Select Your Language

Notifications

webdunia
webdunia
webdunia
webdunia

ಶ್ರೀಲಂಕಾ ವಿರುದ್ಧ ಟ್ವೆಂಟಿ 20ಯಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ

ಶ್ರೀಲಂಕಾ ವಿರುದ್ಧ ಟ್ವೆಂಟಿ 20ಯಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ
ನವದೆಹಲಿ , ಸೋಮವಾರ, 1 ಫೆಬ್ರವರಿ 2016 (18:23 IST)
ಶ್ರೀಲಂಕಾ ವಿರುದ್ಧ ಪುಣೆಯಲ್ಲಿ ಫೆ.9ರಿಂದ ಆರಂಭವಾಗುವ ಮೂರು ಪಂದ್ಯಗಳ ಟ್ವೆಂಟಿ 20 ಅಂತಾರಾಷ್ಟ್ರೀಯ ಸರಣಿಯಲ್ಲಿ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಕೊಹ್ಲಿಗೆ ಬದಲಿಯಾಗಿ ದೆಹಲಿಯ ಎಡಗೈ ಸ್ಪಿನ್ನರ್ ಪವನ್ ನೇಗಿಯನ್ನು ಆಯ್ಕೆ ಮಾಡಲಾಗಿದೆ. 
 
 ಕೊಹ್ಲಿ ಅವರ ಶ್ರೇಷ್ಠ ರನ್ ಸರಾಸರಿಯಿಂದಾಗಿ ವಿಶ್ವದ ನಂಬರ್ ಒನ್ ಶ್ರೇಯಾಂಕದ ಟ್ವೆಂಟಿ 20 ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ.  ಕೊಹ್ಲಿ ಬದಲಿಗೆ ಆಯ್ಕೆಯಾಗಿರುವ ನೇಗಿ 56 ಟ್ವೆಂಟಿ 20 ಆಡಿದ್ದು, 46 ವಿಕೆಟ್ ಕಬಳಿಸಿದ್ದಾರೆ. ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು.
 
 ಭಾರತದ ಪುರುಷರ ತಂಡವು ಮೂರು ಟಿ20 ಪಂದ್ಯಗಳನ್ನು ಆಡಲಿದ್ದು, ಭಾರತದ ಮಹಿಳೆಯರ ತಂಡವು 3 ಏಕದಿನ ಪಂದ್ಯಗಳು ಮತ್ತು 3 ಟಿ20 ಪಂದ್ಯಗಳನ್ನು ಫೆ. 15ರಿಂದ ಆಡಲಿದೆ.  ಟಿ 20 ಸರಣಿಯ ಪುರುಷರ ತಂಡ ಇಂತಿದೆ-
 
 ಎಂಎಸ್ ಧೋನಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ಮನೀಷ್ ಪಾಂಡೆ, ಸುರೇಶ್ ರೈನಾ, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜೆಸ್ಪ್ರಿತ್  ಬಮ್ರಾ, ಆಶಿಶ್ ನೆಹ್ರಾ, ಹರ್ಭಜನ್ ಸಿಂಗ್, ಭುವನೇಶ್ವರ ಕುಮಾರ್, ಪವನ್ ನೇಗಿ.
 

Share this Story:

Follow Webdunia kannada