Webdunia - Bharat's app for daily news and videos

Install App

ಸೆಲ್ಫಿಗಾಗಿ ಧೋನಿಯ ವಾಹನವನ್ನು ಸ್ಕೂಟಿಯಲ್ಲಿ ಬೆನ್ನಟ್ಟಿದ ಯುವತಿ

Webdunia
ಶುಕ್ರವಾರ, 4 ನವೆಂಬರ್ 2016 (18:30 IST)
ಅಭಿಮಾನಿಗಳಿಗೆ ತಮ್ಮ ಅಭಿಮಾನಿ ದೇವರು ಎದುರಿಗೆ ಬಂದಾಗ ಏನು ಮಾಡುತ್ತಿದ್ದೇವೆ ಎನ್ನುವುದರ ಪರಿವೆಯೇ ಇರುವುದಿಲ್ಲ. ಅವರಿಗೆ ಅದೊಂದು ವಿಶಿಷ್ಠ, ಅದ್ಭತ, ರೋಚಕ ಕ್ಷಣವಾಗಿರುತ್ತದೆ.
 
ಸುಂದರವಾದ ಯುವತಿಯೊಬ್ಬಳು, ಟೀಂ ಇಂಡಿಯಾ ನಾಯಕ ಧೋನಿಯೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವ ಏಕೈಕ ಉದ್ದೇಶದಿಂದ ಧೋನಿಯ ಹಮ್ಮರ್ ಮಾಡೆಲ್ ವಾಹನ, ಏರ್‌ಪೋರ್ಟ್‌ಗೆ ತೆರಳುತ್ತಿರುವುದು ಕಂಡು ಕೂಡಲೇ ತನ್ನ ಸ್ಕೂಟಿಯಲ್ಲಿ ಬೆನ್ನಟ್ಟಿದ್ದಾಳೆ. 
 
ಎಂ.ಎಸ್.ಧೋನಿ ತಮ್ಮ ರಾಂಚಿಯಲ್ಲಿರುವ ಮನೆಯಿಂದ ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ಮುಂಬೈ ವಿಮಾನ ಹತ್ತಲು ನಿರ್ಧರಿಸಿದ್ದಾರೆ. ಮನೆಯಲ್ಲಿದ್ದ ತಮ್ಮ ಹಮ್ಮರ್ ವಾಹನವನ್ನು ತೆಗೆದುಕೊಂಡು ವಿಮಾನ ನಿಲ್ದಾಣಕ್ಕೆ ಹೊರಟಿದ್ದಾರೆ. 
 
ದಾರಿಯಲ್ಲಿ ಕಾರಿನಲ್ಲಿ ಧೋನಿ ಇರುವುದು ಕಂಡ ಕೆಲವು ಯುವತಿಯರು ಜೋರಾಗಿ ಕೂಗಿ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.
 
ಆದರೆ, ಆರಾಧ್ಯ ಎನ್ನುವ ಯುವತಿ ಕೂಡಲೇ ತನ್ನ ಸ್ಕೂಟಿಯನ್ನು ಹೊರತೆಗೆದು ಧೋನಿ ವಾಹನವನ್ನು ಬೆನ್ನಟ್ಟಿದ್ದಾಳೆ. ಧೋನಿಯ ವಾಹನ ಹತ್ತಿರ ಬರುತ್ತಿದ್ದಂತೆ ಧೋನಿ ..ಧೋನಿ ಎಂದು ಕೂಗಿದ್ದಾಳೆ. 
 
ಯುವತಿಯ ಕೂಗು ಕೇಳಿದ ಧೋನಿ ತಮ್ಮ ವಾಹನವನ್ನು ನಿಲ್ಲಿಸಿ ಆರಾಧ್ಯಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಆರಾಧ್ಯ ತನ್ನ ಮತ್ತು ಧೋನಿಯ ಸೆಲ್ಫ್ತಿಚಿತ್ರವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಮಾಡಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಆಂಗ್ಲರ ನಾಡಲ್ಲಿ ಮತ್ತೇ ಅಬ್ಬರಿಸಿದ ಶುಭ್ಮನ್‌ ಗಿಲ್ ಬ್ಯಾಟಿಂಗ್‌: 8ನೇ ಶತಕ ಸಿಡಿಸಿದ ಕ್ಯಾಪ್ಟನ್‌

IND vs ENG Test: ವಿದೇಶಿ ನೆಲದಲ್ಲಿ ಹೊಸ ದಾಖಲೆ ಬರೆದ ರಿಷಭ್ ಪಂತ್

IND vs ENG: ಕರುಣ್ ನಾಯರ್ ನಿಮಗೆ ಎರಡನೇ ಚಾನ್ಸ್ ಸಿಕ್ತು, ನೀವು ಮಾಡಿದ್ದೇನು

IND vs ENG: ವೈಸ್ ಕ್ಯಾಪ್ಟನ್ಸಿ ಪಟ್ಟ ರಿಷಭ್ ಪಂತ್ ಗೆ ಕೆಲಸ ಮಾಡಲು ಕೆಎಲ್ ರಾಹುಲ್

IND vs ENG: ಇಷ್ಟಕ್ಕಾದ್ರೂ ಕನ್ನಡಿಗ ಕರುಣ್ ನಾಯರ್ ತಂಡದಲ್ಲಿರಬೇಕು ಎಂದ ಫ್ಯಾನ್ಸ್

ಮುಂದಿನ ಸುದ್ದಿ
Show comments