ಮುಂಬೈ: ಭಾರತದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುವ ಮುಸ್ಲಿಂ ಆಟಗಾರರಿಗೆ ಭದ್ರತೆ ಬಗ್ಗೆ ಯಾವುದೇ ಆತಂಕ ಬೇಕಾಗಿಲ್ಲ ಎಂದು ಇಂಗ್ಲೆಂಡ್ ನ ಭದ್ರತಾ ಸಲಹೆಗಾರರು ತಿಳಿಸಿದ್ದಾರೆ.
ಉರಿ ದಾಳಿಯ ನಂತರ ಭಾರತದಲ್ಲಿ ಪಾಕಿಸ್ತಾನದೊಂದಿಗೆ ಸಂಬಂಧ ತೀರಾ ಹದಗೆಟ್ಟಿದ್ದು, ಆ ದೇಶದೊಂದಿಗೆ ಕ್ರೀಡೆ, ಮನರಂಜನೆ ಸೇರಿದಂತೆ ಯಾವುದೇ ರೀತಿಯಲ್ಲಿ ಸಂಬಂಧ ಇಟ್ಟುಕೊಳ್ಳುವುದಕ್ಕೆ ಭಾರತದಲ್ಲಿ ತೀವ್ರ ವಿರೋಧವಿದೆ. ಇತ್ತೀಚೆಗೆ ಈ ಟೆಸ್ಟ್ ಸರಣಿಗೆ ಅಂಪಾಯರ್ ಆಗಬೇಕಿದ್ದ ಅಲೀಂ ದಾರ್ ಕೂಡಾ ಹುದ್ದೆಯಿಂದ ಹಿಂದೆ ಸರಿದಿದ್ದರು. ಆದರೆ ಇಂಗ್ಲೆಂಡ್ ನ ಆಟಗಾರರಿಗೆ ಈ ಭಯ ಬೇಡ ಎಂದು ಭದ್ರತಾ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಇಂಗ್ಲೆಂಡ್ ತಂಡದಲ್ಲಿ ಆದಿಲ್ ರಶೀದ್, ಮೊಯಿನ್ ಆಲಿ ಮುಸ್ಲಿಂ ಧರ್ಮೀಯರಾಗಿದ್ದಾರೆ. ಅಲ್ಲದೆ ಇಂಗ್ಲೆಂಡ್ ಪಾಕಿಸ್ತಾನದ ಸಕ್ಲೇನ್ ಮುಷ್ತಾಕ್ ಅವರನ್ನು ಬೌಲಿಂಗ್ ಸಲಹೆಗಾರನನ್ನಾಗಿ ನೇಮಿಸಿದೆ. ಅಲ್ಲದೆ ಕಳೆದ ಬಾರಿ ಭಾರತ ಇಂಗ್ಲೆಂಡ್ ಪ್ರವಾಸ ಮಾಡಿದ್ದಾಗ ಮೊಯಿನ್ ಆಲಿ ಅಲ್ಲಿ ನೆಲೆಸಿರುವ ಟೀಂ ಇಂಡಿಯಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ