Webdunia - Bharat's app for daily news and videos

Install App

ಸಚಿನ್ ಉದಾಹರಣೆ ಬಳಸಿಕೊಂಡ ಮಾರ್ಗನ್‌‌ ಅಣಕಕ್ಕೆ ಪಾಕ್ ಪತ್ರಕರ್ತ ತಿರುಗೇಟು

Webdunia
ಶುಕ್ರವಾರ, 26 ಆಗಸ್ಟ್ 2016 (13:16 IST)
ಭಾರತದ ರಿಯೊ ಒಲಿಂಪಿಕ್ಸ್ ಸಾಧನೆ ಕುರಿತು ಕಾಮೆಂಟ್ ಮಾಡಿದ ಬಳಿಕ ಬ್ರಿಟಿಷ್ ಪತ್ರಕರ್ತ ಪಿಯರ್ಸ್ ಮಾರ್ಗನ್ ಸುದ್ದಿಯಲ್ಲಿದ್ದಾರೆ. ಕೇವಲ ಎರಡು ಪದಕಗಳನ್ನು ಗೆದ್ದಿದ್ದರೂ ಭಾರತದಲ್ಲಿ ವ್ಯಾಪಕ ಸಂಭ್ರಮಾಚರಣೆ ವೀಕ್ಷಿಸುವುದು ಮುಜುಗರ ಉಂಟುಮಾಡುತ್ತದೆಂದು ಹೇಳಿದ್ದರು.
  
ಕ್ರಿಕೆಟ್ ಅಭಿಯಾನಿಯಾಗಿರುವ ಪಿಯರ್ಸ್ ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಸಚಿನ್ ತೆಂಡೂಲ್ಕರ್ ಉದಾಹರಣೆ ನೀಡಿದರು. ಸಚಿನ್ ಅವರಷ್ಟು ಅದ್ಭುತವಾದ ಬ್ಯಾಟ್ಸ್‌ಮನ್ ತಯಾರಿಸಲು ಭಾರತಕ್ಕೆ ಸಾಧ್ಯವಾದರೆ, ಅದು ಚಿನ್ನದ ಪದಕ ವಿಜೇತ ಒಲಿಂಪಿಯನ್ನರನ್ನು ತಯಾರಿಸಬಹುದು. ಅದಕ್ಕೆ ಬಂಡವಾಳ ಮತ್ತು ಗಮನ ಅಗತ್ಯವಾಗಿದೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದರು.

ಸ್ವಾಭಾವಿಕವಾಗಿ ಅವರ ಪ್ರತಿಕ್ರಿಯೆ ಭಾರತದ ಟ್ವಿಟರಿಗರನ್ನು ಕೆರಳಿಸಿದೆ. ವೀರೇಂದ್ರ ಸೆಹ್ವಾಗ್, ಚೇತನ್ ಭಗತ್ ಸೇರಿದಂತೆ ಬಹುತೇಕ ಎಲ್ಲರೂ ಪಿಯರ್ಸ್ ವಿರುದ್ಧ ಟ್ವಿಟರ್‌ ಮೂಲಕ ವಾಗ್ದಾಳಿ ಮಾಡಿದ್ದರು. 
 
ಅಚ್ಚರಿಯೆಂದರೆ, ಭಾರತದ ಪರ ವಾದಿಸಿದವರಲ್ಲಿ ಪಾಕಿಸ್ತಾನಿ ಪತ್ರಕರ್ತ ಮತ್ತು ಸಂಖ್ಯಾಶಾಸ್ತ್ರಜ್ಞ ಮಜೆರ್ ಅರ್ಷದ್ ಸೇರಿದ್ದಾರೆ. 
 ಚಿನ್ನದ ಪದಕ ಗೆದ್ದ ರಾಷ್ಟ್ರಗಳು ಉದಾಹರಣೆಗೆ ಅಮೆರಿಕ ಮತ್ತು ಚೀನಾ ಸಚಿನ್ ಅವರಂಥ ಮನೋಜ್ಞ ಬ್ಯಾಟ್ಸ್‌ಮನ್ ತಯಾರಿಸುವುದಕ್ಕೆ ಸಾಧ್ಯವಿಲ್ಲವೇ ಎಂದು ತಮಗೆ ಆಶ್ಚರ್ಯವಾಗಿರುವುದಾಗಿ ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments