Select Your Language

Notifications

webdunia
webdunia
webdunia
webdunia

ನಾಯಕರಾಗಿ ಮಾತ್ರವಲ್ಲ, ಆಟಗಾರನಾಗಿ ಧೋನಿಯ ಪಾತ್ರ ಪರಿಶೀಲಿಸಬೇಕು: ಅಗರ್ಕರ್

ನಾಯಕರಾಗಿ ಮಾತ್ರವಲ್ಲ, ಆಟಗಾರನಾಗಿ ಧೋನಿಯ ಪಾತ್ರ ಪರಿಶೀಲಿಸಬೇಕು: ಅಗರ್ಕರ್
ಮುಂಬೈ , ಶನಿವಾರ, 10 ಅಕ್ಟೋಬರ್ 2015 (13:46 IST)
ಮಹೇಂದ್ರ ಸಿಂಗ್ ಧೋನಿ ಪಾತ್ರವನ್ನು ಕಿರು ಓವರುಗಳ ನಾಯಕರಾಗಿ ಮಾತ್ರವಲ್ಲ, ಆಟಗಾರನಾಗಿಯೂ  ಪರಿಶೀಲಿಸಬೇಕೆಂದು  ಭಾರತದ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ಆಯ್ಕೆದಾರರಿಗೆ ಕರೆ ನೀಡಿದ್ದಾರೆ. ಧೋನಿಗೆ ಹೋಲಿಕೆಯಾಗಿ ಟೆಸ್ಟ್ ನಾಯಕರಾಗಿ ವಿರಾಟ್ ಕೊಹ್ಲಿ ಅವರ ಸಾಧನೆಯನ್ನು ಗಮನಿಸುವಂತೆಯೂ ಮತ್ತು ದಕ್ಷಿಣ ಆಫ್ರಿಕಾ ಸರಣಿಯ ಬಳಿಕ ಕಿರು ಓವರುಗಳಲ್ಲಿ ಧೋನಿಯ ಪಾತ್ರವನ್ನು ಪರಿಶೀಲಿಸುವಂತೆಯೂ ಕರೆ ನೀಡಿದರು. 
 
ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಟಿ 20 ಸರಣಿಯನ್ನು 0-2ರಿಂದ ಸೋತಿದ್ದು, ಮೂರನೇ ಪಂದ್ಯ ಮಳೆಯಿಂದ ವಾಷ್ ಔಟ್ ಆಗಿತ್ತು. ಈ ಹಿನ್ನೆಲೆಯಲ್ಲಿ ಧೋನಿಯ ಪ್ರದರ್ಶನವನ್ನು ವಿಶ್ಲೇಷಿಸಿದ ಅವರು ಧೋನಿ ಭಾರತದ ಉತ್ತಮ ಆಟಗಾರನಾಗಿದ್ದರೂ, ತಂಡಕ್ಕೆ ಭಾರವಾಗಿ ಪರಿಣಮಿಸುವುದು ಬೇಕಾಗಿಲ್ಲ. ಅವರು ಈಗ ನೀಡುತ್ತಿರುವ ಪ್ರದರ್ಶನಕ್ಕಿಂತ ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ. ಅವರು ಹಲವು ವರ್ಷಗಳಿಂದ ಉತ್ತಮ ಸಾಧನೆ ತೋರಿದ್ದಾರೆಂದರೆ, ಈಗ ವಿಫಲವಾಗುವುದು ಸರಿಯೆನಿಸುವುದಿಲ್ಲ. ಧೋನಿ ನಾಯಕರಾಗಿ ಮಾತ್ರವಲ್ಲ ಆಟಗಾರರಾಗಿ ಹೇಗೆ ಆಡುತ್ತಿದ್ದಾರೆಂದು ಆಯ್ಕೆದಾರರು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಅಗರ್ಕರ್ ಹೇಳಿದರು. 
 
ದಕ್ಷಿಣ ಆಫ್ರಿಕಾ ವಿರುದ್ಧ ಏಕ ದಿನ ಅಂತಾರಾಷ್ಟ್ರೀಯ ಐದು ಪಂದ್ಯಗಳ ಸರಣಿಗೆ ಮುನ್ನ, ಭಾರತದ ತಂಡವು ಉಮೇಶ್ ಯಾದವ್ ಅವರ ನೈಜ ಪೇಸ್ ಬೌಲಿಂಗ್‌ನಿಂದ ಚೇತರಿಸಿಕೊಳ್ಳಲಿದೆ ಎಂದು ಹೇಳಿದರು. 
 
ನೀವು ವೇಗದ ಬೌಲರ್ ಆಗುವುದು ಬೇಡ, ಆದರೆ ಉತ್ತಮ ಬೌಲರ್ ಆಗಿರಬೇಕು. ಆದರೆ ಟಿ 20 ಪಂದ್ಯದಲ್ಲಿ ನಮಗೆ ಗುಣಮಟ್ಟದ ಬೌಲರ್ ಅಗತ್ಯವನ್ನು ಎತ್ತಿತೋರಿಸಿದೆ ಎಂದು ಅಗರ್ಕರ್ ಹೇಳಿದರು.  
 
ಧೋನಿ ಏಕ ದಿನ ಪಂದ್ಯಗಳಲ್ಲಿ  4ನೇ ಕ್ರಮಾಂಕದಲ್ಲಿ ಆಡುವುದನ್ನು ಅಗರ್ಕರ್ ಟೀಕಿಸಿದರು.  ಇದು ಅಜಿಂಕ್ಯಾ ರಹಾನೆ ಮುಂತಾದವರಿಗೆ ಅನ್ಯಾಯ ಮಾಡಿದ ಹಾಗಾಗುತ್ತದೆ ಮತ್ತು ತಂಡಕ್ಕೆ ಅನುಕೂಲ ಉಂಟುಮಾಡುವುದಿಲ್ಲ ಎಂದು ಅಗರ್ಕರ್ ವಿಶ್ಲೇಷಿಸಿದರು. 
 

Share this Story:

Follow Webdunia kannada