ಕರ್ನಾಟಕ ಕ್ರಿಕೆಟಿಗ ಹೊಯ್ಸಳಗೆ ಇದ್ದಕ್ಕಿದ್ದಂತೆ ಸಾಯುವಂತದ್ದು ಏನಾಗಿತ್ತು

Krishnaveni K
ಶನಿವಾರ, 24 ಫೆಬ್ರವರಿ 2024 (13:46 IST)
Photo Courtesy: facebook
ಬೆಂಗಳೂರು: ಕರ್ನಾಟಕದ ಯುವ ಕ್ರಿಕೆಟಿಗ ಕೆ ಹೊಯ್ಸಳ ಹೃದಯಸ್ತಂಬನಕ್ಕೊಳಗಾಗಿ ಹಠಾತ್ ನಿಧನರಾಗಿದ್ದು ಎಲ್ಲರನ್ನೂ ದಿಗ್ಬ್ರಮೆಗೊಳಿಸಿದೆ. ಅವರ ನಿಧನಕ್ಕೆ ಅಭಿಮಾನಿಗಳು, ಸ್ನೇಹಿತರು ಕಂಬನಿ ಮಿಡಿದಿದ್ದಾರೆ.

ಎರಡು ವರ್ಷಗಳ ಮೊದಲು ಪುನೀತ್ ರಾಜ್ ಕುಮಾರ್ ಕೂಡಾ ಹೃದಯಸ್ತಂಬನಕ್ಕೊಳಗಾಗಿ ಸಾವನ್ನಪ್ಪಿದ್ದರು. ಆ ಬಳಿಕ ನಾವು ಅಂತಹದ್ದೇ ಅನೇಕ ಘಟನೆಗಳನ್ನು ಕೇಳುತ್ತಿದ್ದೇವೆ. ಇದೀಗ ಹೊಯ್ಸಳಗೂ ಅದೇ ರೀತಿ ಸಾವಾಗಿದೆ. ಎಲ್ಲರೊಂದಿಗೆ ಚೆನ್ನಾಗಿಯೇ ಇದ್ದ ಹೊಯ್ಸಳ ದಿಡೀರ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಬೆಂಗಳೂರಿನ  ಆರ್ ಎಸ್ ಐ ಮೈದಾನದಲ್ಲಿ ನಡೆಯುತ್ತಿರುವ ತಮಿಳುನಾಡು ವಿರುದ್ಧದ ಏಜಿಸ್ ಸೌತ್ ಝೋನ್ ಪಂದ್ಯಾವಳಿಯಲ್ಲಿ ಹೊಯ್ಸಳ ಭಾಗಿಯಾಗಿದ್ದರು. ಮಧ‍್ಯಾಹ್ನ ಭೋಜನ ವಿರಾಮದ ವೇಳೆ  ತಂಡದ ಆಟಗಾರರ ಜೊತೆಗಿದ್ದಾಗ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದಾರೆ. ತಕ್ಷಣವೇ ಅಲ್ಲಿದ್ದ ಫಿಸಿಯೋಗಳು ಹೊಯ್ಸಳಗೆ ಪ್ರಥಮ ಚಿಕಿತ್ಸೆ ನೀಡಿದರು. ಬಳಿಕ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರ ಪ್ರಾಣ ಪಕ್ಷಿಯೇ ಹಾರಿಹೋಗಿತ್ತು.

ಸ್ಪುರದ್ರೂಪಿ, ಇನ್ನೂ 35 ವರ್ಷದ ಹೊಯ್ಸಳ ಸಾವು ಎಲ್ಲರನ್ನೂ ಮತ್ತೊಮ್ಮೆ ಶಾಕ್ ಗೊಳಗಾಗಿಸಿದೆ. ಬದುಕಿನಲ್ಲಿ ಇನ್ನೂ ಸಾಕಷ್ಟು ನೋಡುವುದಿತ್ತು. ಆಗಲೇ ಇಹಲೋಕದ ಪಯಣ ಮುಗಿಸಿದ್ದು ದುರದೃಷ್ಟಕರ.  

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ, ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ವೇಳಾಪಟ್ಟಿ, ಸಮಯ ವಿವರ ಇಲ್ಲಿದೆ

ಮೊಹಮ್ಮದ್ ಶಮಿ ಫಿಟ್ನೆಸ್ ಬಗ್ಗೆ ಹೊರಗೊಂದು ಒಳಗೊಂದು ಹೇಳುತ್ತಿದ್ದಾರಾ

ಆರ್ ಸಿಬಿಗೆ ಹೊಸ ಮಾಲಿಕರು ಬಂದರೆ ಹೆಸರೂ ಬದಲಾಗುತ್ತಾ

ರವೀಂದ್ರ ಜಡೇಜಾರನ್ನು ಸೇಲ್ ಮಾಡಲು ಹೊರಟ ಸಿಎಸ್ ಕೆ: ಸ್ವಲ್ಪವಾದ್ರೂ ಕೃತಜ್ಞತೆ ಬೇಡ್ವಾ ಫ್ಯಾನ್ಸ್ ಗರಂ

ಗಾಯಗೊಂಡು ತಂಡದಿಂದ ಹೊರಬಿದ್ದರೂ ಪ್ರತೀಕಾ ರಾವಲ್‌ಗೆ ಚಿನ್ನ ಪದಕ ಸಿಗಲು ಇವರ ಕೃಪೆಯೇ ಕಾರಣ

ಮುಂದಿನ ಸುದ್ದಿ
Show comments