Webdunia - Bharat's app for daily news and videos

Install App

ನೆಹ್ರಾ, ಮುಸ್ತಫಿಜುರ್ ಮಾರಕ ಬೌಲಿಂಗ್ ದಾಳಿ: ಕೇವಲ 92 ರನ್‌‌ಗೆ ಮುಂಬೈ ಆಲೌಟ್

Webdunia
ಸೋಮವಾರ, 9 ಮೇ 2016 (12:29 IST)
ಆಶಿಶ್ ನೆಹ್ರಾ ಮತ್ತು ಮುಸ್ತಫಿಜುರ್ ರೆಹ್ಮಾನ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್ ಕೇವಲ 92 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲಪ್ಪಿದೆ. ಸನ್ ರೈಸರ್ಸ್ ಪರ ಶಿಖರ್ ಧವನ್ ಅವರ 82 ರನ್ ಮತ್ತು ಡೇವಿಡ್ ವಾರ್ನರ್ ಅವರ 48 ರನ್ ನೆರವಿನಿಂದ 3 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿತ್ತು.

ಯುವರಾಜ್ ಸಿಂಗ್ ಬಿರುಸಿನ 23 ಎಸೆತಗಳಲ್ಲಿ 39 ರನ್ ಗಳಿಸಿದರು. ಹರ್ಭಜನ್ ಸಿಂಗ್ ಮುಂಬೈ ಇಂಡಿಯನ್ಸ್ ಪರ 2 ವಿಕೆಟ್ ಕಬಳಿಸಿದರು. ಶಿಖರ್ ಧವನ್ ಸ್ಕೋರಿನಲ್ಲಿ 10 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿತ್ತು. ಯುವರಾಜ್ ಸಿಂಗ್ 2 ಸಿಕ್ಸರ್ ಮತ್ತು 3 ಬೌಂಡರಿಗಳನ್ನು ಬಾರಿಸಿದರು.

ಸನ್‌ರೈಸರ್ಸ್ 177 ರನ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ನೆಹ್ರಾಗೆ ರೋಹಿತ್ ಶರ್ಮಾ ಬೌಲ್ಡ್ ಆದರು. ರಾಯುಡು ಕೂಡ ನೆಹ್ರಾ ಎಸೆತದಲ್ಲಿ ಕ್ಯಾಚಿತ್ತು ಔಟಾದರು. ನೆಹ್ರಾ ಮತ್ತು ಮುಸ್ತಫಿಜುರ್ ತಮ್ಮ ಬೌಲಿಂಗ್ ಚಾಕಚಕ್ಯತೆಯಿಂದ ಎದುರಾಳಿ ತಂಡವನ್ನು ಕಂಗೆಡಿಸಿದರು. ಮುಂಬೈ ಯಾವ ಹಂತದಲ್ಲೂ ಇನ್ನಿಂಗ್ಸ್ ಕಟ್ಟಲು ವಿಫಲವಾಗಿ 16.3 ಓವರುಗಳಲ್ಲಿ 92 ರನ್‌ಗೆ ಆಲೌಟ್ ಆಯಿತು. 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಹಲವು ಮಹಿಳೆಯರೊಂದಿಗೆ ಆಫೇರ್‌, ಆರ್‌ಸಿಬಿ ಆಟಗಾರನ ವಿರುದ್ಧ ಮಹಿಳೆ ದೂರು

ರಿಷಭ್ ಪಂತ್ ಸೋಮರ್ ಸಾಲ್ಟ್ ಸೆಲೆಬ್ರೇಷನ್ ಅಪಾಯಕಾರಿಯಾ: ವೈದ್ಯರ ಶಾಕಿಂಗ್ ಪ್ರತಿಕ್ರಿಯೆ

ಏಷ್ಯನ್ ಕಪ್‌ 2025, ಪಹಲ್ಗಾಮ್ ದಾಳಿ ಬಳಿಕ ಭಾರತ, ಪಾಕಿಸ್ತಾನ ಮುಖಾಮುಖಿ ಸಾಧ್ಯತೆ

ಗಿಲ್ ನಾಯಕತ್ವಕ್ಕೆ ಫುಲ್ ಮಾರ್ಕ್ಸ್‌ ನೀಡಿದ ಕನ್ನಡಿಗ ಪ್ರಸಿದ್ಧ್‌ ಕೃಷ್ಣ

ಮೂರು ಮಾದರಿಗಳಲ್ಲಿ ಸ್ಮೃತಿ ಮಂದಾನಾ ಶತಕ: ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ

ಮುಂದಿನ ಸುದ್ದಿ
Show comments