Webdunia - Bharat's app for daily news and videos

Install App

ವಿಶ್ವಕಪ್ ಗೆದ್ದ ಮರುದಿನವೇ ಜಸ್ಪ್ರೀತ್ ಬುಮ್ರಾಗೆ ಸರ್ಪೈಸ್ ಕೊಟ್ಟ ಪತ್ನಿ ಸಂಜನಾ ಗಣೇಶನ್

Krishnaveni K
ಮಂಗಳವಾರ, 2 ಜುಲೈ 2024 (08:37 IST)
ಬಾರ್ಬಡೋಸ್: ಟಿ20 ವಿಶ್ವಕಪ್ 2024 ರ ಫೈನಲ್ ಗೆದ್ದ ಸಂಭ್ರಮವನ್ನು ಟೀಂ ಇಂಡಿಯಾ ಆಟಗಾರರು ತಮ್ಮದೇ ರೀತಿಯಲ್ಲಿ ಆಚರಿಸಿಕೊಂಡು ಖುಷಿಪಟ್ಟಿದ್ದಾರೆ. ವೇಗಿ ಜಸ್ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್ ಪತಿ ಜೊತೆಗೆ ಸಂಭ್ರಮಾಚರಿಸಿದ್ದು ಹೇಗೆ ಎಂಬುದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಟಿ20 ವಿಶ್ವಕಪ್ ಗೆದ್ದ ಬಳಿಕ ನಾಯಕ ರೋಹಿತ್ ಶರ್ಮಾ ಖುಷಿಯಲ್ಲಿ ಕಪ್ ಜೊತೆಗೇ ರಾತ್ರಿ ಮಲಗಿ ನಿದ್ರೆ ಮಾಡಿದ್ದರು. ಬೆಳಿಗ್ಗೆ ಕಪ್ ಮುಖ ನೋಡಿಕೊಂಡೇ ಎದ್ದಿದ್ದಾಗಿ ರೋಹಿತ್ ಫೋಟೋ ಹಂಚಿಕೊಂಡಿದ್ದರು. ಇನ್ನು, ಸೂರ್ಯಕುಮಾರ್ ಯಾದವ್ ಕೂಡಾ ಪತ್ನಿ ಜೊತೆ ಮಧ್ಯದಲ್ಲಿ ಕಪ್ ಇಟ್ಟು ಮಲಗಿರುವ ಫೋಟೋವನ್ನು ಹಂಚಿಕೊಂಡಿದ್ದರು.

ಆದರೆ ವೇಗಿ ಜಸ್ಪ್ರೀತ್ ಬುಮ್ರಾ ಮಾತ್ರ ಈ ಸಂಭ್ರಮವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಅವರ ಪತ್ನಿ ಸಂಜನಾ ಗಣೇಶನ್. ಎಲ್ಲರಿಗೂ ಗೊತ್ತಿರುವ ಹಾಗೆ ಸಂಜನಾ ಕ್ರೀಡಾ ನಿರೂಪಕಿಯಾಗಿದ್ದು, ಈ ಬಾರಿ ಅವರೂ ವಿಶ್ವಕಪ್ ನಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ವಿಶ್ವಕಪ್ ಗೆದ್ದ ಮರುದಿನವೇ ತನ್ನ ಪತಿ ಬುಮ್ರಾಗೆ ಐಸ್ ಕ್ರೀಂ ಪಾರ್ಟಿ ಕೊಡಿಸಿದ್ದಾರಂತೆ ಸಂಜನಾ. ಬುಮ್ರಾರನ್ನು ಕರೆದುಕೊಂಡು ಐಸ್ ಕ್ರೀಂ ತಿನ್ನಲು ಹೋಗುವ ಕ್ಷಣವನ್ನು ಹಂಚಿಕೊಂಡ ಸಂಜನಾ ‘ವಿಶ್ವ ಚಾಂಪಿಯನ್ ಜೊತೆಗೆ ಬೆಳ್ಳಂ ಬೆಳಿಗ್ಗೆಯೇ ಐಸ್ ಕ್ರೀಂ ತಿನ್ನುವ ಖುಷಿ’ ಎಂದು ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಜೂನ್ 14 ಆರ್ ಸಿಬಿ ಪಾಲಿಗೆ ಮಹತ್ವದ ದಿನ: ಅಭಿಮಾನಿಗಳ ಆತಂಕ ನಿಜ ಮಾಡುತ್ತಾ ಬಿಸಿಸಿಐ

KL Rahul: ಇಂಗ್ಲೆಂಡ್ ನಲ್ಲಿ ಕೆಎಲ್ ರಾಹುಲ್ ಗೆ ಜೀವದ ಗೆಳೆಯನಿಂದಲೇ ಕುತ್ತು

WTC Final: ರಬಾಡ ದಾಳಿಗೆ ತತ್ತರಿಸಿದ ಕಾಂಗರೂ ಪಡೆ: ದಕ್ಷಿಣ ಆಫ್ರಿಕಾ ತಂಡವೂ ಆರಂಭದಲ್ಲೇ ಕುಸಿತ

WTC Final: ಆಸ್ಟ್ರೇಲಿಯಾ, ಆಫ್ರಿಕಾ ನಡುವೆ ಫೈನಲ್, ಟೀಂ ಇಂಡಿಯಾಗೂ ಸಿಗಲಿದೆ ದುಡ್ಡು

RCB: ಆರ್ ಸಿಬಿ ತಂಡ ಮಾರಾಟಕ್ಕಿದೆ: ಕೊಳ್ಳಲು ದೊಡ್ಡ ಕುಳವೇ ಆಗಿರ್ಬೇಕು ಬಿಡಿ

ಮುಂದಿನ ಸುದ್ದಿ
Show comments