Webdunia - Bharat's app for daily news and videos

Install App

ಶ್ರೀಲಂಕಾದ ನೆಲದಲ್ಲಿ ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ

Webdunia
ಮಂಗಳವಾರ, 1 ಸೆಪ್ಟಂಬರ್ 2015 (18:34 IST)
ಕೊಲಂಬೊ:  ನಾಯಕ ವಿರಾಟ್ ಕೊಹ್ಲಿ ಭಾರತಕ್ಕೆ 2-1ರಿಂದ ಸರಣಿ ಜಯ ತಂದುಕೊಡುವ ಮೂಲಕ ಸಿಂಹಳ ಕ್ರೀಡಾ ಕ್ಲಬ್ ಮೈದಾನದಲ್ಲಿ ಇತಿಹಾಸ ನಿರ್ಮಿಸಿದರು. ದ್ವೀಪ ರಾಷ್ಟ್ರದಲ್ಲಿ ಭಾರತ ಶ್ರೀಲಂಕಾವನ್ನು 117 ರನ್‌ಗಳಿಂದ 2-1ರಿಂದ ಸೋಲಿಸಿ ಇತಿಹಾಸ ನಿರ್ಮಿಸಿದೆ. 386 ರನ್ ಬೆನ್ನಟ್ಟಿದ ಶ್ರೀಲಂಕಾ ಅಂತಿಮ ದಿನ 268ಕ್ಕೆ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಯಿತು. ಗಾಲೆಯಲ್ಲಿ ಓಪನಿಂಗ್ ಪಂದ್ಯ ಸೋತಬಳಿಕ ಭಾರತಕ್ಕೆ ಇದು ಭರ್ಜರಿ ಕಮ್ ಬ್ಯಾಕ್ ಆಗಿದೆ. 
 
 
ಈ ಜಯದೊಂದಿಗೆ ಕೊಹ್ಲಿ ಮಹಮ್ಮದ್ ಅಜರುದ್ದೀನ್ ಬಳಿಕ ಶ್ರೀಲಂಕಾದಲ್ಲಿ ಟೆಸ್ಟ್ ಗೆಲುವು ಗಳಿಸಿದ ಎರಡನೇ ನಾಯಕರಾಗಿದ್ದಾರೆ.  1993ರಲ್ಲಿ ಅಜರುದ್ದೀನ್ ನಾಯಕತ್ವದಲ್ಲಿ ಭಾರತ ಗೆಲುವು ಗಳಿಸಿತ್ತು. ಕೊಹ್ಲಿ ಭಾರತದ ಲೀಡಿಂಗ್ ರನ್ ಸ್ಕೋರರ್ ಕೂಡ ಆಗಿದ್ದು, 6 ಇನ್ನಿಂಗ್ಸ್‌ಗಳಲ್ಲಿ ಒಂದು ಶತಕ ಮತ್ತು ಒಂದು ಅರ್ಧಶತಕದಿಂದ 233 ರನ್ ಗಳಿಸಿದ್ದರು. 
 
 26 ವರ್ಷದ ಕೊಹ್ಲಿಗೆ ಇದು ದಾಖಲೆಯ ಸಾಧನೆಯಾಗಿದ್ದು, ಶ್ರೀಲಂಕಾ ಪ್ರವಾಸದ ನಾಯಕರಾಗಿ ಮೊದಲ ಯಶಸ್ಸಿನ ರುಚಿಯನ್ನು ಅವರು ಕಂಡಿದ್ದಾರೆ. ಸರಣಿಯಲ್ಲಿ ನಾಯಕರಾಗಿ ಗೆದ್ದ ಮೊದಲ ಜಯ ಇದಾಗಿದೆ.  ವಿದೇಶದಲ್ಲಿ ಸರಣಿ ಗೆದ್ದ ಅತೀ ಕಿರಿಯ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 
 
1985 -ಸೋಲು 0-1 (3 ಪಂದ್ಯಗಳ ಸರಣಿಯಲ್ಲಿ) - (ನಾಯಕ - ಕಪಿಲ್ ದೇವ್) ,
1993 - ಗೆಲುವು 1-0 (3) (ಮೊಹಮ್ಮದ್ ಅಜರುದ್ದೀನ್), 
1997 - ಡ್ರಾ 0-0 (2) (ಸಚಿನ್) 
1999 (ಏಷ್ಯನ್ ಟೆಸ್ಟ್ ಚಾಂಪಿಯನ್ ಷಿಪ್ ) - ಸೋಲು 1-2 (3) (ಸೌರವ್ ಗಂಗೂಲಿ) 2008 -  ಸೋಲು  1-2 (3) (ಅನಿಲ್ ಕುಂಬ್ಳೆ) 
2010 - ಡ್ರಾ 1-1 (3) (ಮಹೇಂದ್ರ ಸಿಂಗ್ ಧೋನಿ) 
2015  2-1 (3) (ವಿರಾಟ್ ಕೊಹ್ಲಿ)
 
 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments