Select Your Language

Notifications

webdunia
webdunia
webdunia
webdunia

ರಾಜಕೀಯಕ್ಕೆ ಸೇರಲು ಪಾಕ್ ಕ್ರಿಕೆಟರ್ ಶಾಹಿದ್ ಅಫ್ರಿದಿ ಇಚ್ಛೆ

ರಾಜಕೀಯಕ್ಕೆ ಸೇರಲು ಪಾಕ್ ಕ್ರಿಕೆಟರ್ ಶಾಹಿದ್ ಅಫ್ರಿದಿ ಇಚ್ಛೆ
ನವದೆಹಲಿ: , ಸೋಮವಾರ, 11 ಜುಲೈ 2016 (17:31 IST)
ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ವಿನಾಶಕಾರಿ ಬ್ಯಾಟ್ಸ್‌ಮನ್ ಮತ್ತು ಪಾಕ್ ಮಾಜಿ ನಾಯಕ ಶಾಹಿದಿ ಅಫ್ರಿದಿ ದೇಶದ ಜನರ ಸೇವೆ ಸಲ್ಲಿಸಲು ರಾಜಕೀಯಕ್ಕೆ ಪ್ರವೇಶಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ನನಗೆ ರಾಜಕೀಯಕ್ಕೆ ಸೇರುವ ಇಚ್ಛೆಯಿದೆ. ಆದರೂ ಕೆಲವು ಹಿತಚಿಂತಕರು ರಾಜಕೀಯಕ್ಕೆ ಸೇರುವ ವಿರುದ್ಧ ನನಗೆ ಸಲಹೆ ಮಾಡಿದ್ದಾರೆ ಎಂದು ಅಫ್ರಿದಿ ಹೇಳಿದ್ದಾರೆ.

ಆದರೆ ನನ್ನ ದೃಷ್ಟಿಯಲ್ಲಿ ರಾಜಕಾರಣಿಯು ಜನರ ಸೇವಕರಾಗಿದ್ದು ಅವರು ಜನರ ಸೇವೆ ನೀಡಬೇಕು ಎಂದು ಅಫ್ರಿದಿ ಬಿಬಿಸಿ ಉರ್ದುಗೆ ತಿಳಿಸಿದರು.
 
ಆದರೆ ತಾವು ಪಾಕಿಸ್ತಾನದ ಟಿ 20ಗೆ ಆಡುವುದನ್ನು ಮುಂದುವರಿಸುವುದಾಗಿ 36 ವರ್ಷದ ಹಿರಿಯ ಆಟಗಾರ ಸ್ಪಷ್ಟಪಡಿಸಿದರು. ರಾಷ್ಟ್ರೀಯ ಅಥವಾ ಸ್ಥಳೀಯ ಮಟ್ಟದ ಅಥವಾ ಲೀಗ್ ಪಂದ್ಯವಾಗಿರಲಿ,  ನಾನು ಆಟಕ್ಕೆ ಫಿಟ್ ಆಗಿದ್ದೇನೆಂದು ಭಾವಿಸಿರುವುದಾಗಿ ಅಫ್ರಿದಿ ಹೇಳಿದರು. ಶಾಹಿದ್ ಅಫ್ರಿದಿ ಪ್ರತಿಷ್ಠಾನದ ಮೂಲಕ ದುರ್ಬಲ ವರ್ಗದ ಮಕ್ಕಳಿಗೆ ಶಾಲೆಯನ್ನು ಸ್ಥಾಪಿಸಲು ಆಸಕ್ತಿಹೊಂದಿರುವುದಾಗಿ ಆಲ್ ರೌಂಡರ್ ಬಹಿರಂಗ ಮಾಡಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ವಿಂಡೀಸ್ ಬೌಲರ್‌‍ಗಳನ್ನು ಎದುರಿಸಲು ಗವಾಸ್ಕರ್‌ಗೆ ಬೇಕಿತ್ತು ಗ್ಲುಕೋಸ್ ಬಿಸ್ಕತ್ತುಗಳು