Select Your Language

Notifications

webdunia
webdunia
webdunia
webdunia

ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಟಿ20 ದಾಖಲೆಯ ರೇಸ್‌ನಲ್ಲಿ ಕೊಹ್ಲಿ, ರೈನಾ

ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಟಿ20 ದಾಖಲೆಯ ರೇಸ್‌ನಲ್ಲಿ ಕೊಹ್ಲಿ, ರೈನಾ
ಬೆಂಗಳೂರು , ಮಂಗಳವಾರ, 15 ಸೆಪ್ಟಂಬರ್ 2015 (15:59 IST)
ಧರ್ಮಶಾಲಾದಲ್ಲಿ ಅಕ್ಟೋಬರ್ 2ರಿಂದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟ್ವೆಂಟಿ 20 ಅಂತಾರಾಷ್ಟ್ರೀಯ ಸರಣಿ ಆಡುವಾಗ ವಿರಾಟ್ ಕೊಹ್ಲಿ ಮತ್ತು ಸುರೇಶ್ ರೈನಾ  ದಾಖಲೆ ನಿರ್ಮಿಸುವ ರೇಸ್‌ನಲ್ಲಿದ್ದಾರೆ. 26 ವರ್ಷ ವಯಸ್ಸಿನ ಕೊಹ್ಲಿ ಟಿ 20 ಕ್ರಿಕೆಟ್‌ನಲ್ಲಿ 1000 ರನ್ ಮುಟ್ಟುವ ಫೇವರಿಟ್ ಭಾರತೀಯ ಬ್ಯಾಟ್ಸ್‌ಮನ್  ಆಗಿದ್ದಾರೆ.  ಈ ಮೈಲಿಗಲ್ಲನ್ನು ಮುಟ್ಟಲು ಅವರಿಗೆ ಕೇವಲ 28 ರನ್ ಅಗತ್ಯವಿದೆ.  ರೈನಾಗೆ 1000 ರನ್ ಗಡಿಯನ್ನು ಮುಟ್ಟಲು 53 ರನ್ ದೂರವಿದ್ದಾರೆ. 1000 ರನ್ ಗಡಿಯನ್ನು ಯಾರು ಮೊದಲಿಗೆ ಮುಟ್ಟುತ್ತಾರೆ ಎನ್ನುವುದು ಆಸಕ್ತಿದಾಯಕ ಸಂಗತಿಯಾಗಿದೆ. 
 
ಸದ್ಯಕ್ಕೆ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಕೊಹ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತೀ ಹೆಚ್ಚು ರನ್ ಗಳಿಸಿದ್ದಾರೆ. ದೆಹಲಿಯ ಬ್ಯಾಟ್ಸ್‌ಮನ್ ಕೊಹ್ಲಿ 18 ಪಂದ್ಯಗಳಿಂದ 972 ರನ್ ಕಲೆಹಾಕಿದ್ದರು. ರೈನಾ 947 ರನ್‌ಗಳಿಂದ ಮೂರನೆಯವರಾಗಿದ್ದಾರೆ. 
 
ಒಟ್ಟಾರೆಯಾಗಿ ಟಿ 20ಯಲ್ಲಿ ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್ 71 ಪಂದ್ಯಗಳಿಂದ 2140 ರನ್‌ಗಳೊಂದಿಗ್ ಅತ್ಯಧಿಕ ರನ್ ಸ್ಕೋರರ್ ಎನಿಸಿದ್ದಾರೆ. ಟಿ 20 ಯಲ್ಲಿ ಭಾರತದ ಪರವಾಗಿ ಅತೀ ಹೆಚ್ಚು ರನ್ ಗಳಿಸಿದವರು 1. ವಿರಾಟ್ ಕೊಹ್ಲಿ 972 ರನ್ ಗಳು ( 28 ಪಂದ್ಯಗಳು) 2. ಯುವರಾಜ್ ಸಿಂಗ್ 968 (40) 3. ಸುರೇಶ್ ರೈನಾ 947 (44) 4. ಗೌತಮ್ ಗಂಭೀರ್ 932 (37) 5. ಎಂಎಸ್ ಧೋನಿ 849 (50)
 
 

Share this Story:

Follow Webdunia kannada