Select Your Language

Notifications

webdunia
webdunia
webdunia
webdunia

ಪಾಕಿಸ್ತಾನವನ್ನು ಅಣಕವಾಡಿದ ಮೌಕಾ, ಮೌಕಾ ಜಾಹೀರಾತು: ಬಿಸಿಸಿಐಗೆ 200 ಕರೆಗಳು

ಪಾಕಿಸ್ತಾನವನ್ನು ಅಣಕವಾಡಿದ ಮೌಕಾ, ಮೌಕಾ ಜಾಹೀರಾತು: ಬಿಸಿಸಿಐಗೆ 200 ಕರೆಗಳು
ನವದೆಹಲಿ , ಶನಿವಾರ, 28 ಮಾರ್ಚ್ 2015 (17:37 IST)
ನವದೆಹಲಿ: ವಿಶ್ವಕಪ್ ವೇಳೆ ಪ್ರಸಾರಗೊಂಡಿದ್ದ ಮೌಕಾ ಮೌಕಾ ಜಾಹೀರಾತು ಸಖತ್ ಜನಪ್ರಿಯವಾಗಿತ್ತು. ಈ ಜಾಹೀರಾತಿನಲ್ಲಿ ಪಾಕಿಸ್ತಾನವು ಭಾರತವನ್ನು ಸೋಲಿಸಬೇಕೆಂಬ ಪಾಕ್ ಅಭಿಮಾನಿಯ ಕೊನೆಯಿಲ್ಲದ ಕಾಯುವಿಕೆಯನ್ನು ಅಪಹಾಸ್ಯ ಮಾಡಲಾಗಿತ್ತು. ಆದರೆ ಭಾರತ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ಸ್‌ನಲ್ಲಿ ಸೋಲಪ್ಪಿದ ಬಳಿಕ ಬಿಸಿಸಿಐಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಕರೆಗಳ ಮಹಾಪೂರವೇ ಹರಿದುಬರುತ್ತಿದ್ದು, ಭಾರತದ ನಿರ್ಗಮನಕ್ಕೆ ಮೌಕಾ ಮೌಕಾ ಎಂದು ಅಣಕವಾಡಿದ್ದಾರೆ.

ಸುಮಾರು 200 ಕರೆಗಳು ಬಿಸಿಸಿಐಗೆ ಬಂದಿದ್ದು,  ಬಿಸಿಸಿಐ ಮುಖ್ಯಕಚೇರಿ ಸಿಬ್ಬಂದಿ ಕಾಲ್ ಸ್ವೀಕರಿಸುತ್ತಿದ್ದಂತೆ ಮೌಖಾ, ಮೌಖಾ ಕ್ಯಾ ಮೌಖೆ ಕಾ ಎಂದು ಛೇಡಿಸಿದ್ದಾರೆ. ಈ ಜಾಹೀರಾತಿನಲ್ಲಿ ಪಾಕಿಸ್ತಾನಿ ಅಭಿಮಾನಿಯೊಬ್ಬ ತನ್ನ ತಂಡ ವಿಶ್ವಕಪ್‌ನಲ್ಲಿ ಭಾರತವನ್ನು ಸೋಲಿಸುವುದನ್ನು ಕಾಯುತ್ತಿರುತ್ತಾನೆ. ಪಾಕ್‌‌ನ ಪ್ರತಿಯೊಂದು ಸೋಲಿನ ನಡುವೆ ಅವನ ಆಯಸ್ಸು ಹೆಚ್ಚುವುದು ಕಾಣುತ್ತದೆ.

 ಭಾರತದ ವಿರುದ್ಧ  ಪಾಕ್ ಗೆಲುವಿನ ವಿಜಯೋತ್ಸವ ಆಚರಣೆಗಾಗಿ ಪಟಾಕಿ ಪೆಟ್ಟಿಗೆಯೊಂದಕ್ಕೆ ಅಂಟಿಕೊಂಡಿದ್ದ ಈತ ಪಾಕ್ ಸೋತ ಬಳಿಕ,  ಭಾರತವನ್ನುಇತರೆ ತಂಡ ಸೋಲಿಸಿದರೆ ಪಟಾಕಿ ಹೊಡೆಯಬಹುದೆಂದು ಇತರೆ ತಂಡಗಳಿಗೆ ಬೆಂಬಲಿಸುತ್ತಾನೆ.  ಈ ಜಾಹೀರಾತಿಗೆ ಮೌಕಾ, ಮೌಕಾ  ಕವ್ವಾಲಿ ಹಾಡಿನ ಹಿನ್ನೆಲೆ ನೀಡಲಾಗಿದೆ. 
 
 

Share this Story:

Follow Webdunia kannada