Select Your Language

Notifications

webdunia
webdunia
webdunia
webdunia

ಮುಂಬೈ ಇಂಡಿಯನ್ಸ್ ಐಪಿಎಲ್ ಚಾಂಪಿಯನ್ಸ್: ಚೆನ್ನೈ ವಿರುದ್ಧ ಭರ್ಜರಿ ಜಯ

ಮುಂಬೈ ಇಂಡಿಯನ್ಸ್ ಐಪಿಎಲ್ ಚಾಂಪಿಯನ್ಸ್: ಚೆನ್ನೈ ವಿರುದ್ಧ ಭರ್ಜರಿ ಜಯ
ಮುಂಬೈ , ಸೋಮವಾರ, 25 ಮೇ 2015 (10:48 IST)
ಎಡೆನ್ ಗಾರ್ಡನ್ಸ್ ಮೈದಾನದ ಜೊತೆ ಮುಂಬೈ ಇಂಡಿಯನ್ಸ್ ಅವಿನಾಭಾವ ಸಂಬಂಧ ಮುಂದುವರಿದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 41 ರನ್ ಗೆಲುವಿನ ಮೂಲಕ ಎರಡನೇ ಐಪಿಎಲ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.  ಮೊದಲ ನಾಲ್ಕು ಪಂದ್ಯಗಳಲ್ಲಿ ಸೋತ ಮುಂಬೈ ನಂತರದ 10 ಪಂದ್ಯಗಳಲ್ಲಿ 9 ಗೆಲುವು ಗಳಿಸಿ  ಅಚ್ಚರಿಯ ತಿರುವು ತೆಗೆದುಕೊಂಡು ಪ್ರಶಸ್ತಿಯನ್ನು ಬಾಚಿಕೊಂಡಿದೆ.

ಮೊದಲಿಗೆ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 5 ವಿಕೆಟ್ ಕಳೆದುಕೊಂಡು ಬೃಹತ್ ಸ್ಕೋರಾದ 202 ರನ್ ಗಳಿಸಿತು. ನಾಯಕ ರೋಹಿತ್ ಶರ್ಮಾ(50) ಮತ್ತು ಲೆಂಡ್ಸ್ ಸಿಮ್ಮನ್ಸ್ (68) 67 ಎಸೆತಗಳಲ್ಲಿ 119 ರನ್ ಜೊತೆಯಾಟವಾಡಿದರು. ಎಡೆನ್ ಗಾರ್ಡನ್ಸ್ ಮೈದಾನದಲ್ಲಿ  ಏಕದಿನ ಪಂದ್ಯದ 264 ಮತ್ತು ಚೊಚ್ಚಲ ಶತಕ ಸಿಡಿಸಿದ್ದ ರೋಹಿತ್ ಶರ್ಮಾ ತಮ್ಮ ನೆಚ್ಚಿನ ಮೈದಾನದಲ್ಲಿ ಮತ್ತೊಮ್ಮೆ ಸ್ಫೋಟಿಸಿದ್ದಾರೆ.

 
ಶರ್ಮಾ ಮತ್ತು ಸಿಮ್ಮನ್ಸ್ ತಮ್ಮ ಜತೆಯಾಟದಲ್ಲಿ 19 ಬೌಂಡರಿಗಳನ್ನು ಸಿಡಿಸಿದರು. ಶರ್ಮಾ ಮತ್ತು ಪೋಲಾರ್ಡ್ ಸತತ ಎಸೆತಗಳಲ್ಲಿ ಔಟಾದ ಬಳಿಕ,  ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಪೋಲಾರ್ಡ್ (36) ಅಂಬಾಟಿ ರಾಯುಡು (36 ನಾಟೌಟ್) ಜತೆಯಾಟದಲ್ಲಿ  200 ರನ್ ಗಡಿದಾಟಿಸಿದರು. ಬಳಿಕ ಮುಂಬೈ ಬೌಲರುಗಳು ಶಿಸ್ತಿನ ಬೌಲಿಂಗ್ ದಾಳಿ ಮೂಲಕ ಚೆನ್ನೈ ತಂಡವನ್ನು 8 ವಿಕೆಟ್‌ಗೆ 161ಕ್ಕೆ ನಿರ್ಬಂಧಿಸಿದರು. 
 ಸ್ಪಿನ್ನರ್ ಹರ್ಭಜನ್ ಸಿಂಗ್ ಎರಡು ಓವರುಗಳಲ್ಲಿ ಡ್ವೇನ್ ಸ್ಮಿತ್(57) ಮತ್ತು ಸುರೇಶ್ ರೈನಾ(28) ವಿಕೆಟ್‌ಗಳನ್ನು ಕಬಳಿಸಿದರು. ಕಿವಿ ವೇಗಿ ಮಿಚೆಲ್ ಮೆಕ್‍‌ಕ್ಲೆನಾಗೆನ್ ಮೂರು ವಿಕೆಟ್ ಕಬಳಿಸಿದರು ಮತ್ತು ಲಸಿತ್ ಮಾಲಿಂಗಾ 2 ವಿಕೆಟ್ ಗಳಿಸಿದರು. ಮುಂಬೈ 2013ರಲ್ಲಿ ಇದೇ ಕ್ರೀಡಾಂಗಣದಲ್ಲಿ ಚೆನ್ನೈ ತಂಡದ ವಿರುದ್ಧ ಜಯಗಳಿಸುವ ಮೂಲಕ ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿ ಗೆದ್ದುಕೊಂಡಿತ್ತು. ಚೆನ್ನೈ ಒಟ್ಟು 6 ಬಾರಿ ಫೈನಲ್ ಪ್ರವೇಶಿಸಿ ನಾಲ್ಕು ಫೈನಲ್‌ಗಳಲ್ಲಿ ಸೋಲನುಭವಿಸಿದೆ. 
ಮುಂಬೈ ಬ್ಯಾಟಿಂಗ್ 
ಲೆಂಡ್ಸ್ ಸಿಮ್ಮನ್ಸ್  ಬೌಲ್ಡ್ ಡ್ವೇನ್ ಸ್ಮಿತ್  68, ಪಾರ್ಥಿವ್ ಪಟೇಲ್ ರನೌಟ್ ಪ್ಲೆಸಿಸ್ 3,  ರೋಹಿತ್ ಶರ್ಮಾ ಸಿ ರವೀಂದ್ರ ಜಡೇಜಾ  ಬೌಲ್ಡ್ ಡ್ವೇನ್ ಬ್ರೇವೋ 50 ರನ್,  ಕೀರನ್ ಪೋಲಾರ್ಡ್ ಸಿ ಸುರೇಶ್ ರೈನಾ, ಬೌಲ್ಡ್ ಮೋಹಿತ್ ಶರ್ಮಾ  36,  ಅಂಬಾಟಿ ರಾಯುಡು ನಾಟೌಟ್ 36
ವಿಕೆಟ್ ಪತನ: ಪಾರ್ಥಿವ್ ಪಟೇಲ್ 1/1,  ರೋಹಿತ್ ಶರ್ಮಾ 120/2,  ಲೆಂಡ್ಸ್ ಸಿಮ್ಮನ್ಸ್  120/3, ಕೀರನ್ ಪೋಲಾರ್ಡ್ 191/4,  ಹಾರ್ದಿಕ್ ಪಾಂಡ್ಯಾ 191/5
 ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ 
 ಮೋಹಿತ್ ಶರ್ಮಾ 1 ವಿಕೆಟ್,   ಬ್ರೇವೋ  2 ವಿಕೆಟ್ , ಡ್ವೇನ್ ಸ್ಮಿತ್ 1 ವಿಕೆಟ್.
 ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್
ಡ್ವೇನ್ ಸ್ಮಿತ್ ಎಲ್‌ಬಿ ಹರ್ಭಜನ್  57,  ಮೈಕೇಲ್ ಹಸ್ಸಿ ಸಿ ಸುಚಿತ್, ಬೌಲ್ಡ್ ಮೆಕ್‌ಕ್ಲಿನಾಗನ್  4, ಸುರೇಶ್ ರೈನಾ ಸ್ಟಂಪ್ ಪಾರ್ಥಿವ್, ಬೌಲ್ಡ್ ಹರ್ಭಜನ್  28, ಧೋನಿ  ಬೌಲ್ಡ್ ಮಾಲಿಂಗಾ  18, ಬ್ರೇವೋ ಸಿ ಸಿಮ್ಮನ್ಸ್, ಬೌಲ್ಡ್ ಮೆಕ್ ಕ್ಲಿನಾಗನ್  9, ಪವನ್ ನೇಗಿ ಸಿ ಪಾಂಡ್ಯಾ, ಬೌಲ್ಡ್ ಮಾಲಿಂಗಾ 3, ಪ್ಲೆಸಿಸ್  ಸಿ ರೋಹಿತ್ ಶರ್ಮಾ ಬೌಲ್ಡ್ ವಿನಯ ಕುಮಾರ್ 1, ರವೀಂದ್ರ ಜಡೇಜಾ ನಾಟೌಟ್ 11, ಅಶ್ವಿನ್ ಸಿ ಸುಚಿತ್, ಬೌಲ್ಡ್ ಮೆಕ್ ಕ್ಲಿನಾಗೆನ್ 2 , ಮೋಹಿತ್ ಶರ್ಮಾ  ನಾಟೌಟ್ 21, 
ಮುಂಬೈ ಇಂಡಿಯನ್ಸ್ ಬೌಲಿಂಗ್
 ಮಾಲಿಂಗಾ 2 ವಿಕೆಟ್, ಮೆಕ್ ಕ್ಲಿನಾಗೆನ್ 3 ವಿಕೆಟ್,  ವಿನಯ್ ಕುಮಾರ್ 1 ವಿಕೆಟ್.
 

Share this Story:

Follow Webdunia kannada