Select Your Language

Notifications

webdunia
webdunia
webdunia
webdunia

ಐಸಿಸಿ ವಿಶ್ವಕಪ್ ಇಲೆವೆನ್ ತಂಡದಲ್ಲಿ ಟೀಂ ಇಂಡಿಯಾದ ಒಬ್ಬರೂ ಇಲ್ಲ

ಐಸಿಸಿ ವಿಶ್ವಕಪ್ ಇಲೆವೆನ್ ತಂಡದಲ್ಲಿ ಟೀಂ ಇಂಡಿಯಾದ ಒಬ್ಬರೂ ಇಲ್ಲ
ದುಬೈ , ಸೋಮವಾರ, 30 ಮಾರ್ಚ್ 2015 (11:37 IST)
ಟೀಂ ಇಂಡಿಯಾ ಸೆಮಿಫೈನಲ್ಸ್‌ನಲ್ಲಿ ಸೋಲಪ್ಪಿದ ನೋವು ಒಂದು ಕಡೆಯಾಗಿದ್ದರೆ ಐಸಿಸಿ ವಿಶ್ವಕಪ್  ಇಲೆವೆನ್ ತಂಡದಲ್ಲಿ ಒಬ್ಬ ಭಾರತೀಯ ಆಟಗಾರನೂ ಇಲ್ಲದಿರುವುದು ಇನ್ನಷ್ಟು ನೋವನ್ನು ಉಂಟುಮಾಡಿದೆ.  ವಿಶ್ವಕಪ್ ಇಲೆವನ್‌ನಲ್ಲಿ  ಆಸೀಸ್‌ಗಿಂತ ರನ್ನರ್ಸ್ ಅಪ್ ನ್ಯೂಜಿಲೆಂಡ್ ಆಟಗಾರರೇ ಹೆಚ್ಚಾಗಿದ್ದು, ಬ್ಲಾಕ್ ಕ್ಯಾಪ್ಸ್ ನಾಯಕ ಬ್ರೆಂಡನ್ ಮೆಕಲಮ್ ಅದರ ನಾಯಕರಾಗಿದ್ದಾರೆ.
 
ಐಸಿಸಿ ಟೀಂನಲ್ಲಿ ಐವರು ನ್ಯೂಜಿಲೆಂಡ್ ಆಟಗಾರರಿದ್ದಾರೆ. ಮೆಕಲಮ್ ಅವರ ಆಕ್ರಮಣಕಾರಿ, ನಾವೀನ್ಯದ, ಸ್ಫೂರ್ತಿದಾಯಕ ನಾಯಕತ್ವದಿಂದ ನಾಯಕರಾಗಿ ಅವರನ್ನು ಆಯ್ಕೆ ಮಾಡಲಾಗಿದೆ. ನ್ಯೂಜಲೆಂಡ್ ತಂಡ ಪ್ರಗತಿ ಹೊಂದಲು ಅವರ ನಾಯಕತ್ವವನ್ನು ಆಧರಿಸಿದೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.

ಪಂದ್ಯಾವಳಿಯಲ್ಲಿ ನೀಡಿದ ಪ್ರದರ್ಶನದ ಆಧಾರದ ಮೇಲೆ ಸಮತೋಲಿತ ತಂಡವನ್ನು ಆರಿಸುವ ಕಾರ್ಯವನ್ನು ತಜ್ಞರ ತಂಡಕ್ಕೆ ವಹಿಸಲಾಗಿದ್ದು ಅದು ಈ ಟೀಂ ಆಯ್ಕೆ ಮಾಡಿದೆ ಎಂದು ಐಸಿಸಿ ತಿಳಿಸಿದೆ.  ಮೆಕಲಮ್ ಸೇರಿದಂತೆ ಕೋರಿ ಆಂಡರ್‌ಸನ್, ಟ್ರೆಂಟ್ ಬೌಲ್ಟ್, ಗಪ್ಟಿಲ್, ವಿಟ್ಟೋರಿ  ಅಲ್ಲದೇ ಆಸೀಸ್‌ನ ಮ್ಯಾಕ್ಸ್‌ವೆಲ್, ಸ್ಟೀವನ್ ಸ್ಮಿತ್ ಮತ್ತು ಮಿಚೆಲ್ ಸ್ಟಾರ್ಕ್, ಇಬ್ಬರು ದಕ್ಷಿಣ ಆಫ್ರಿಕನ್ನರಾದ ಡಿ ವಿಲಿಯರ್ಸ್ ಮತ್ತು ಮಾರ್ಕೆಲ್, ಶ್ರೀಲಂಕಾದ ಕುಮಾರ್ ಸಂಗಕ್ಕರಾ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಯ್ಕೆಯಾಗಿದ್ದಾರೆ. 

Share this Story:

Follow Webdunia kannada