Webdunia - Bharat's app for daily news and videos

Install App

ಭಾರತ ಪ್ರವಾಸಕ್ಕೆ ಕಿವೀಸ್ ತಂಡ ಪ್ರಕಟ; ಮರಳಿದ ನೀಶಾಮ್

Webdunia
ಬುಧವಾರ, 7 ಸೆಪ್ಟಂಬರ್ 2016 (09:00 IST)
ಟೆಸ್ಟ್ ಸರಣಿ ಆಡಲು ಭಾರತಕ್ಕೆ ಬರುತ್ತಿರುವ ನ್ಯೂಜಿಲೆಂಡ್ ತಂಡ ಮಂಗಳವಾರ ಪ್ರಕಟವಾಗಿದೆ. ವಿಶೇಷವೆಂದರೆ ಆಲ್‌ರೌಂಡರ್ ಜಿಮ್ಮಿ ನೀಶಾಮ್‌ ತಂಡಕ್ಕೆ ಹಿಂತಿರುಗಿದ್ದಾರೆ.

ಇತ್ತೀಚಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ತಂಡವನ್ನೇ ಉಳಿಸಿಕೊಂಡಿರುವ ನ್ಯೂಜಿಲೆಂಡ್ ಆಯ್ಕೆ ಸಮಿತಿ  ಕೇವಲ ಮೂರು ಬದಲಾವಣೆಯನ್ನು ತಂದಿದೆ. ವೇಗಿ ಮ್ಯಾಟ್ ಹೆನ್ರಿ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಜೀತ್ ರಾವಲ್‌ಗೆ ಕೊಕ್ ನೀಡಲಾಗಿದೆ. ನೀಶಾಮ್ ಅವರನ್ನು ಮರಳಿ ಕರೆ ತರಲಾಗಿದೆ.
 
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಆಸ್ಟೇಲಿಯಾ ವಿರುದ್ಧದ ಸರಣಿಯನ್ನಾಡುತ್ತಿದ್ದ ವೇಳೆ ಬೆನ್ನುನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನೀಶಾಮ್ ಅರ್ಧಕ್ಕೆ ತವರಿಗೆ ಮರಳಿದ್ದರು.
 
ಕಾನ್ಪುರ , ಕೊಲ್ಕೊತಾ ಮತ್ತು ಇಂದೋರ್‌ನಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನಾಡಲಿರುವ ಕಿವೀಸ್ ಅಕ್ಟೋಬರ್ 16ರಿಂದ 29ರವರೆಗೆ ಐದು ಏಕದಿನ ಪಂದ್ಯಗಳನ್ನಾಡಲಿದೆ. 
 
ಇತ್ತೀಚಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಸೋತಿರುವ ನ್ಯೂಜಿಲೆಂಡ್ ಸದ್ಯ ಐಸಿಸಿ ಶ್ರೇಯಾಂಕದಲ್ಲಿ 7 ನೇ ಸ್ಥಾನದಲ್ಲಿದ್ದು,ಭಾರತ 2 ನೇ ಸ್ಥಾನದಲ್ಲಿದೆ.
 
ತಂಡ ಇಂತಿದೆ: ಕೇನ್ ವಿಲಿಯಮ್ಸ್ ( ನಾಯಕ) , ಟ್ರೆಂಟ್ ಬ್ರಾಸ್‌ವೆಲ್, ಮಾರ್ಕ್ ಕ್ರೇಗ್, ಮಾರ್ಟಿನ್ ಗಪ್ಟಿಲ್, ಟಾಮ್ ಲಥಾಮನ್, ಜಿಮ್ಮಿ ನೀಶಾಮ್, ಹೆನ್ನಿ ನಿಕೋಲ್ಸ್, ಲೂಕ್ ರಾಂಚಿ, ಮಿಚೆಲ್  ಸ್ಯಾಂಟ್ನರ್ , ಐಸ್ ಲೋಧಿ,  ಟಿಮ್ ಸೌಥಿ, ರಾಸ್ ಟೇಲರ್, ನೀಲ್ ವ್ಯಾಗ್ನರ್, ಬಿಜೆ ವಾಟ್ಲಿಂಗ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಆಕಾಶ್‌ ದೀಪ್‌ ಬೆಂಕಿ ದಾಳಿಗೆ ಇಂಗ್ಲೆಂಡ್ ತತ್ತರ: ಶುಭಮನ್‌ ಗಿಲ್‌ ಬಗಳಕ್ಕೆ ದಾಖಲೆಯ 336 ರನ್‌ಗಳ ಭರ್ಜರಿ ಜಯ

England-India Test: ರನ್‌ ಹೊಳೆ ಹರಿಸಿದ ಶುಭಮನ್‌ ಗಿಲ್‌ನನ್ನು ಮುಕ್ತ ಕಂಠದಿಂದ ಕೊಂಡಾಡಿದ ವಿರಾಟ್‌ ಕೊಹ್ಲಿ

ಇಂಗ್ಲೆಂಡ್ ವಿರುದ್ಧ ಮಿಂಚಿನ ಶತಕ ಸಿಡಿಸಿ ಅಬ್ಬರಿಸಿದ ವೈಭವ್‌ ಸೂರ್ಯವಂಶಿ: ಹಲವು ದಾಖಲೆಗಳು ಉಡೀಸ್‌

ಎನ್‌ಸಿ ಕ್ಲಾಸಿಕ್‌ನಲ್ಲಿ ಚಿನ್ನಕ್ಕೆ ಗುರಿಯಿಟ್ಟ ಚೋಪ್ರಾ: ಜಾವೆಲಿನ್‌ ಹಬ್ಬದಲ್ಲಿ ಮಿಂದೆದ್ದ ಸಿಲಿಕಾನ್‌ ಸಿಟಿ ಮಂದಿ

IND vs ENG: ಅಪರೂಪದ ದಾಖಲೆ ಮಾಡಿದ ಶುಭಮನ್ ಗಿಲ್

ಮುಂದಿನ ಸುದ್ದಿ
Show comments