Webdunia - Bharat's app for daily news and videos

Install App

ಲಂಕಾ ವಿರುದ್ಧದ ಪಂದ್ಯ: ಟೀಂ ಇಂಡಿಯಾ ಗೆಲ್ಲಲು 217 ರನ್‌ಗಳ ಗುರಿ

Webdunia
ಭಾನುವಾರ, 20 ಆಗಸ್ಟ್ 2017 (18:06 IST)
ಅತಿಥೇಯ ಭಾರತ-ಶ್ರೀಲಂಕಾ ತಂಡಗಳ ನಡುವೆ ನಡೆಯುತ್ತಿರುವ ಐದು ಏಕದಿನ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಲಂಕಾ ತಂಡ 43.2 ಓವರ್‌ಗಳಲ್ಲಿ 216 ರನ್‌ಗಳನ್ನು ಪೇರಿಸಿ, ಎದುರಾಳಿ ಭಾರತ ತಂಡಕ್ಕೆ ಗೆಲುವಿಗಾಗಿ 217 ರನ್‌ಗಳ ಸವಾಲೊಡ್ಡಿದೆ. 
ನಿರೋಶನ್ ಡಿಕ್‌ವೆಲ್ಲಾ 74 ಎಸೆತಗಳಲ್ಲಿ 64 ರನ್ ಗಳಿಸುವ ಮೂಲಕ ಭರ್ಜರಿ ಅರ್ಧಶತಕ ದಾಖಲಿಸಿದರು. ಡ್ಯಾನ್‌ ಕೂಡಾ ಉತ್ತಮ ಪ್ರದರ್ಶನ ನೀಡಿದರಾದರೂ 44 ಎಸೆತಗಳನ್ನು ಎದುರಿಸಿ 35 ರನ್‌ಗಳಿಸಲು ಮಾತ್ರ ಶಕ್ತರಾದರು.
 
ಕುಸಲ್ ಮೆಂಡಿಸ್ 37 ಎಸೆತಗಳನ್ನು ಎದುರಿಸಿ 36 ರನ್ ಗಳಿಸಿದರು. ಉಪುಲ್ ತರಂಗ 23 ಎಸೆತಗಳನ್ನು ಎದುರಿಸಿ 13 ರನ್ ಬಾರಿಸಿದರು. ಏಂಜೆಲೋ ಮ್ಯಾಥ್ಯೂಸ್ 50 ಎಸೆತಗಳನ್ನು ಎದುರಿಸಿ 36 ರನ್‌ಗಳಿಸಿ ಅಜೇಯರಾಗಿ ಉಳಿದರು.
 
ನಂತರ ಬಂದ ಯಾವೊಬ್ಬ ಆಟಗಾರ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಲಿಲ್ಲ. ಕ್ಯಾಪ್ಟನ್‌ ಉಪ್ಪಲ್‌ ತರಂಗಾ(13),  ಚಾಮರ ಕಪುಗೆದರ(1), ವನಿಂದು ಹಸರಂಗ(2), ತಿಸಾರ ಪೆರೇರಾ(0), ಲಕ್ಷಣ ಸಂದಕನ(5), ಲಸಿತ್‌ ಮಲಿಂಗಾ(8), ವಿಶ್ವ ಫೆರ್ನಾಂಡೊ(0) ಅಲ್ಪ ಮೊತ್ತಕ್ಕೆ ಔಟಾಗಿ ಪೆವಿಲಿಯನ್‌ಗೆ ಮರಳಿದರು.
 
ಕೊನೆಯದಾಗಿ ತಂಡ 43.2 ಓವರ್‌‌ನಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 216ರನ್‌‌ ಗಳಿಸಲು ಮಾತ್ರ ಶಕ್ತವಾಯಿತು. ಭಾರತದ ಪರ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ ಜಸ್‌‌ಪ್ರೀತ್‌ ಬೂಮ್ರಾ, ಯಜುವೇಂದ್ರ ಚಹಾಲ್‌ ಹಾಗೂ ಕೇದಾರ್‌ ಜಾಧವ್‌ ತಲಾ 2 ವಿಕೆಟ್‌ ಪಡೆದುಕೊಂಡರೆ, ಅಕ್ಸರ್‌ ಪಟೇಲ್‌ 3 ವಿಕೆಟ್‌‌ ಪಡೆದುಕೊಂಡರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರೋಹಿತ್ ಶರ್ಮಾ ಇದ್ದ ರೂಂಗೆ ಗರ್ಲ್ ಫ್ರೆಂಡ್ ಕರೆದಿದ್ದ ಶಿಖರ್ ಧವನ್

ಜಸ್ಪ್ರೀತ್ ಬುಮ್ರಾ ಎರಡನೇ ಟೆಸ್ಟ್ ಆಡಲ್ಲ: ಅವರ ಸ್ಥಾನಕ್ಕೆ ಇವರೇ ಬೆಸ್ಟ್ ಅಂತಿದ್ದಾರೆ ಫ್ಯಾನ್ಸ್

ಆರೋಗ್ಯ ಸಂಬಂಧ ಬಿಗ್‌ ಅಪ್ಡೇಡ್ ನೀಡಿದ ಸೂರ್ಯಕುಮಾರ್ ಯಾದವ್‌

ಟೀಂ ಇಂಡಿಯಾಗೆ ಮುಂದಿನ ಟೆಸ್ಟ್ ಪಂದ್ಯ ಎಲ್ಲಿ, ಯಾವಾಗ ಇಲ್ಲಿದೆ ಡೀಟೈಲ್ಸ್

ನಾಚಿಕೆಯಿಲ್ಲದ ನಡವಳಿಕೆ: ಕ್ಯಾಚ್ ಬಿಟ್ಟು ಡ್ಯಾನ್ಸ್ ಮಾಡಿದ ಜೈಸ್ವಾಲ್‌ , ಕ್ರಿಕೆಟ್‌ ಪ್ರೇಮಿಗಳು ಆಕ್ರೋಶ

ಮುಂದಿನ ಸುದ್ದಿ
Show comments