Select Your Language

Notifications

webdunia
webdunia
webdunia
webdunia

ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲಲು ಟೀಂ ಇಂಡಿಯಾ ಜೆರ್ಸಿಯೇ ಕಾರಣವಂತೆ!

ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲಲು ಟೀಂ ಇಂಡಿಯಾ ಜೆರ್ಸಿಯೇ ಕಾರಣವಂತೆ!
ಲಂಡನ್ , ಮಂಗಳವಾರ, 2 ಜುಲೈ 2019 (09:45 IST)
ಲಂಡನ್: ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಆರೆಂಜ್ ಜರ್ಸಿ ಧರಿಸಿ ಆಡಿದ್ದೇ ಈ ಪಂದ್ಯದಲ್ಲಿ ಸೋಲಲು ಕಾರಣವಾಯಿತಂತೆ! ಹಾಗಂತ ಜಮ್ಮು ಕಾಶ್ಮೀರ ಮಾಜಿ ಸಿಎಮ ಮೆಹಬೂಬಾ ಮುಫ್ತಿ ಹೇಳಿದ್ದಾರೆ.


 ಈ ಮೊದಲು ಟೀಂ ಇಂಡಿಯಾ ಕಿತ್ತಳೆ ಬಣ್ಣದ ಸಮವಸ್ತ್ರ ಧರಿಸಲಿದೆ ಎಂಬ ಸುದ್ದಿ ಬಂದಾಗಲೂ ಮಹೆಬೂಬಾ ಇಲ್ಲೂ ಪ್ರಧಾನಿ ಮೋದಿ ಕೇಸರೀಕರಣ ಮಾಡಿದ್ದಾರೆ ಎಂದು ಆಪಾದಿಸಿದ್ದರು. ಅದು ಕೇವಲ ತಮಾಷೆಯಾಗಿತ್ತು ಎಂದು ಮೆಹಬೂಬಾ ಬಳಿಕ ಸ್ಪಷ್ಟನೆ ನೀಡಿದ್ದರು.

 ಆದರೆ ಇದೀಗ ಮತ್ತೆ ಟ್ವಿಟರ್ ಮೂಲಕ ಟೀಂ ಇಂಡಿಯಾ ಜೆರ್ಸಿ ಬಗ್ಗೆ ತಕರಾರು ತೆಗೆದಿರುವ ಮೆಹಬೂಬಾ ‘ನಾನು ಹೇಳುವುದು ಮೂಢನಂಬಿಕೆಯೇ ಇರಬಹುದು. ಆದರೆ ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ನಾಗಲೋಟಕ್ಕೆ ಬ್ರೇಕ್ ಹಾಕಿರುವುದು ಆರೆಂಜ್ ಜೆರ್ಸಿ’ ಎಂದು ಕಾರಣ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ 2019: ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಸರ್ಜರಿ ಸಾಧ್ಯತೆ