Webdunia - Bharat's app for daily news and videos

Install App

ಸತತ 98 ಟೆಸ್ಟ್ ಪಂದ್ಯಗಳ ಬಳಿಕ ಬ್ರೇಕ್ ತೆಗೆದುಕೊಂಡ ಡಿ ವಿಲಿಯರ್ಸ್

Webdunia
ಗುರುವಾರ, 28 ಮೇ 2015 (12:56 IST)
ದಕ್ಷಿಣ ಆಫ್ರಿಕಾದ ಎ.ಬಿ. ಡಿವಿಲಿಯರ್ಸ್ ಅವರಿಂದ ಸತತ 98  ಟೆಸ್ಟ್  ಸ್ಟ್ರೀಕ್ ಕೊನೆಗೊಳ್ಳಲಿದ್ದು, ಜುಲೈನಲ್ಲಿ ಬಾಂಗ್ಲಾದೇಶದ ವಿರುದ್ಧ ಎರಡು ಪಂದ್ಯಗಳ ಸರಣಿಯಿಂದ ಅವರು ಹೊರಗುಳಿದಿದ್ದಾರೆ. ಪತ್ನಿ ಡೇನಿಯಲ್‌ ಅವರಿಗೆ ಪ್ರಥಮ ಮಗುವಿನ ಜನನಕ್ಕಾಗಿ ಡಿ ವಿಲಿಯರ್ಸ್ ಅವರಿಗೆ ರಜಾ ನೀಡಲಾಗಿದ್ದು, ಅವರ ಅನುಪಸ್ಥಿತಿಯಿಂದ ಸತತ 98 ಟೆಸ್ಟ್‌ಗಳ ಓಟಕ್ಕೆ ಬ್ರೇಕ್ ಬಿದ್ದಿದೆ. 
 
 ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಅಲನ್ ಬೋರ್ಡರ್ 153 ಸತತ ಅತೀ ಹೆಚ್ಚು ಟೆಸ್ಟ್ ಆಡಿದ ದಾಖಲೆ ಹೊಂದಿದ್ದು, ಅವರ ಬೆನ್ನ ಹಿಂದೆ ಇಂಗ್ಲೆಂಡ್ ನಾಯಕ ಅಲಸ್ಟೈರ್ ಕುಕ್ 111, ಆಸ್ಟ್ರೇಲಿಯಾ ಮಾರ್ಕ್ ವಾಘ್ 107 ಮತ್ತು ಸುನಿಲ್ ಗವಾಸ್ಕರ್ 106 ಟೆಸ್ಟ್ ಆಡಿದ ದಾಖಲೆ ಹೊಂದಿದ್ದಾರೆ.
 
 ಜುಲೈ 21ರಿಂದ ಆರಂಭವಾಗುವ ಟೆಸ್ಟ್ ಸರಣಿಯಲ್ಲಿ 15 ಆಟಗಾರರ ತಂಡಕ್ಕೆ ಕೆಲವು ಬದಲಾವಣೆಗಳನ್ನು ದಕ್ಷಿಣ ಆಫ್ರಿಕಾ ಮಾಡಿದೆ.  ಅಲ್ವಿರೋ ಪೀಟರ್‌ಸನ್ ನಿವೃತ್ತಿ ಮತ್ತು ಡಿ ವಿಲಿಯರ್ಸ್ ಅನುಪಸ್ಥಿತಿಯಿಂದಾಗಿ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಸಿಎಸ್‌ಎ ಆಯ್ಕೆ ಸಂಚಾಲಕ ಆಂಡ್ರಿವ್ ಹಡ್ಸನ್ ತಿಳಿಸಿದ್ದಾರೆ. 
 
 ಏತನ್ಮಧ್ಯೆ, ವೇಗಿಗಳಾದ ಡೇಲ್ ಸ್ಟೈನ್ ಮತ್ತು ಫಿಲಾಂಡರ್ ಅವರಿಗೆ ಜುಲೈ 10ರಿಂದ ಆರಂಭವಾಗುವ ಮೂರು ಏಕದಿನ ಸರಣಿಗೆ ವಿರಾಮ ನೀಡಲಾಗಿದ್ದು, ಅವರ ಬದಲಿಗೆ ಕ್ರಿಸ್ ಮೋರಿಸ್ ಮತ್ತು ರಯಾನ್ ಮೆಕ್‌ಲಾರೆನ್ ಅವರನ್ನು ತರಲಾಗಿದೆ. 
 
ಟಿ20 ತಂಡದಲ್ಲಿ ಲೆಗ್ ಸ್ಪಿನ್ನರ್ ಎಡ್ಡೀ ಲೀ ಮಾತ್ರ ಹೊಸಬರಾಗಿದ್ದರೆ, ಸ್ಟೈನ್, ಮಾರ್ಕೆಲ್ ಮತ್ತು ಇಮ್ರಾನ್ ತಾಹಿರ್ ಮುಂತಾದ ಹಿರಿಯ ಆಟಗಾರರಿಗೆ ರೆಸ್ಟ್ ನೀಡಲಾಗಿದೆ. 
 ಮುಂದಿನ ವರ್ಷ ಐಸಿಸಿ ವಿಶ್ವ ಟ್ವೆಂಟಿ 20 ಪಂದ್ಯಾವಳಿ ಭಾರತದಲ್ಲಿ ನಡೆಯುವುದರಿಂದ ಉಪಖಂಡದ ಪರಿಸ್ಥಿತಿಗಳಿಗೆ ತಕ್ಕಂತೆ ಬೌಲಿಂಗ್ ಆಯ್ಕೆಗಳನ್ನು ನಾವು ಪರಿಶೀಲಿಸಬೇಕಾಗಿದೆ ಎಂದು ಹಡ್ಸನ್ ಹೇಳಿದರು. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments