Select Your Language

Notifications

webdunia
webdunia
webdunia
webdunia

ಜಯವರ್ದನೆ ಶತಕ: ಶ್ರೀಲಂಕಾಗೆ ಆಫ್ಘಾನಿಸ್ತಾನ ವಿರುದ್ಧ ಜಯ

ಜಯವರ್ದನೆ ಶತಕ: ಶ್ರೀಲಂಕಾಗೆ ಆಫ್ಘಾನಿಸ್ತಾನ ವಿರುದ್ಧ ಜಯ
ಕಟಕ್, ಡುನೆಡಿನ್ , ಭಾನುವಾರ, 22 ಫೆಬ್ರವರಿ 2015 (12:12 IST)
ಐಸಿಸಿ ಏಕದಿನ ವಿಶ್ವಕಪ್ ಸಮರದಲ್ಲಿ ನ್ಯಜಿಲೆಂಡ್ ಡ್ಯುನೆಡಿನ್ ಮೈದಾನದಲ್ಲಿ ನಡೆದ ಶ್ರೀಲಂಕಾ ಮತ್ತು ಆಫ್ಘಾನಿಸ್ತಾನ ನಡುವೆ ನಡೆದ ಪಂದ್ಯದಲ್ಲಿ  ಜಯವರ್ದನೆ ಅವರ 100 ರನ್ ಮತ್ತು ಮ್ಯಾಥ್ಯೂಸ್ ಅವರ 44 ರನ್,  ತಿಸಾರಾ ಪೆರಿರಾ ಅವರ ಅಜೇಯ 47 ರನ್  ನೆರವಿನಿಂದ ಶ್ರೀಲಂಕಾ ನಾಲ್ಕು ವಿಕೆಟ್‌ಗಳಿಂದ ಜಯಗಳಿಸಿದೆ. ಮೊದಲ ಬ್ಯಾಟ್ ಮಾಡಿದ ಆಫ್ಘಾನಿಸ್ತಾನ ಎಲ್ಲಾ ವಿಕೆಟ್ ಕಳೆದುಕೊಂಡು 232 ರನ್ ಗಳಿಸಿತ್ತು.

ಇವರ ರನ್ ಬೆನ್ನೆಟ್ಟಿದ ಶ್ರೀಲಂಕಾ 48. 2 ಓವರುಗಳಲ್ಲಿ 6 ವಿಕೆಟ್ ಕಳೆದುಕೊಂಡು 236 ರನ್ ಗಳಿಸುವ ಮೂಲಕ ವಿಶ್ವ ಕಪ್ ಮೊದಲ ಜಯ ದಾಖಲಿಸಿದೆ. ಶ್ರೀಲಂಕಾ ಪರ ಮ್ಯಾಥ್ಯೂಸ್ ಮತ್ತು ಮಾಲಿಂಗಾ ತಲಾ 3 ವಿಕೆಟ್ ಕಬಳಿಸಿದರು. ಆರಂಭದಲ್ಲಿ ಶ್ರೀಲಂಕಾದ ತಿರಿಮನ್ನೆ ಮತ್ತು ದಿಲ್ಶಾನ್ ಮತ್ತು ಸಂಗಕ್ಕಾರ ಬೇಗನೇ ಔಟಾದರು. ಒಂದು ಹಂತದಲ್ಲಿ ಶ್ರೀಲಂಕಾ 51 ರನ್‌‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿತ್ತು.

ಆದರೆ ಜಯವರ್ದನೆ ಮತ್ತು ಮ್ಯಾಥ್ಯೂಸ್ ಉತ್ತಮ ಜೊತೆಯಾಟದಿಂದ ಆಫ್ಗಾನಿಸ್ತಾನದ ಸ್ಕೋರ್ ಗಡಿ ಮುಟ್ಟಲು ನೆರವಾಯಿತು. ಜಯವರ್ದನೆ ಮತ್ತು ಮ್ಯಾಥ್ಯೂಸ್  5ನೇ ವಿಕೆಟ್‌ಗೆ 101 ರನ್ ಸೇರಿಸಿದರು. ಜಯವರ್ದನೆ ಔಟಾದ ಬಳಿಕ ಶ್ರೀಲಂಕಾಗೆ ಇನ್ನೂ 81 ರನ್ ಅಗತ್ಯವಿತ್ತು.

7ನೇ ವಿಕೆಟ್‌ಗೆ ತಿಸಾರಾ ಪೆರೀರಾ ಮತ್ತು ಮೆಂಡಿಸ್ 46 ರನ್ ಸೇರಿಸಿದರು. ಶ್ರೀಲಂಕಾ ಗೆಲುವಿಗೆ 14 ಎಸೆತಗಳಲ್ಲಿ 9 ರನ್ ಬೇಕಾಗಿತ್ತು. ಪೆರೀರಾ ಕೊನೆಯಲ್ಲಿ ಬೌಂಡರಿ ಬಾರಿಸುವ ಮೂಲಕ ಶ್ರೀಲಂಕಾಗೆ ಜಯ ದಕ್ಕಿತು.  ಆಫ್ಘನ್ ಪರ ಹಮೀದ್ ಹಸನ್ 3 ವಿಕೆಟ್ ಮತ್ತು ಜದ್ರಾನ್ ಎರಡು ವಿಕೆಟ್ ಕಬಳಿಸಿದರು.

Share this Story:

Follow Webdunia kannada