Webdunia - Bharat's app for daily news and videos

Install App

ಏಷ್ಯಾ ಕಪ್‌ಗೆ ಮೊಹಮ್ಮದ್ ಶಮಿಗೆ ಕೊಕ್, ವಿಶ್ವ ಟಿ 20ಗೆ ಕೂಡ ಅನುಮಾನ

Webdunia
ಶನಿವಾರ, 20 ಫೆಬ್ರವರಿ 2016 (13:11 IST)
ಮುಂಬರುವ ಏಷ್ಯಾ ಕಪ್ ಪಂದ್ಯಾವಳಿಗೆ ಮೊಹಮ್ಮದ್ ಶಮಿ ಅವರನ್ನು ಆಡಿಸುವುದಿಲ್ಲವಾದ್ದರಿಂದ, ಐಸಿಸಿ ವಿಶ್ವ ಟ್ವೆಂಟಿ 20 ಪಂದ್ಯಾವಳಿಯಲ್ಲಿ ಕೂಡ ಅವರ ಭಾಗವಹಿಸುವಿಕೆ ಅನುಮಾನಾಸ್ಪದವಾಗಿದೆ.  ಆಯ್ಕೆ ಸಮಿತಿಯು ಅವರಿಗೆ ಬದಲಿಯಾಗಿ ಭುವನೇಶ್ವರ್ ಕುಮಾರ್ ಅವರನ್ನು ಹೆಸರಿಸಿದೆ. ಕಳೆದ ವರ್ಷ ವಿಶ್ವ ಕಪ್ ಬಳಿಕ ಸುದೀರ್ಘ ಕಾಲ ಗಾಯದಿಂದ ಬಳಲಿದ್ದ ಶಮಿಯನ್ನು ರಾಷ್ಟ್ರೀಯ ತಂಡಕ್ಕೆ ಪುನಃ ಕರೆಸಲಾಗಿತ್ತು. ಆದರೆ ಮಂಡಿರಜ್ಜು ಗಾಯದಿಂದ ಪುನಃ ಅವರ ಆಯ್ಕೆಯನ್ನು ತಳ್ಳಿಹಾಕಲಾಗಿದೆ.
 
 ಮೊಹಮ್ಮದ್ ಶಮಿಯನ್ನು 2016ರ ಏಷ್ಯಾ ಕಪ್‌ನಲ್ಲಿ ಆಡಿಸದಿರುವುದು ದೃಢಪಟ್ಟಿದೆ. ಎಡ ಮಂಡಿರಜ್ಜು ಗಾಯದಿಂದ ಚೇತರಿಸಿಕೊಳ್ಳಲು ಹೆಚ್ಚು ಸಮಯ ನೀಡುವುದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕುರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
 
 ಎರಡು ಪಂದ್ಯಾವಳಿಗಳಿಗೆ ಫೆ. 5ರಂದು ತಂಡವನ್ನು ಪ್ರಕಟಿಸುವ ಕಾಲದಲ್ಲಿ ಶಮಿ ತಮ್ಮ ಫಿಟ್ನೆಸ್ ಸಾಬೀತುಮಾಡುವಲ್ಲಿ ವಿಫಲರಾಗಿದ್ದರು.  ಆದಾಗ್ಯೂ ಆಯ್ಕೆ ಸಮಿತಿಯ ಅಧ್ಯಕ್ಷ ಸಂದೀಪ್ ಪಾಟೀಲ್ ಶಮೀ ಬೌಲಿಂಗ್ ಆರಂಭಿಸಿದ್ದು, ದೊಡ್ಡ ಹಣಾಹಣಿ ವೇಳೆಗೆ ಫಿಟ್ ಆಗುತ್ತಾರೆಂಬ ಆಶಯ ವ್ಯಕ್ತಪಡಿಸಿದ್ದರು. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments