Select Your Language

Notifications

webdunia
webdunia
webdunia
webdunia

ನ್ಯೂಜಿಲೆಂಡ್ ಮತ್ತೆ ಬೌಲಿಂಗ್ ಕೈಚಳಕ: ಆಸೀಸ್ ವಿರುದ್ಧ 8 ರನ್ ಜಯ

ನ್ಯೂಜಿಲೆಂಡ್ ಮತ್ತೆ ಬೌಲಿಂಗ್ ಕೈಚಳಕ: ಆಸೀಸ್ ವಿರುದ್ಧ 8 ರನ್ ಜಯ
ಧರ್ಮಶಾಲಾ: , ಶುಕ್ರವಾರ, 18 ಮಾರ್ಚ್ 2016 (22:22 IST)
ಭಾರತದ ವಿರುದ್ಧ ಚೊಚ್ಚಲ ಟಿ 20 ಪಂದ್ಯ ಗೆದ್ದಿದ್ದ ನ್ಯೂಜಿಲೆಂಡ್ ಮತ್ತೊಮ್ಮೆ ಮನೋಜ್ಞ ಬೌಲಿಂಗ್ ಪ್ರದರ್ಶನ ನೀಡಿ ಏಕದಿನ ವಿಶ್ವ ಚಾಂಪಿಯನ್ನರಾದ ಆಸ್ಟ್ರೇಲಿಯಾವನ್ನು 8 ರನ್‌ಗಳಿಂದ ಸೋಲಿಸಿದೆ.
 
ಇಲ್ಲಿನ ಎಚ್‌ಪಿಸಿಎ ಸ್ಟೇಡಿಯಂನಲ್ಲಿ 8 ವಿಕೆಟ್ ಕಳೆದುಕೊಂಡು 142 ರನ್ ಗಳಿಸಿದ ನ್ಯೂಜಿಲೆಂಡ್ ಆಸ್ಟ್ರೇಲಿಯಾವನ್ನು 9 ವಿಕೆಟ್‌‍ಗೆ 134 ರನ್‌ಗಳಿಗೆ ಮೊಟಕುಗೊಳಿಸಿ ಗೆಲವು ಗಳಿಸಿತು. ಕಿವಿ ಇನ್ನಿಂಗ್ಸ್ ಹೈಲೈಟ್ ಓಪನರ್ ಮಾರ್ಟಿನ್ ಗುಪ್ಟಿಲ್ ಅವರ 27 ಎಸೆತಗಳ 39 ಬಿರುಸಿನ ರನ್.ತಮ್ಮ ಪ್ರಥಮ ಪಂದ್ಯದಲ್ಲಿ ಭಾರತವನ್ನು ಬಗ್ಗುಬಡಿದ ಬ್ಲಾಕ್ ಕ್ಯಾಪ್ಸ್ ಇನ್ನೊಂದು ಉತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಸೆಮಿಫೈನಲ್‌ಗೆ ದಾಪುಗಾಲು ಹಾಕಿದ್ದಾರೆ.
 
 ಚೇಸಿಂಗ್‌ ಆರಂಭದಲ್ಲಿ ಕವಾಜಾ(38) ಮತ್ತು ಶೇನ್ ವಾಟ್ಸನ್(13) ಕ್ರೀಸ್‌ನಲ್ಲಿದ್ದರು. ಇವರಿಬ್ಬರು 5 ಓವರುಗಳಲ್ಲಿ ಆಸೀಸ್ ತಂಡವನ್ನು 42 ರನ್‌ಗೆ ಒಯ್ದಾಗ ಗೆಲ್ಲುವ ಭರವಸೆ ಮೂಡಿತ್ತು.
 
 ಆದರೆ ಆಸೀಸ್ ಬ್ಯಾಟಿಂಗ್ ಆಕಸ್ಮಿಕ ತಿರುವು ತೆಗೆದುಕೊಂಡು ಬೇಗನೇ  66ಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು ಒತ್ತಡದಲ್ಲಿ ಸಿಲುಕಿತು. ನಾಗ್ಪುರದಲ್ಲಿ ಭಾರತದ ಬ್ಯಾಟಿಂಗ್ ಲೈನ್‌ಅಪ್‌ ಅದುರಿಸಿದ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್‌ನಲ್ಲಿ ಅಪಾಯಕಾರಿ ಡೇವಿಡ್ ವಾರ್ನರ್ ಡೀಪ್ ಮಿಡ್‌ವಿಕೆಟ್‌ನಲ್ಲಿ ಕ್ಯಾಚ್ ನೀಡಿ ಔಟಾದರು ಮತ್ತು ಸ್ಟೀವನ್ ಸ್ಮಿತ್ ಸ್ಟಂಪ್ ಔಟ್ ಆದರು.
 
ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮಿಚೆಲ್ ಸ್ಟಾರ್ಕ್ ಐದನೇ ವಿಕೆಟ್‌‌ಗೆ 36 ರನ್ ಸೇರಿಸಿದರು. ಮ್ಯಾಕ್ಸ್‌ವೆಲ್ ಡೀಪ್ ಎಕ್ಸ್‌ಟ್ರಾ ಕವರ್‌ನಲ್ಲಿ ಕ್ಯಾಚಿತ್ತು ಔಟಾದರು. ಮಾರ್ಶ್ ಮತ್ತು ಆಶ್ಟನ್ ಅಗರ್ ಇಬ್ಬರೂ ತಲಾ ಒಂದು ಸಿಕ್ಸರ್ ಹೊಡೆದಾಗ ಆಟವು ಆಸೀಸ್ ಪರ ವಾಲಿತ್ತು. ಆದರೆ ಮಿಚೆಲ್ ಮೆಕ್ಲೆನಾಗನ್ ಮಾರ್ಶ್ ಮ್ತತು ಅಗರ್ ಅವರನ್ನು ಔಟ್ ಮಾಡಿದಾಗ ಆಸ್ಟ್ರೇಲಿಯಾಕ್ಕೆ ಅಂತಿಮ ಓವರಿನಲ್ಲಿ 19 ರನ್ ಗುರಿಯಿತ್ತು. ಆದರೆ ಇದು ತುಂಬಾ ಕಠಿಣವಾಗಿ ಕಂಡು ಆಸೀಸ್ ಸೋಲಪ್ಪಿದೆ. 

Share this Story:

Follow Webdunia kannada