Webdunia - Bharat's app for daily news and videos

Install App

ತಮ್ಮನ್ನು ತಾವೇ ಹೊಗಳಿಕೊಂಡ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್

Webdunia
ಗುರುವಾರ, 28 ನವೆಂಬರ್ 2019 (09:02 IST)
ಮುಂಬೈ: ಟೀಂ ಇಂಡಿಯಾಗೆ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡುತ್ತಿಲ್ಲ ಎಂದು ಅಭಿಮಾನಿಗಳು, ಮಾಜಿ ಕ್ರಿಕೆಟಿಗರಿಂದ ಟೀಕೆಗೊಳಗಾಗುತ್ತಿದ್ದರೂ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ತಮ್ಮ ಪ್ರದರ್ಶನವನ್ನು ತಾವೇ ಕೊಂಡಾಡಿದ್ದಾರೆ.


ಎಂಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯ ಅವಧಿ ಕೊನೆಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಮಾಧ್ಯಮದೊಂದಿಗೆ ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿರುವ ಪ್ರಸಾದ್, ನಮ್ಮ ಕೆಲಸ ಬಿಸಿಸಿಐ, ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗೆ ಇಷ್ಟವಾಗಿದೆ ಎಂದಿದ್ದಾರೆ.

ಕಡಿಮೆ ಪಂದ್ಯವಾಡಿರುವ ಅನುಭವವಿರುವ ಆಯ್ಕೆ ಸಮಿತಿ ಸದಸ್ಯರನ್ನು ವಜಾಗೊಳಿಸಿ ಅರ್ಹರನ್ನು ನೇಮಿಸಿ ಎಂದು ಇತ್ತೀಚೆಗಷ್ಟೇ ಹರ್ಭಜನ್ ಸಿಂಗ್, ಮಾಜಿ ಕ್ರಿಕೆಟಿಗ ಫಾರುಖ್ ಇಂಜಿನಿಯರ್ ಟೀಕೆ ಮಾಡಿದ್ದರು.

‘ಜನ ಏನು ಬೇಕಾದರೂ ಟೀಕೆ ಮಾಡಲಿ. ಟೀಂ ಇಂಡಿಯಾ, ಭಾರತ ಎ ತಂಡದ ಪ್ರದರ್ಶನಗಳೇ ನಮ್ಮ ಸಾಧನೆ ತೋರಿಸುತ್ತಿದೆ. ನಾನು ಧೋನಿ ಮತ್ತು ವಿರಾಟ್ ಕೊಹ್ಲಿ ಜತೆಗೆ ಉತ್ತಮ ಸಂಬಂಧ ಹೊಂದಿದ್ದೇನೆ. ನನ್ನ ಅವಧಿಯಲ್ಲಿ ದಿಗ್ಗಜ ಕ್ರಿಕೆಟಿಗರ ಸಲಹೆ ಪಡೆಯುತ್ತಿದ್ದೆ. ನನ್ನ ಬಗ್ಗೆ ಬರುವ ಟೀಕೆಗಳಿಗೆ ನಾನು ತಲೆಕೆಡಿಸಿಕೊಂಡರೆ ಕೆಲಸ ಮಾಡಲು ಆಗುತ್ತಿರಲಿಲ್ಲ’ ಎಂದು ಪ್ರಸಾದ್ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನಕಲಿ ಜನನ ಪ್ರಮಾಣ ಪತ್ರ: ಉದಯೋನ್ಮುಖ ಕ್ರಿಕೆಟಿಗನಿಗೆ ಎರಡು ವರ್ಷ ನಿಷೇಧದ ಶಿಕ್ಷೆ ವಿಧಿಸಿದ ಬಿಸಿಸಿಐ

IND vs PAK: ಇಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ, ಪಾಕಿಸ್ತಾನ ಕ್ರಿಕೆಟ್ ಪಂದ್ಯ: ಎಲ್ಲಿ, ಎಷ್ಟು ಗಂಟೆಗೆ ಇಲ್ಲಿದೆ ವಿವರ

ಹಾಂಗ್ ಕಾಂಗ್ ಮಹಿಳಾ ಕ್ರಿಕೆಟಿಗರಿಗೆ ಸ್ಮೃತಿ ಎಂದರೆ ಎಷ್ಟು ಗೌರವ ಗೊತ್ತಾ

ಹಾಂಗ್ ಕಾಂಗ್ ಬೌಲರ್ ಗಳನ್ನು ಗಲ್ಲಿ ಕ್ರಿಕೆಟ್ ನಂತೆ ಚೆಂಡಾಡಿದ ಸ್ಮೃತಿ ಮಂಧಾನ ಮಾಡಿದ ದಾಖಲೆಗಳ ಪಟ್ಟಿ ಇಲ್ಲಿದೆ

ಸ್ವಲ್ಪ ಹುಕ್ಕಾ ಸೇದಿ ಬರ್ತೀನಿ': ರಿಷಭ್ ಪಂತ್ ಜೊತೆ ಪಾರ್ಟಿ ಮಾಡುತ್ತಿದ್ದ ಎಂಎಸ್ ಧೋನಿ ವೀಡಿಯೋ ವೈರಲ್

ಮುಂದಿನ ಸುದ್ದಿ
Show comments