ಜಿಂಬಾಬ್ವೆ ಸರಣಿಗೂ ಕೆಎಲ್ ರಾಹುಲ್ ಯಾಕಿಲ್ಲ? ಅನುಮಾನಗಳಿಗೆ ತೆರೆ ಎಳೆದ ಕೆಎಲ್ ರಾಹುಲ್

Webdunia
ಭಾನುವಾರ, 31 ಜುಲೈ 2022 (09:50 IST)
ಬೆಂಗಳೂರು: ಜಿಂಬಾಬ್ವೆ ಸರಣಿಗೆ ಫಿಟ್ ಆಗಿ ಕೆಎಲ್ ರಾಹುಲ್ ತಂಡದ ನಾಯಕತ್ವ ವಹಿಸಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ನಿನ್ನೆ ಬಿಸಿಸಿಐ ಜಿಂಬಾಬ್ವೆ ಸರಣಿಗೆ ಶಿಖರ್ ಧವನ್ ನೇತೃತ್ವದಲ್ಲಿ ಯುವ ಕ್ರಿಕೆಟಿಗರ ತಂಡ ಪ್ರಕಟಿಸಿದ್ದು, ರಾಹುಲ್ ಹೆಸರಿರಲಿಲ್ಲ.

ಇದರ ಬೆನ್ನಲ್ಲೇ ರಾಹುಲ್ ಫಿಟ್ನೆಸ್ ಬಗ್ಗೆ ನಾನಾ ಊಹಾಪೋಹಗಳು ಎದ್ದಿತ್ತು. ಈ ಕಾರಣಕ್ಕೆ ಸ್ವತಃ ರಾಹುಲ್ ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.

‘ಜೂನ್ ನಲ್ಲಿ ನನಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿದ್ದು, ವಿಂಡೀಸ್ ಸರಣಿಗೆ ತಂಡಕ್ಕೆ ಮರಳಬಹುದು ಎಂಬ ವಿಶ್ವಾಸದಲ್ಲಿದ್ದೆ. ಆದರೆ ಆಗ ನನಗೆ ಕೊರೋನಾ ಕಾಣಿಸಿಕೊಂಡಿತು. ಇದರಿಂದಾಗಿ ನಾನು ಫಿಟ್ನೆಸ್ ಮರಳಲು ವಹಿಸುತ್ತಿದ್ದ ಶ್ರಮಕ್ಕೆ ಹಿನ್ನಡೆಯಾಯ್ತು. ಆದಷ್ಟು ಬೇಗ ಫಿಟ್ ಆಗಿ ತಂಡ ಸೇರಿಕೊಳ್ಳುತ್ತೇನೆಂಬ ವಿಶ್ವಾಸದಲ್ಲಿದ್ದೇನೆ. ನನ್ನ ದೇಶವನ್ನು ಪ್ರತಿನಿಧಿಸುವುದು ದೊಡ್ಡ ಗೌರವ, ತಂಡಕ್ಕೆ ಮರಳಲು ಕಾತುರನಾಗಿದ್ದೇನೆ’ ಎಂದು ರಾಹುಲ್ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AUS: ಟಿ20 ಯಲ್ಲೂ ಆಸ್ಟ್ರೇಲಿಯಾ ಕೈಲಿ ಹೊಡೆಸಿಕೊಂಡ ಟೀಂ ಇಂಡಿಯಾ

ಅಭಿಷೇಕ್‌ ಶರ್ಮಾ ಬ್ಯಾಗ್‌ ನೋಡಿ ಹರ್ಷದೀಪ್‌, ಶುಭ್ಮನ್ ಗಿಲ್ ಹೀಗೇ ಕಾಲೆಳೆಯುವುದಾ

ಹುಡುಗರ ಹೃದಯ ಗೆದ್ದ ಸ್ಮೃತಿ ಮಂಧಾನಗೆ ಮದುವೆ ಫಿಕ್ಸ್‌, ಎಲ್ಲಿ, ಯಾವಾಗ ಇಲ್ಲಿದೆ ಮಾಹಿತಿ

IND vs AUS: ವಿಕೆಟ್ ಮೇಲೆ ವಿಕೆಟ್ ಬಿದ್ದರೂ ಅಭಿಷೇಕ್ ಶರ್ಮಾಗೆ ಕ್ಯಾರೇ ಇಲ್ಲ

ಮತಾಂತರ ಆರೋಪದಿಂದ ಆತಂಕದ ಖಾಯಿಲೆವರೆಗೆ: ಸೆಮಿಫೈನಲ್ ಸ್ಟಾರ್ ಜೆಮಿಮಾ ರೊಡ್ರಿಗಸ್ ಕತೆ

ಮುಂದಿನ ಸುದ್ದಿ
Show comments