IND vs ENG: ಸ್ವಲ್ಪ ರನ್ ಮಾಡಿದ್ದಕ್ಕೆ ಇಷ್ಟುದ್ದ ಮಾತಾಡ್ತಾನೆ: ಜಾನಿ ಬೇರ್ ಸ್ಟೋ ಕಾಲೆಳದ ಸರ್ಫರಾಜ್ ಖಾನ್

Krishnaveni K
ಶನಿವಾರ, 9 ಮಾರ್ಚ್ 2024 (12:04 IST)
Photo Courtesy: Twitter
ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟಿಗ ಜಾನಿ ಬೇರ್ ಸ್ಟೋ ಮತ್ತು ಶುಬ್ಮನ್ ಗಿಲ್, ಸರ್ಫರಾಜ್ ಖಾನ್ ಅವರನ್ನೊಳಗೊಂಡ ಮಾತಿನ ಚಕಮಕಿ ಈಗ ವೈರಲ್ ಆಗಿದೆ.

ಇಂಗ್ಲೆಂಡ್ ಸಂಕಷ್ಟದಲ್ಲಿದ್ದಾಗಲೂ ತಮ್ಮ ಬಾಝ್ ಬಾಲ್ ಶೈಲಿಯ ಬ್ಯಾಟಿಂಗ್ ನಡೆಸಿದ ಜಾನಿ ಬೇರ್ ಸ್ಟೋ 31 ಎಸೆತಗಳಿಂದ 39 ರನ್ ಗಳಿಸಿ ಔಟಾದರು. ಆದರೆ ಇದಕ್ಕೆ ಮೊದಲು ಅವರು ಭಾರತೀಯ ಫೀಲ್ಡರ್ ಶುಬ್ಮನ್ ಗಿಲ್ ರನ್ನು ಕೆಣಕಿದರು. ಅದಕ್ಕೆ ಗಿಲ್ ಕೂಡಾ ತಿರುಗೇಟು ನೀಡಿದರು. ಈ ನಡುವೆ ಸರ್ಫರಾಜ್ ಖಾನ್ ಕೂಡಾ ಬೇರ್ ಸ್ಟೋ ಕಾಲೆಳೆದಿದ್ದಾರೆ.

ಪಕ್ಕದಲ್ಲಿದ್ದ ಗಿಲ್ ರನ್ನು ಉದ್ದೇಶಿಸಿ ಮೊದಲು ಬೇರ್ ಸ್ಟೋ ‘ನೀನು ಏನು ಹೇಳಿದೆ? ಜೇಮ್ಸ್ ಆಂಡರ್ಸನ್ ಗೆ ಸುಸ್ತಾಯಿತು ಅಂತಾನಾ? ಹೇಗೆ ಅವರು ಬಳಿಕ ನಿನ್ನನ್ನು ಔಟ್ ಮಾಡಲಿಲ್ವಾ?’ ಎಂದು ಕೆಣಕಿದರು. ಆಗ ಗಿಲ್, ‘ಅದಕ್ಕೇನಿವಾಗ? ನನ್ನನ್ನು ಔಟ್ ಮಾಡುವಾಗ ನನ್ನ 100 ರನ್ ಪೂರ್ತಿಯಾಗಿತ್ತು. ನೀನು ಇಲ್ಲಿ ಎಷ್ಟು ರನ್ ಮಾಡಿದೆ?’ ಎಂದು ಪ್ರತ್ಯುತ್ತರ ನೀಡಿದ್ದಾರೆ.

ಇದಕ್ಕೆ ಬೇರ್ ಸ್ಟೋ ‘ನೀನು ಇಂಗ್ಲೆಂಡ್ ನಲ್ಲಿ ಎಷ್ಟು ರನ್ ಮಾಡಿದ್ದೀಯಾ?’ ಎಂದು ತಿರುಗೇಟು ನೀಡಿದರು. ಈ ವೇಳೆ ಮಧ‍್ಯಪ್ರವೇಶಿಸಿದ ಸರ್ಫರಾಜ್ ಖಾನ್, ‘ಜಾನಿ ಭಾಯಿ ಆರಾಮವಾಗಿರು. ಇಲ್ಲಿ ಸ್ವಲ್ಪ ರನ್ ಮಾಡಿದೆ ಎಂದ ಕೂಡಲೇ ಮಾತನಾಡಲು ಶುರು ಮಾಡಿದ’ ಎಂದು ಕಾಲೆಳೆದಿದ್ದಾರೆ. ಬಳಿಕ ಜಾನಿ ಬೇರ್ ಸ್ಟೋ ಔಟಾಗಿ ಹೋಗುವಾಗಲೂ ಭಾರತೀಯ ಫೀಲ್ಡರ್ ಗಳತ್ತ ಸಿಡಿಮಿಡಿಗೊಳ್ಳುತ್ತಲೇ ತೆರಳಿದರು.

 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರಿಷಬ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌, ಗಾಯದಿಂದ ಚೇತರಿಸಿಕೊಂಡ ಪಂತ್‌ಗೆ ಬಿಸಿಸಿಐ ಹೊಸ ಜವಾಬ್ದಾರಿ

ವೇತನ ಮಾತ್ರ ಪುರುಷರಷ್ಟೇ ಬೇಕು, ಪರ್ಫಾರ್ಮೆನ್ಸ್ ಝೀರೋ: ಟ್ರೋಲ್ ಆದ ಮಹಿಳಾ ಕ್ರಿಕೆಟಿಗರು

Women World Cup: ಇಂಗ್ಲೆಂಡ್‌ ವಿರುದ್ಧ ಸೋತ ಭಾರತಕ್ಕೆ ಸೆಮಿಫೈನಲ್‌ ಹಾದಿ ಕಠಿಣ

Ind Vs Aus ODI: ಹಿಟ್‌ಮ್ಯಾನ್‌, ಕಿಂಗ್‌ಕೊಹ್ಲಿ ತಂಡಕ್ಕೆ ವಾಪಾಸ್ಸಾದರು ನಡೆಯದ ಮ್ಯಾಜಿಕ್‌

ಸ್ಟಾರ್‌ ಬ್ಯಾಟರ್‌ ಸ್ಮೃತಿ ಮಂದಾನ ಶೀಘ್ರದಲ್ಲೇ ಹಣೆಮಣೆಗೆ: ಇಂದೋರ್‌ನ ಸೊಸೆ ಎಂದಿದ್ಯಾರು ಗೊತ್ತಾ

ಮುಂದಿನ ಸುದ್ದಿ
Show comments