Select Your Language

Notifications

webdunia
webdunia
webdunia
webdunia

6 ವರ್ಷಗಳ ನಂತರದ ಸ್ವದೇಶಿ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಜಯ

6 ವರ್ಷಗಳ ನಂತರದ ಸ್ವದೇಶಿ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಜಯ
ಇಸ್ಲಾಮಾಬಾದ್ , ಶನಿವಾರ, 23 ಮೇ 2015 (11:28 IST)
ಅಂತಾರಾಷ್ಟ್ರೀಯ ಟ್ವೆಂಟಿ 20 ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 5 ವಿಕೆಟ್‌ಗಳಿಂದ ಜಯಗಳಿಸುವ ಮೂಲಕ ಪಾಕಿಸ್ತಾನ 6 ವರ್ಷಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ವಾಪಸಾತಿಯನ್ನು ಸಂಭ್ರಮದಿಂದ ಆಚರಿಸಿದೆ. 2009ರಲ್ಲಿ ಶ್ರೀಲಂಕಾ ತಂಡದ ಬಸ್ ಮೇಲೆ ಲಾಹೋರ್‌ನಲ್ಲಿ ಭಯೋತ್ಪಾದಕರು ದಾಳಿ ಮಾಡಿದ ಬಳಿಕ ಪಾಕಿಸ್ತಾನ ಕಳೆದ 6 ವರ್ಷಗಳಿಂದ ಯಾವುದೇ ಅಂತಾರಾಷ್ಟ್ರೀಯ ಪಂದ್ಯಕ್ಕೆ ಆತಿಥ್ಯ ವಹಿಸಿಲ್ಲ.

ಶುಕ್ರವಾರ 4000 ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಿದ್ದರು. ಆದರೆ 27,000 ಸಾಮರ್ಥ್ಯದ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. 
 
 ಆರಂಭಿಕ ಆಟಗಾರ ಮುಕ್ತರ್ ಅಹ್ಮದ್ ತಮ್ಮ ಚೊಚ್ಚಲ ಅರ್ಧಶತಕವನ್ನು ಬಾರಿ 45 ಎಸೆತಗಳಲ್ಲಿ 84 ರನ್ ಚಚ್ಟಿದರು. ಅವರ ಸ್ಕೋರಿನಲ್ಲಿ 12 ಬೌಂಡರಿ ಮತ್ತು 6 ಸಿಕ್ಸರ್‌ಗಳಿತ್ತು. ಈ ಮೂಲಕ ಪಾಕಿಸ್ತಾನ 19.3 ಓವರುಗಳಲ್ಲಿ ಜಿಂಬಾಬ್ವೆ ಸ್ಕೋರನ್ನು ಮುಟ್ಟಿ ಜಯಗಳಿಸುವ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

 ಜಿಂಬಾಬ್ವೆ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್‌ಗೆ ಇಳಿದಾಗ, ಓಪನರ್ ಹ್ಯಾಮಿಲ್ಟನ್ ಮಸಾಕಾಡಾ 27 ಎಸೆತಗಳಲ್ಲಿ ಬಿರುಸಿನ 43 ರನ್ ಚಚ್ಚಿದರು. ಚಿಗುಂಬರಾ ಕೂಡ ಉತ್ತಮ ಬ್ಯಾಟಿಂಗ್ ಆಡಿ 35 ಎಸೆತಗಳಲ್ಲಿ 54 ರನ್ ಬಾರಿಸಿದರು. ಪಾಕಿಸ್ತಾನದ ವೇಗಿ ಮೊಹಮದ್ ಸಮಿ ಮೂರು ವಿಕೆಟ್ ಕಬಳಿಸಿದರು.ಎರಡನೇ ಟ್ವೆಂಟಿ 20 ಪಂದ್ಯವನ್ನು ಭಾನುವಾರ ಆಡಲಾಗುತ್ತಿದ್ದು, ಮೇ 26, 29 ಮತ್ತು 31ರಂದು ಮೂರು ಅಂತಾರಾಷ್ಟ್ರೀಯ ಪಂದ್ಯಗಳನ್ನು ಲಾಹೋರ್‌ನಲ್ಲಿ ಆಡಲಾಗುತ್ತದೆ. 

Share this Story:

Follow Webdunia kannada