Select Your Language

Notifications

webdunia
webdunia
webdunia
webdunia

ಭಾರತಕ್ಕೆ ತೆರಳಿ ಪಾಕಿಸ್ತಾನ ಸರಣಿ ಆಡುವುದಿಲ್ಲ : ಶಹರ್ ಯಾರ್ ಖಾನ್

ಭಾರತಕ್ಕೆ ತೆರಳಿ ಪಾಕಿಸ್ತಾನ ಸರಣಿ ಆಡುವುದಿಲ್ಲ : ಶಹರ್ ಯಾರ್ ಖಾನ್
ಇಸ್ಲಾಮಾಬಾದ್ , ಗುರುವಾರ, 27 ಆಗಸ್ಟ್ 2015 (20:56 IST)
ಡಿಸೆಂಬರ್‌ನಲ್ಲಿ ಭಾರತದಲ್ಲಿ  ಸ್ವದೇಶಿ ಸರಣಿ ಆಡುವಂತೆ ಐಸಿಸಿ ಅಧ್ಯಕ್ಷ ಜಹೀರ್ ಅಬ್ಬಾಸ್ ಸಲಹೆಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಳ್ಳಿಹಾಕಿದೆ.  ವರ್ಷಾಂತ್ಯದಲ್ಲಿ ಪಾಕಿಸ್ತಾನವು ಭಾರತಕ್ಕೆ ಹೋಗಿ ಹೋಮ್ ಸೀರೀಸ್ ಆಡುವ ಪ್ರಶ್ನೆಯೇ ಇಲ್ಲ ಎಂದು ಪಿಸಿಬಿ ಅಧ್ಯಕ್ಷ ಶಹರ್‌ಯಾರ್ ಖಾನ್ ಬುಧವಾರ ಹೇಳಿದರು.

 ನಾವು ಭಾರತಕ್ಕೆ ಸ್ವದೇಶಿ ಸರಣಿಯನ್ನು ಆಡಲು ಹೋಗುವುದಿಲ್ಲ. ಯೋಜಿತ ಸರಣಿಯ ಬಗ್ಗೆ ಭಾರತ ಕ್ರಿಕೆಟ್ ಮಂಡಳಿಗೆ ಈ ವಾರ ಪತ್ರವೊಂದನ್ನು ಕಳಿಸಿ ಸ್ಪಷ್ಟ ನಿಲುವನ್ನು ಕೇಳುತ್ತೇನೆ ಎಂದು ಖಾನ್ ಹೇಳಿದರು. 
 
 ಭಾರತದ ವಿರುದ್ಧ ಎರಡು ಸರಣಿಗಳು ಬಾಕಿವುಳಿದಿದ್ದು, ಡಿಸೆಂಬರ್‌ನಲ್ಲಿ ಯುಎಇನಲ್ಲಿ ಖಂಡಿತವಾಗಿ ಸರಣಿ ಆಡುತ್ತೇವೆ ಎಂದು ಖಾನ್ ಹೇಳಿದರು.  ಮಾಜಿ ನಾಯಕ ಜಹೀರ್ ಅಬ್ಬಾಸ್ ಲಾಹೋರ್‌ನಲ್ಲಿ ಮಾಧ್ಯಮದ ಜತೆ ಮಾತನಾಡುತ್ತಾ, ಪಾಕಿಸ್ತಾನವು ಹಠಮಾರಿ ನಿಲುವು ಹೊಂದಬಾರದು. ಕ್ರಿಕೆಟ್ ಸುಧಾರಣೆಗೆ ಮತ್ತು ಭಾರತ-ಪಾಕ್ ಕ್ರಿಕೆಟ್ ಸಂಬಂಧ ಚೇತರಿಕೆಗೆ ಡಿಸೆಂಬರ್‌ನಲ್ಲಿ ಪಾಕ್ ಭಾರತಕ್ಕೆ ತೆರಳಿ ಆಡಬೇಕು ಎಂದು ಸಲಹೆ ಮಾಡಿದ್ದರು. 

Share this Story:

Follow Webdunia kannada