Select Your Language

Notifications

webdunia
webdunia
webdunia
webdunia

ಉಲ್ಟಾ ಹೊಡೆದ ಪಿಸಿಬಿ, ಪಾಕಿಸ್ತಾನ ಸೂಪರ್‌ಲೀಗ್‌ನಲ್ಲಿ ಭಾರತೀಯರಿಗೆ ಅವಕಾಶ

ಉಲ್ಟಾ ಹೊಡೆದ ಪಿಸಿಬಿ, ಪಾಕಿಸ್ತಾನ ಸೂಪರ್‌ಲೀಗ್‌ನಲ್ಲಿ ಭಾರತೀಯರಿಗೆ ಅವಕಾಶ
ಇಸ್ಲಾಮಬಾದ್ , ಮಂಗಳವಾರ, 13 ಅಕ್ಟೋಬರ್ 2015 (14:17 IST)
ಭಾರತದ ವಿರುದ್ಧ ಡಿಸೆಂಬರ್‌ನ ದ್ವಿಪಕ್ಷೀಯ ಸರಣಿ ಆಡುವ ಬಗ್ಗೆ ಪಿಸಿಬಿಗೆ ಖಚಿತತೆ ಇಲ್ಲದಿರುವ ನಡುವೆ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಭಾರತೀಯ ಆಟಗಾರರನ್ನು ಸೇರಿಸಿಕೊಳ್ಳುವ ಐಡಿಯಾ ಬಗ್ಗೆ ತೆರೆದಮನಸ್ಸು ಹೊಂದಿದೆ. ಮುಂದಿನ ಫೆಬ್ರವರಿಯಲ್ಲಿ ಪಾಕಿಸ್ತಾನದ  ಐಪಿಎಲ್ ಮಾದರಿಯ ಸರಣಿಯಲ್ಲಿ  ಭಾರತೀಯ ಆಟಗಾರರಿಗೆ ಅವಕಾಶ ನೀಡುವುದನ್ನು ತಳ್ಳಿಹಾಕಿತ್ತು.

ಆದರೆ ಈಗ ಉಲ್ಟಾ ಹೊಡೆದಿರುವ ಪಿಸಿಬಿ ಎಕ್ಸಿಕ್ಯೂಟಿವ್ ಸಮಿತಿ ಮುಖ್ಯಸ್ಥ ನಜಾಮ್ ಸೇಥಿ ಭಾರತೀಯ ಆಟಗಾರರ ಉಪಸ್ಥಿತಿಯು ಪಾಕಿಸ್ತಾನ ಕ್ರಿಕೆಟ್ ಲೀಗನ್ನು ಐಪಿಎಲ್ ಬಳಿಕ ಎರಡನೇ ಅತೀ ದೊಡ್ಡ ಲೀಗ್ ಆಗಿಸುತ್ತದೆ ಎಂದು ಆಶಿಸಿದ್ದಾರೆ. 
 
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಡಿಸೆಂಬರ್‌ನಲ್ಲಿ ಯುಎಇ ಪೂರ್ಣ ಸರಣಿಗೆ ಭಾರತದ ಜತೆ ಆಡುವ ಹತಾಶ ಪ್ರಯತ್ನ ಮಾಡಿತ್ತು . ಪಾಕಿಸ್ತಾನವು ಅಕ್ಟೋಬರ್ ಅಂತ್ಯದವರೆಗೆ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಕಾಯುತ್ತದೆ ಎಂದು ಪಿಸಿಬಿ ಅಧ್ಯಕ್ಷ ಶಹರ್ ಯಾರ್ ಖಾನ್ ಇತ್ತೀಚೆಗೆ ಹೇಳಿದ್ದರು.
 
 ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಜತೆ ಪಂದ್ಯವಾಡುವುದಕ್ಕೆ ನಿಷೇಧ ವಿಧಿಸುವ ಸುಳಿವನ್ನು ಕೂಡ ಪಾಕಿಸ್ತಾನ ನೀಡಿತ್ತು.  ಆದರೆ ಈಗ ಪಿಎಸ್‌ಎಲ್‌ಗೆ ಭಾರತೀಯ ಆಟಗಾರರನ್ನು ಆಹ್ವಾನಿಸುವ ಸೇಥಿ ಯೋಜನೆಯು ಪಾಕಿಸ್ತಾನವು ಪುನಃ ಐಪಿಎಲ್‌ನಲ್ಲಿ ಆಡಲು ಅವಕಾಶ ಮಾಡಿಕೊಡುವ ಗುರಿಹೊಂದಿದೆ.  2008ರ ಐಪಿಎಲ್ ಉದ್ಘಾಟನಾ ಆವೃತ್ತಿಯ ಬಳಿಕ ಬಿಸಿಸಿಐ ಪಾಕಿಸ್ತಾನದ ಆಟಗಾರರಿಗೆ ಬಾಗಿಲು ಮುಚ್ಚಿತ್ತು. 
 
 ಕಮ್ರಾನ್ ಅಕ್ಮಲ್, ಸೊಹೈಲ್ ತನ್ವೀರ್ ಮತ್ತು ಯುನಿಸ್ ಖಾನ್ ಶೇನ್ ವಾರ್ನ್ ಅವರ ಐಪಿಎಲ್ ವಿಜೇತ ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದರು.  ಆದರೆ ಮುಂಬೈ ಭಯೋತ್ಪಾದನೆ ದಾಳಿಯ ಬಳಿಕ ಪಾಕಿಸ್ತಾನ ಆಟಗಾರನ್ನು ತಂಡದ ಮಾಲೀಕರುಗಳು ದೂರವಿರಿಸಿದರು. 
 

Share this Story:

Follow Webdunia kannada