Webdunia - Bharat's app for daily news and videos

Install App

ಪಾಕ್ ಆಟಗಾರರಿಗೆ ಇಂಗ್ಲೆಂಡ್‌ನಲ್ಲಿ ಪ್ರಯಾಸ: ಸಲೀಂ ಮಲಿಕ್ ಭಾವನೆ

Webdunia
ಬುಧವಾರ, 15 ಜೂನ್ 2016 (11:42 IST)
ಪಾಕಿಸ್ತಾನ ತಂಡವು ಈ ತಿಂಗಳಾಂತ್ಯದಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಉತ್ತಮ ಪ್ರದರ್ಶನ ನೀಡಲು ಪ್ರಯಾಸ ಪಡಬೇಕಾಗುತ್ತದೆ ಎಂದು ಪಾಕಿಸ್ತಾನದ ಮಾಜಿ ನಾಯಕ ಸಲೀಂ ಮಲಿಕ್ ಭಾವಿಸಿದ್ದಾರೆ. ಈ ಅವಧಿಯಲ್ಲಿ ಪಾಕಿಸ್ತಾನವು ನಾಲ್ಕು ಟೆಸ್ಟ್ ಪಂದ್ಯಗಳನ್ನು ಮತ್ತು ಐದು ಏಕ ದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ.  103 ಟೆಸ್ಟ್ ಪಂದ್ಯಗಳು ಮತ್ತು 283 ಏಕದಿನ ಪಂದ್ಯಗಳೊಂದಿಗೆ ಪಾಕಿಸ್ತಾನದ ಟಾಪ್ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲಾದ ಮಲಿಕ್, ಇಂಗ್ಲೆಂಡ್‌ನಲ್ಲಿ ಪಾಕ್ ತಂಡ ಹೇಗೆ ಪ್ರದರ್ಶನ ನೀಡುತ್ತದೆ ಎನ್ನುವುದೇ ಚಿಂತೆಯಾಗಿರುವುದಾಗಿ ತಿಳಿಸಿದರು. 
 
 ಸಾಂಪ್ರದಾಯಿಕವಾಗಿ ಏಷ್ಯಾ ತಂಡಗಳು ಇಂಗ್ಲೀಷ್ ಸ್ಥಿತಿಗತಿಗಳಲ್ಲಿ ಮತ್ತು ಪಿಚ್‌ಗಳಲ್ಲಿ ಆಡುವುದಕ್ಕೆ ಪ್ರಯಾಸ ಪಡುತ್ತವೆ. ಪಾಕಿಸ್ತಾನದ ಸಮಸ್ಯೆಯೇನೆಂದರೆ ಕಳೆದ ಕೆಲವು ವರ್ಷಗಳಿಂದ ಯುಎಇನಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾದ ಪಿಚ್‌ಗಳಲ್ಲಿ ಹೆಚ್ಚಾಗಿ ಆಡುತ್ತಿದ್ದು, ಅಲ್ಲಿ ಚೆಂಡು ಹೆಚ್ಚು ಸ್ವಿಂಗ್ ಅಥವಾ ಸ್ಪಿನ್ ಆಗುವುದಿಲ್ಲ ಎಂದು ಮಲಿಕ್ ಹೇಳಿದರು. 
 
ಆದ್ದರಿಂದಲೇ ಇಂಗ್ಲೆಂಡ್ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ನಮ್ಮ ಆಟಗಾರರು ಪ್ರಯಾಸ ಪಡಬೇಕಾಗುತ್ತದೆ ಎಂದು ಮಲಿಕ್ ಹೇಳಿದರು. 
 
 ಯುಎಇನಲ್ಲಿ ಫ್ಲಾಟ್ ಪಿಚ್‌ಗಳಲ್ಲಿ ಆಡುವುದು ಅಭ್ಯಾಸವಾದ ಪಾಕ್ ಆಟಗಾರರು ಮುಂಚಿತವಾಗಿಯೇ ಫ್ರಂಚ್ ಫೂಟ್ ಆಡುತ್ತಾರೆ. ಆದರೆ ಚೆಂಡಿನ ಚಲನವಲನವಿರುವ ಪಿಚ್‌ಗಳಲ್ಲಿ ಇದು ನಮ್ಮ ಬ್ಯಾಟ್ಸ್‌ಮನ್‌ಗಳಿಗೆ ಸಾವಿನ ಬಲೆಯಾಗಿರುತ್ತದೆ. ಇಂಗ್ಲೆಂಡ್‌ನಲ್ಲಿ ಯಶಸ್ವಿಯಾಗಬೇಕಾದರೆ ನೀವು ಲೇಟ್ ಕಟ್ ಆಡಬೇಕಾಗುತ್ತದೆ ಎಂದರು. 
 
ಇಂಗ್ಲೆಂಡ್‌ನಲ್ಲಿ ತಂಡದ ಪ್ರದರ್ಶನಗಳ ಬಗ್ಗೆ ಕಾಳಜಿ ಹೊಂದಿರುವ ಟಾಪ್ ಪಾಕಿಸ್ತಾನಿ ಬ್ಯಾಟ್ಸ್‌ಮನ್‌ಗಳಲ್ಲಿ ಮಲಿಕ್ ಮಾತ್ರವಲ್ಲ. ಇಂಗ್ಲೀಷ್ ವೇಗದ ದಾಳಿಯನ್ನು ನಿಭಾಯಿಸಲು ಬ್ಯಾಟ್ಸ್‌ಮನ್‌ಗಳು ಬೇಗನೇ ಹೊಂದಿಕೊಳ್ಳುತ್ತಾರೆಂದು ಮುಹಮ್ಮದ್ ಯುಸುಫ್ ಕೂಡ ಆಶಿಸಿದ್ದಾರೆ. ಇಂಗ್ಲೆಂಡ್ ಪಾಕಿಸ್ತಾನದ ವಿರುದ್ಧ ಟೆಸ್ಟ್ ಪಂದ್ಯಗಳಿಗೆ ಇಬ್ಬರು ಟಾಪ್  ಬೌಲರುಗಳನ್ನು  ಫ್ರೆಶ್ ಆಗಿ ಇರಿಸಿರುವುದು ಪಾಕಿಸ್ತಾನಕ್ಕೆ ಅಗ್ನಿಪರೀಕ್ಷೆಯಾಗಿರುವುದನ್ನು ಸೂಚಿಸುತ್ತದೆ ಎಂದು ಮಲಿಕ್ ಹೇಳಿದರು. 

ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಆಜೀವ ನಿಷೇಧ ಶಿಕ್ಷೆಗೊಳಗಾದ ಸಲೀಂ ಪಾಕ್ ಮಂಡಳಿಯ ಜತೆ ಕೋಚಿಂಗ್ ಹುದ್ದೆಯನ್ನು ಕೈಗೆತ್ತಿಕೊಳ್ಳುವ ಆಸಕ್ತಿ ಹೊಂದಿದ್ದಾರೆ. ಕೋರ್ಟ್ ಆಜೀವ ನಿಷೇಧದಿಂದ ತಮ್ಮನ್ನು ದೋಷಮುಕ್ತಿಗೊಳಿಸಿದರೂ ಮಂಡಳಿ ಸ್ಪಷ್ಟ ಹೇಳಿಕೆಯನ್ನು ನೀಡಿಲ್ಲ ಎಂದು ಸಲೀಂ ಹೇಳಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಮತ್ತೆ ಟಾಸ್ ಗೆದ್ದ ಇಂಗ್ಲೆಂಡ್, ಟೀಂ ಇಂಡಿಯಾದಲ್ಲಿ ಬದಲಾವಣೆ

ಆಂಗ್ಲರ ನಾಡಿನಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗ ಚಾರಿತ್ರಿಕ ಸಾಧನೆ: ಭಾರತಕ್ಕೆ ಚೊಚ್ಚಲ ಟಿ20 ಸರಣಿ

Viral video: ಈ ಹುಡುಗನ ಬೌಲಿಂಗ್ ಗೆ ನೀವೂ ಫಿದಾ ಆಗ್ಲೇಬೇಕು

IND vs ENG: ವೇಗದ ಪಿಚ್ ಗೆ ವೇಗದ ಠಕ್ಕರ್ ಕೊಡಲು ರೆಡಿಯಾದ ಟೀಂ ಇಂಡಿಯಾ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಸೆಂಚುರಿ ಮೇಲೆ ಸೆಂಚುರಿ ಹೊಡೆದ ಶುಭಮನ್ ಗಿಲ್‌ಗೆ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಭರ್ಜರಿ ಬಡ್ತಿ

ಮುಂದಿನ ಸುದ್ದಿ
Show comments