Select Your Language

Notifications

webdunia
webdunia
webdunia
webdunia

ಆರ್‌ಸಿಬಿಗೆ ಗುಡ್ ನ್ಯೂಸ್: ಮಿಶೆಲ್ ಸ್ಟಾರ್ಕ್ ಮರಳಿ ತಂಡಕ್ಕೆ ಸೇರ್ಪಡೆ

ಆರ್‌ಸಿಬಿಗೆ ಗುಡ್ ನ್ಯೂಸ್: ಮಿಶೆಲ್ ಸ್ಟಾರ್ಕ್ ಮರಳಿ ತಂಡಕ್ಕೆ ಸೇರ್ಪಡೆ
ಬೆಂಗಳೂರು , ಸೋಮವಾರ, 20 ಏಪ್ರಿಲ್ 2015 (21:06 IST)
ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದ ಗೆಲುವಿನ ರೂವಾರಿಯಾಗಿದ್ದ ವೇಗದ ಬೌಲರ್ ಮಿಶೆಲ್ ಸ್ಟಾರ್ಕ್ ಇದೀಗ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಮಿಶೆಲ್ ಸ್ಟಾರ್ಕ್.. ಹೆಸರು ಕೇಳಿದರೆ ಸಾಕು ಅದೆಂಥಾ ಬ್ಯಾಟ್ಸ್‘ಮನ್ ಆದರೂ ಒಂದು ಕ್ಷಣ ಚಿಂತೆಗೆ ಬೀಳುತ್ತಾನೆ. ಬೆಂಕಿಯಂಥಾ ಚೆಂಡುಗಳಿಗೆ ಉತ್ತರಿಸುವುದು ಹೇಗೆ ಅಂತಾ ತಲೆಕೆಡಿಸಿಕೊಳ್ಳುತ್ತಾರೆ. ಹೌದು, ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಗಮ್ಮತ್ತೇ ಅಂಥದ್ದು.

ವಿಶ್ವಕಪ್‘ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಆಸ್ಟ್ರೇಲಿಯಾ ಗೆಲುವಿನ ನಗೆ ಬೀರುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಿಚೆಲ್ ಸ್ಟಾರ್ಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದಾರೆ. ಆದರೆ, ಸಣ್ಣ ಮೊಣಕಾಲು ಗಾಯದಿಂದ ಸ್ಟಾರ್ಕ್ ಟೂರ್ನಿಯಿಂದ ಹೊರಗುಳಿದಿದ್ದರು. ಈ ಮಧ್ಯೆ ಆರ್‘ಸಿಬಿ 3 ಪಂದ್ಯಗಳನ್ನ ಆಡಿದ್ದು, ಎರಡರಲ್ಲಿ ಸೋಲುಂಡಿದೆ.

2 ಸೋಲುಗಳು ಸಹ ಲಯವಿಲ್ಲದ ಬೌಲಿಂಗ್ ಪಡೆಯಿಂದ ಎಂಬುದು ಗಮನಾರ್ಹ. ಸದ್ಯ, ಆರ್‘ಸಿಬಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮೊಣಕಾಲು ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿರುವ ಮಿಚೆಲ್ ಸ್ಟಾರ್ಕ್ ಇವತ್ತು ತಂಡವನ್ನ ಸೇರಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸ್ವತಃ ಸ್ಟಾರ್ಕ್ ನಿನ್ನೆ ಟ್ವೀಟ್ ಮಾಡಿದ್ದಾರೆ.

ಬುಧವಾರ ಚೆನ್ನೈನಲ್ಲಿ ನಡೆಯಲಿರುವ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಸ್ಟಾರ್ಕ್ ಅಬ್ಬರಿಸೋದು ಖಚಿತವಾಗಿದೆ. ಆರ್‘ಸಿಬಿಯ ಬಲವಾದ ಬ್ಯಾಟಿಂಗ್ ಪಡೆಗೆ ಇದೀಗ ಬೌಲಿಂಗ್ ಬ್ರಹ್ಮಾಸ್ತ್ರ ಸೇರಿರುವುದು ಆನೆಬಲ ಬಂದಂತಾಗಿದೆ.

Share this Story:

Follow Webdunia kannada