Select Your Language

Notifications

webdunia
webdunia
webdunia
webdunia

ಪಾಕಿಸ್ತಾನ ಕ್ರಿಕೆಟ್ ಪ್ರವಾಸಕ್ಕಾಗಿ ಜಿಂಬಾಬ್ವೆಗೆ ಲಂಚ ನೀಡಲಾಗಿದೆಯೇ ?

ಪಾಕಿಸ್ತಾನ ಕ್ರಿಕೆಟ್ ಪ್ರವಾಸಕ್ಕಾಗಿ ಜಿಂಬಾಬ್ವೆಗೆ  ಲಂಚ ನೀಡಲಾಗಿದೆಯೇ ?
ಕರಾಚಿ , ಶನಿವಾರ, 13 ಜೂನ್ 2015 (16:10 IST)
ಪಾಕಿಸ್ತಾನದಲ್ಲಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಜಿಂಬಾಬ್ವೆ ಕ್ರಿಕೆಟ್‌ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಲಂಚ ನೀಡಿದೆಯೆಂಬ ಮಾತುಗಳು ಹರಿದಾಡುತ್ತಿದ್ದು, ತಾವು ಯಾವುದೇ ಲಂಚ ನೀಡಿಲ್ಲ ಎಂದು ಪಿಸಿಬಿ ಅಧ್ಯಕ್ಷ ಶಹರ್ ಯಾರ್ ಖಾನ್ ಮಾತ್ರ ತಿಳಿಸಿದ್ದಾರೆ. ಆದರೆ ಜಿಂಬಾಬ್ವೆ ತಂಡಕ್ಕೆ  ಪಾಕಿಸ್ತಾನದಲ್ಲಿ ಪ್ರವಾಸ ಮಾಡುವುದಕ್ಕಾಗಿ ಒಪ್ಪಂದವನ್ನು ಕುದುರಿಸಲಾಯಿತು ಎಂದು ದೃಢಪಡಿಸಿದ್ದಾರೆ.
 
2009ರಲ್ಲಿ ಪಾಕ್ ಪ್ರವಾಸದಲ್ಲಿದ್ದ ಶ್ರೀಲಂಕಾ ತಂಡದ ಮೇಲೆ  ಭಯೋತ್ಪಾದನೆ ದಾಳಿಯ ಬಳಿಕ ಜಿಂಬಾಬ್ವೆ ಪಾಕಿಸ್ತಾನ ಪ್ರವಾಸ ಮಾಡಿದ ಮೊದಲ ಟೆಸ್ಟ್ ಆಡುವ ರಾಷ್ಟ್ರವಾಗಿದೆ.  ಭಯೋತ್ಪಾದನೆ ದಾಳಿಯಲ್ಲಿ 6 ಜನರು ಸತ್ತಿದ್ದು 8 ಮಂದಿ ಗಾಯಗೊಂಡಿದ್ದರು.

 ಜಿಂಬಾಬ್ವೆ ಆಟಗಾರರಿಗೆ ಪ್ರವಾಸಕ್ಕೆ ಮನವೊಲಿಸಲು ತಲಾ 12,500 ಅಮೆರಿಕ ಡಾಲರ್‌ಗಳನ್ನು ನೀಡಲಾಗಿತ್ತೆಂದು ವ್ಯಾಪಕ ವದಂತಿಗಳು ಹರಡಿತ್ತು.  ಪಿಸಿಬಿ ಜಿಂಬಾಬ್ವೆ ಕ್ರಿಕೆಟ್ ಮಂಡಳಿಗೆ 5,00,000 ಡಾಲರ್ ಪಾವತಿ ಮಾಡಿತ್ತೆಂದು ವರದಿಗಳು ಪ್ರತಿಪಾದಿಸಿದ್ದವು.  
 
ಆದರೆ ಖಾನ್ ಸ್ಪಷ್ಟನೆ ನೀಡುತ್ತಾ, ಇದು ಒಂದೇ ಬಾರಿಗೆ ಹಣ ಪಾವತಿ ಮಾಡುವ ಒಪ್ಪಂದವಾಗಿದ್ದು, ಪಾಕಿಸ್ತಾನಕ್ಕೆ ಪ್ರವಾಸ ಮಾಡುವ ಎಲ್ಲಾ ತಂಡಕ್ಕೆ ನಾವು ಹಣ ನೀಡುತ್ತೇವೆ ಎನ್ನುವುದು ಇದರರ್ಥವಲ್ಲ ಎಂದು ಡಾನ್ ವರದಿ ಮಾಡಿದೆ. ಪ್ರವಾಸದ ಯಶಸ್ಸಿನಿಂದ ಸಂತೋಷಗೊಂಡ ಖಾನ್, ಪಾಕಿಸ್ತಾನಕ್ಕೆ ಭೇಟಿ ನೀಡಿದ ಜಿಂಬಾಬ್ವೆಗೆ ಧನ್ಯವಾದ ಸೂಚಿಸುವುದಾಗಿ ಹೇಳಿದರು. 

Share this Story:

Follow Webdunia kannada