Select Your Language

Notifications

webdunia
webdunia
webdunia
webdunia

ಭಾರತದಲ್ಲಿ ಕ್ರಿಕೆಟ್ ಸರಣಿಯ ಪುನಾರಂಭಕ್ಕೆ ಪಿಸಿಬಿ ನಿರಾಕರಣೆ

ಭಾರತದಲ್ಲಿ ಕ್ರಿಕೆಟ್ ಸರಣಿಯ ಪುನಾರಂಭಕ್ಕೆ ಪಿಸಿಬಿ ನಿರಾಕರಣೆ
ಇಸ್ಲಮಾಬಾದ್ , ಸೋಮವಾರ, 25 ಮೇ 2015 (11:26 IST)
ಭಾರತದ ವಿರುದ್ಧ ದ್ವಿಪಕ್ಷೀಯ  ಕ್ರಿಕೆಟ್ ಸರಣಿಯನ್ನು ಭಾರತದ ನೆಲದಲ್ಲಿ ಪುನಾರಂಭಿಸಲು  ಸಿದ್ಧವಿದೆಯೆಂಬ ವರದಿಗಳನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಲ್ಲಗಳೆದಿದೆ. ಬಿಸಿಸಿಐ ಜೊತೆ ಒಡಂಬಡಿಕೆಗೆ ಸಹಿ ಹಾಕಿರುವ ಪ್ರಕಾರ, ಮೊದಲ ಸರಣಿಯನ್ನು ಯುಎಇಯಲ್ಲಿ ಆಡಲಾಗುತ್ತದೆ ಎಂದು ಅದು ತಿಳಿಸಿದೆ.
 
ಪಾಕಿಸ್ತಾನವು ಭಾರತದಲ್ಲಿ ಆಡಲು ಬಯಸಿದೆ ಮತ್ತು ಅದರ ಸರಣಿಗಾಗಿ ಭಾರತವನ್ನು ತಟಸ್ಥ  ಮನೆಯನ್ನಾಗಿಸುತ್ತದೆ ಎಂದು ಪಿಸಿಬಿ ಅಧ್ಯಕ್ಷ ಶಹರ್ ಯಾರ್ ಖಾನ್ ಹೇಳಿರುವುದಾಗಿ ಭಾರತದ ಮಾಧ್ಯಮದಲ್ಲಿ  ವರದಿಯಾಗಿತ್ತು. ಈ ವರದಿಗಳಿಗೆ ಪ್ರತಿಕ್ರಿಯಿಸಿ  ಪಿಸಿಬಿ ಹೇಳಿಕೆಯನ್ನು ನೀಡಿದೆ.
 
ಪಿಸಿಬಿ ಯುಎಇನಲ್ಲಿ ಸ್ವದೇಶಿ ಸರಣಿಗೆ ಬದಲಾಗಿ ಡಿಸೆಂಬರ್‌‌ನಲ್ಲಿ ಭಾರತ ಪ್ರವಾಸಕ್ಕೆ ಒಪ್ಪಿದೆ ಎಂದು ಭಾರತದ ಮಾಧ್ಯಮಗಳಲ್ಲಿ ಊಹಾಪೋಹಗಳು ಹರಡಿತ್ತು. ಆದರೆ ಈ ಊಹಾಪೋಹದ ವರದಿಗಳನ್ನು ಪಿಸಿಬಿ ಅಲ್ಲಗಳೆದಿದೆ.   ಬಿಸಿಸಿಐ ಜತೆ ಸಹಿ ಹಾಕಿದ ಎಂಒಯುಗೆ ಪಿಸಿಬಿ ಬದ್ಧವಾಗಿದ್ದು ಈ ಡಿಸೆಂಬರ್‌ನಲ್ಲಿ ಯುಎಇನಲ್ಲಿ ಪ್ರಥಮ ಪಾಕ್- ಭಾರತ ಸರಣಿಯನ್ನು ಆಡಲು ಭಾರತ ಒಪ್ಪಿದೆಯೆಂದು ಸ್ಪಷ್ಟಪಡಿಸುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ. 
 
ಈ ಸರಣಿಯನ್ನು ಯುಎಇ ಅಥವಾ ಪರಸ್ಪರ ಒಪ್ಪಿಗೆಯಾದ ಕ್ರೀಡಾಂಗಣದಲ್ಲಿ ಆಡಲಾಗುತ್ತದೆ ಎಂದು ಎಂಒಯುನಲ್ಲಿ ನಿರ್ದಿಷ್ಟವಾಗಿ ತಿಳಿಸಲಾಗಿದೆ.  ಬಿಸಿಸಿಐ ಯಾವುದೇ ಪರ್ಯಾಯ ಮೈದಾನವನ್ನು ಪ್ರಸ್ತಾಪಿಸಿಲ್ಲ ಅಥವಾ ಈ ವಿಷಯವನ್ನು ಪಿಸಿಬಿ ಅಧ್ಯಕ್ಷ ಶಹರ್ ಯಾರ್ ಖಾನ್  ಅವರಲ್ಲಿ  ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಮತ್ತು ಕಾರ್ಯದರ್ಶಿ ಅನುರಾಗ್ ಠಾಕುರ್ ಚರ್ಚಿಸಿಲ್ಲ ಎಂದು ಹೇಳಿಕೆ ತಿಳಿಸಿದೆ. 
 
 ಕಳೆದ ವರ್ಷ ಸಹಿ ಹಾಕಲಾದ ಎಂ ಒಯು ಪ್ರಕಾರ, ಪಾಕಿಸ್ತಾನ ಮತ್ತು ಭಾರತ ಕ್ರಿಕೆಟ್ ಮಂಡಳಿಗಳು 2015ರಿಂದ 2022ರವರೆಗೆ 6 ಸರಣಿಗಳನ್ನು ಆಡಲು ಒಪ್ಪಿದ್ದು,ಮೊದಲ ಸರಣಿಗೆ ಡಿಸೆಂಬರ್‌ನಲ್ಲಿ ಯುಎಇಗೆ ಪುನಶ್ಚೇತನ ನೀಡಲು ಒಪ್ಪಿಕೊಳ್ಳಲಾಗಿತ್ತು. 

Share this Story:

Follow Webdunia kannada