Select Your Language

Notifications

webdunia
webdunia
webdunia
webdunia

ಮತ್ತೆ ಮಿಂಚಿದ ಮುಸ್ತಫಿಜುರ್ ರೆಹ್ಮಾನ್: ಟೀಂ ಇಂಡಿಯಾ ಸೋಲಿನ ಸುಳಿಯಲ್ಲಿ

ಮತ್ತೆ ಮಿಂಚಿದ ಮುಸ್ತಫಿಜುರ್ ರೆಹ್ಮಾನ್: ಟೀಂ ಇಂಡಿಯಾ ಸೋಲಿನ ಸುಳಿಯಲ್ಲಿ
ಢಾಕಾ , ಭಾನುವಾರ, 21 ಜೂನ್ 2015 (18:30 IST)
ಬಾಂಗ್ಲಾ ಮತ್ತು ಭಾರತ ನಡುವೆ ಎರಡನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದ ಮುಸ್ತಫಿಜುರ್ ರಹಮಾನ್ ಪುನಃ ತಮ್ಮ ಬೌಲಿಂಗ್ ಚಾಕಚಕ್ಯತೆ ಪ್ರದರ್ಶಿಸಿದ್ದು,  9.5 ಓವರುಗಳಲ್ಲಿ 43 ರನ್ ನೀಡಿ ಮತ್ತೆ 5 ವಿಕೆಟ್ ಕಬಳಿಸುವ ಮೂಲಕ ಟೀಂಇಂಡಿಯಾಗೆ ಕಂಟಕಪ್ರಾಯರಾಗಿ ಪರಿಣಮಿಸಿದರು.  ಮಳೆಯಿಂದಾಗಿ ಆಟ ನಿಂತಾಗ ಭಾರತ 43. 5 ಓವರುಗಳಲ್ಲಿ 196 ರನ್ ಗಳಿಸುವ ಮೂಲಕ ಸಂಕಷ್ಟದ ಸ್ಥಿತಿಯಲ್ಲಿ ಸಿಕ್ಕಿದೆ.

ಮೊದಲನೇ ಏಕದಿನದಲ್ಲಿ ಬಾಂಗ್ಲಾ ಪರ 5 ಅಮೂಲ್ಯ ವಿಕೆಟ್ ಕಬಳಿಸಿ ಜಯ ತಂದಿತ್ತ ಮುಸ್ತಫಿಜುರ್ ರಹಮಾನ್ ಎರಡನೇ ಏಕದಿನದಲ್ಲೂ ಕೂಡ ಮಾರಕ ಬೌಲಿಂಗ್ ದಾಳಿ ಮಾಡಿ ರೋಹಿತ್ ಶರ್ಮಾ, ಧೋನಿ, ಸುರೇಶ್ ರೈನಾ, ಅಕ್ಸರ್ ಪಟೇಲ್ ಮತ್ತು ಅಶ್ವಿನ್ ವಿಕೆಟ್‌ಗಳನ್ನು ಕಬಳಿಸಿದರು.  ರೋಹಿತ್ ಶರ್ಮಾ ಅವರು ಪ್ರಥಮ ಓವರಿನ ಎರಡನೇ ಎಸೆತದಲ್ಲಿ ರಹಮಾನ್‌‌ಗೆ ಬಲಿಯಾದರು. ನಂತರ ಆಡಲಿಳಿದ ವಿರಾಟ್ ಕೊಹ್ಲಿ ಕೇವಲ 23 ರನ್ ಹೊಡೆದು ಔಟಾದರು.

ಧೋನಿ ಮೊದಲಿಗೆ ಅಬ್ಬರದಿಂದ ಆಟ ಆರಂಭಿಸಿದರೂ ನಂತರ ನಿಧಾನಗತಿಯ ಆಟಕ್ಕೆ ಇಳಿದು 75 ಎಸೆತಗಳಲ್ಲಿ 47 ರನ್ ಮಾತ್ರ ಸ್ಕೋರ್ ಮಾಡಿದರು. ಸುರೇಶ್ ರೈನಾ ಕೂಡ ಎಂದಿನ ಬಿರುಸಿನ ಆಟಕ್ಕೆ ಇಳಿಯದೇ 55 ಎಸೆತಗಳಲ್ಲಿ 34 ರನ್ ಹೊಡೆದರು.  ಜಡೇಜಾ ಮತ್ತು ಭುವನೇಶ್ವರ್ ಬ್ಯಾಟಿಂಗ್ ಆಡುತ್ತಿದ್ದು ಮಳೆಯಿಂದಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ. 

Share this Story:

Follow Webdunia kannada