Select Your Language

Notifications

webdunia
webdunia
webdunia
webdunia

ಅನಿಲ್ ಕುಂಬ್ಳೆಗೆ ''ಜಂಬೊ'' ಉಪನಾಮ ಸಿಕ್ಕಿದ್ದು ಹೇಗೆ?

ಅನಿಲ್ ಕುಂಬ್ಳೆಗೆ ''ಜಂಬೊ'' ಉಪನಾಮ ಸಿಕ್ಕಿದ್ದು ಹೇಗೆ?
ನವದೆಹಲಿ: , ಬುಧವಾರ, 6 ಜುಲೈ 2016 (15:36 IST)
ನೂತನವಾಗಿ ನೇಮಕವಾದ ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ಮಂಗಳವಾರ ತಮಗೆ ಜಂಬೊ ಎಂಬ ಉಪನಾಮವನ್ನು ಇಟ್ಟಿದ್ದು ಭಾರತದ ಮಾಜಿ ಕ್ರಿಕೆಟರ್ ನವಜೋತ್ ಸಿಂಗ್ ಸಿದು ಎಂದು ಬಹಿರಂಗ ಮಾಡಿದ್ದಾರೆ. ಟೀಂ ಇಂಡಿಯಾದ ನಿರ್ಣಾಯಕ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಮುನ್ನ, ಪ್ರಶ್ನೋತ್ತರ ಸೆಷನ್ ಸಂದರ್ಭದಲ್ಲಿ ಟ್ವಿಟರ್‌ನಲ್ಲಿ  ಕುಂಬ್ಳೆ ಈ ಜಂಬೊ ರಹಸ್ಯವನ್ನು ಬಹಿರಂಗಪಡಿಸಿದರು.
 
ಇರಾನಿ ಟ್ರೋಫಿ ಪಂದ್ಯದಲ್ಲಿ ನಾನು ಕೋಟ್ಲಾದಲ್ಲಿ ರೆಸ್ಟ್ ಆಫ್ ಇಂಡಿಯಾ ಪರ ಆಡುವಾಗ ಅವರು ಮಿಡ್ ಆನ್‌ನಲ್ಲಿ ನಿಂತಿದ್ದರು. ನಾನು ಎಸೆದ ಚೆಂಡಿನ ವೇಗವನ್ನು ಕಂಡ  ಸಿದು ಜಂಬೊ ಜೆಟ್ ಎಂದು ಬಣ್ಣಿಸಿದ್ದರು. ಜೆಟ್ ಡ್ರಾಪ್ ಆಗಿ ಜಂಬೊ ಮಾತ್ರ ಉಳಿದುಕೊಂಡಿತು.ಆಗಿನಿಂದ ನನ್ನ ಎಲ್ಲಾ ಟೀಂಮೇಟ್‌ಗಳು ಜಂಬೊ ಎಂದು ಕರೆಯುತ್ತಿದ್ದಾರೆ ಎಂದು ಕುಂಬ್ಳೆ ಹೇಳಿದ್ದಾರೆ.
 
ಕುಂಬ್ಳೆ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಒಂದು ವರ್ಷಕ್ಕೆ ಆಯ್ಕೆಯಾಗಿದ್ದಾರೆ. ಪ್ರಶ್ನೋತ್ತರ ಸೆಷನ್‌ನಲ್ಲಿ ಅವರು ತಾವು ಕೊಹ್ಲಿ ಜತೆ ಕೆಲಸ ಮಾಡಲು ಪುಳುಕಿತರಾಗಿರುವುದಾಗಿ ಹೇಳಿದರು.  ಆರ್‌ಸಿಬಿಯಲ್ಲಿ ಅಂಡರ್-19 ಆಟಗಾರನಾಗಿದ್ದಾಗ ನಾನು ಕೊಹ್ಲಿಯನ್ನು ನೋಡಿದ್ದು, ಕಳೆದ ಕೆಲವು ವರ್ಷಗಳಲ್ಲಿ ಪರಿಪಕ್ವರಾಗಿದ್ದಾರೆಂದು ಕುಂಬ್ಳೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

11 ಸಿಕ್ಸರುಗಳು, ಕ್ರಿಸ್ ಗೇಲ್ ದಾಖಲೆಯ 18ನೇ ಟಿ 20 ಶತಕ , 54 ಎಸೆತಗಳಲ್ಲಿ 108