Select Your Language

Notifications

webdunia
webdunia
webdunia
webdunia

ಸಸೆಕ್ಸ್ ವಿರುದ್ಧ ಪಾಕಿಸ್ತಾನ: ಅಜರ್ ಅಲಿ ಶತಕ, ಪಾಕ್ 363ಕ್ಕೆ 5

ಸಸೆಕ್ಸ್ ವಿರುದ್ಧ ಪಾಕಿಸ್ತಾನ: ಅಜರ್ ಅಲಿ ಶತಕ, ಪಾಕ್ 363ಕ್ಕೆ 5
ಲಂಡನ್: , ಶನಿವಾರ, 9 ಜುಲೈ 2016 (19:43 IST)
ಮುಂದಿನ ವಾರ ಇಂಗ್ಲೆಂಡ್ ವಿರುದ್ಧ ನಡೆಯುವ ಮೊದಲ ಟೆಸ್ಟ್‌ಗೆ ಮುನ್ನ ಪಾಕಿಸ್ತಾನದ ಅಜರ್ ಅಲಿ ಅವರ ಬ್ಯಾಟಿಂಗ್‌ನಲ್ಲಿ ಉತ್ತಮ ಫಾರಂ ಪಾಕ್‌ಗೆ ಪರಿಪೂರ್ಣ ಚೈತನ್ಯ ತುಂಬಿಸಿದೆ. ಸಾಮರ್‌ಸೆಟ್ ಜತೆ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 101 ರನ್ ದಾಖಲಿಸಿದ್ದ ಅಜರ್ ಅಲಿ ಬಲಿಷ್ಠವಲ್ಲದ ಎರಡನೇ ವಿಭಾಗದ ಕೌಂಟಿ ತಂಡದ ವಿರುದ್ಧ 145 ರನ್ ಗಳಿಸಿದ್ದು, ಪ್ರವಾಸಿ ತಂಡ ಮೊದಲ ದಿನದಾಟ ಮುಗಿದಾಗ 363ಕ್ಕೆ 5 ವಿಕೆಟ್ ಗಳಿಸಿತ್ತು.

ಹಿರಿಯರಾದ ಯೂನಿಸ್ ಖಾನ್ ಮತ್ತು ಮಿಷಬ್ ಉಲ್ ಹಕ್ ಅರ್ಧಶತಕಗಳನ್ನು ಗಳಿಸಿದರು. ಚೊಚ್ಚಲ ಪೇಸ್ ಬೌಲರ್ ಜೋಫ್ರಾ ಆರ್ಕರ್ 49ಕ್ಕೆ 4 ವಿಕೆಟ್‌ಗಳೊಂದಿಗೆ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿದರು. 
 
21 ವರ್ಷದ ವೆಸ್ಟ್ ಇಂಡಿಯನ್ ಬೌಲರ್ ಆರಂಭದಲ್ಲಿ 2 ವಿಕೆಟ್ ಕಬಳಿಸಿ ಪಾಕಿಗಳನ್ನು ತೊಂದರೆಯಲ್ಲಿ ಸಿಕ್ಕಿಸಿದ್ದರು. ಆದರೆ ಅಲಿ ಮತ್ತು ಯೂನಿಸ್ ನಡುವೆ ಮೂರನೇ ವಿಕೆಟ್ ಜತೆಯಾಟದಿಂದ ಪಾಕಿಸ್ತಾನದ ಪರ ಪಂದ್ಯ ತಿರುಗಿತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದಾಖಲೆಯ 1009 ರನ್ ಸಿಡಿಸಿದ ಪ್ರಣವ್ ಧನವಾಡೆ ಸಾಧನೆ ಹೇಗಿದೆ?