Select Your Language

Notifications

webdunia
webdunia
webdunia
webdunia

ಕೊಹ್ಲಿ 1 ರನ್‌ಗೆ ಔಟಾಗಿದ್ದಕ್ಕೆ ಅನುಷ್ಕಾಳಿಗೆ ಟೀಕೆಯ ಸುರಿಮಳೆ

ಕೊಹ್ಲಿ  1 ರನ್‌ಗೆ ಔಟಾಗಿದ್ದಕ್ಕೆ ಅನುಷ್ಕಾಳಿಗೆ ಟೀಕೆಯ ಸುರಿಮಳೆ
ನವದೆಹಲಿ , ಗುರುವಾರ, 26 ಮಾರ್ಚ್ 2015 (19:05 IST)
ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡದೇ ಒಂದು ರನ್‌ಗೆ ಔಟಾಗಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಗೆಳತಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾಳೇ ಕಾರಣ ಎಂದು ಟೀಕಿಸಲಾಗಿದೆ. ಕೊಹ್ಲಿ 13 ಎಸೆತಗಳನ್ನು ಎದುರಿಸಿ ಮಿಚೆಲ್ ಜಾನ್ಸನ್ ಎಸೆತದಲ್ಲಿ ಹ್ಯಾಡಿನ್‌ಗೆ ಕ್ಯಾಚಿತ್ತು ಔಟಾಗಿದ್ದರು. 
 
 ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ ಅವರು ಒಂದು ರನ್ ಸ್ಕೋರ್ ಮಾಡುವುದನ್ನು ನೋಡಲು ಸಿಡ್ನಿಗೆ ಬಂದಿದ್ದಾರೆ. ನೀನು ಸಿಡ್ನಿಗೆ ಏಕೆ ಬಂದೆ, ಮೂರ್ಖಳೇ ಎಂದು ಟ್ವೀಟ್ ಮಾಡಲಾಗಿದೆ. ಸೆಮೀಸ್‌ಗೆ ಅನುಷ್ಕಾ ಸಿಡ್ನಿಗೆ ಬಂದಿದ್ದೇ ಅತೀ ಕೆಟ್ಟ ಪ್ರಮಾದವಾಗಿದೆ. ಇಡೀ ದೇಶ ಅನುಷ್ಕಾಳನ್ನು ಕ್ಷಮಿಸುವುದಿಲ್ಲ ಎಂದು ಕೊಹ್ಲಿ ಔಟಾದ ಕೂಡಲೇ ಟ್ವೀಟ್ ಮಾಡಲಾಗಿದೆ.

 ಆಟದ ಭಾಗವಾಗದಿರುವ, ಪಂದ್ಯ ನೋಡಿ ತಂಡಕ್ಕೆ ಹುರಿದುಂಬಿಸಲು ಬಂದಿದ್ದ ಅನುಷ್ಕಾಳ ಮೇಲೆ  ಬ್ಯಾಟ್ಸ್‌ಮನ್ ವೈಫಲ್ಯವನ್ನು ಹೊಣೆಯಾಗಿಸುವುದು ಏಕೆ ಎನ್ನುವುದೇ ಪ್ರಶ್ನೆಯಾಗಿದೆ.

 ಅನುಷ್ಕಾ ಕೂಡ ಬಾಲಿವುಡ್ ವೃತ್ತಿಜೀವನದಲ್ಲಿ ಕಠಿಣ ಹಂತವನ್ನು ಹಾದು ಬಂದಿದ್ದಾಳೆ. ಆದರೆ ಯಾರೂ ಕೊಹ್ಲಿಯನ್ನು ಅದಕ್ಕಾಗಿ ಬಯ್ಯಲಿಲ್ಲ.  ಆಟವನ್ನು ಆಟವಾಗಿ ಕಾಣುವುದು ಭಾರತದ ಅಭಿಮಾನಿಗಳಿಗೆ ಮುಖ್ಯವಾಗಿದ್ದು, ಕುಟುಂಬ ಮತ್ತು ಆಟಗಾರರಿಗೆ ನಿಕಟ ಸಾಮೀಪ್ಯ ಹೊಂದಿರುವವರನ್ನು ಟೀಕಿಸುವುದು ಸರಿಯಲ್ಲ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ. 

Share this Story:

Follow Webdunia kannada