಧ್ಯಕ್ಷರನ್ನು ಮೋಯಿನ್ ಖಾನ್ ಭೇಟಿ ಮಾಡಲಿದ್ದಾರೆ, ಈ ಸಂದರ್ಭದಲ್ಲಿ ಪಿಸಿಬಿ ಅಧ್ಯಕ್ಷರು ಅವರಿಗೆ ರಾಜೀನಾಮೆ ನೀಡುವಂತೆ ಆದೇಶಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
 
ಏತನ್ಮಧ್ಯೆ, ಆಯ್ಕೆ ಸಮಿತಿ ಅದ್ಯಕ್ಷ ಮೋಯಿನ್ ಖಾನ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಪಾಕ್ ಕ್ರಿಕೆಟ್ ಬೋರ್ಡ್ ಸ್ಪಷ್ಟಪಡಿಸಿದ್ದರೂ ಅವರ ರಾಜೀನಾಮೆ ಪಿಸಿಬಿ ಪಡೆಯುವುದು ಖಚಿತ ಎಂದು ಮಾಜಿ ನಾಯಕರೊಬ್ಬರು ತಿಳಿಸಿದ್ದಾರೆ. 
 
ಮೋಯಿನ್ ಖಾನ್ ಅವರ ರಾಜೀನಾಮೆ ಪಡೆಯುವಂತೆ ಪಿಸಿಬಿ ಸದಸ್ಯರು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಶಹಾರ್ಯಾರ್‌ಗೆ ಭಾರಿ ಒತ್ತಡ ಹೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಮೋಯಿನ್ ಖಾನ್ ಅವರಿಗೆ ಕಾರ್ಯಕಾರಿ ಸಮಿತಿ ಅದ್ಯಕ್ಷ ಹಾಗೂ ಪಿಸಿಬಿಯ ಹಿರಿಯ ಸದಸ್ಯರಾಗಿರುವ ನಜಾಮ್ ಸೇಠಿಯವರ ಬೆಂಬಲವಿರುವುದರಿಂದ ಅವರ ರಾಜೀನಾಮೆ ಪಡೆಯುವುದು ಸುಲಭವಲ್ಲ ಎನ್ನುವುದು ಮತ್ತೊಂದು ಮೂಲಗಳ ಅಭಿಪ್ರಾಯವಾಗಿದೆ.
 

Share this Story:

Follow Webdunia kannada