Select Your Language

Notifications

webdunia
webdunia
webdunia
webdunia

ಕೊಹ್ಲಿ, ಡಿ ವಿಲಿಯರ್ಸ್ ರೀತಿ ಶೆಹಜಾದ್, ಅಕ್ಮಲ್ ಪ್ರದರ್ಶನ ನಿರೀಕ್ಷಿಸುವುದು ತಪ್ಪು: ಅಫ್ರಿದಿ

ಕೊಹ್ಲಿ, ಡಿ ವಿಲಿಯರ್ಸ್ ರೀತಿ ಶೆಹಜಾದ್, ಅಕ್ಮಲ್ ಪ್ರದರ್ಶನ  ನಿರೀಕ್ಷಿಸುವುದು ತಪ್ಪು: ಅಫ್ರಿದಿ
ನವದೆಹಲಿ: , ಬುಧವಾರ, 1 ಜೂನ್ 2016 (18:36 IST)
ನಮ್ಮ ನೆಚ್ಚಿನ ಬ್ಯಾಟ್ಸ್‌ಮನ್‌ಗಳಾದ ಅಹ್ಮದ್ ಶೆಹಜಾದ್ ಮತ್ತು ಉಮರ್ ಅಕ್ಮಲ್ ಅವರಿಂದ ಅತೀ ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಳ್ಳುವ ಮೂಲಕ ಪಾಕಿಸ್ತಾನ ಥಿಂಕ್ ಟ್ಯಾಂಕ್ ( ಚಿಂತಕರ ಚಾವಡಿ) ತಪ್ಪು ಮಾಡಿದೆ ಎಂದು ಪಾಕಿಸ್ತಾನ ಆಲ್‌ರೌಂಡರ್ ಶಾಹಿದ್ ಅಫ್ರಿದಿ ದಿಟ್ಟ ಹೇಳಿಕೆಯನ್ನು ನೀಡಿದ್ದಾರೆ.  ಶೆಹಜಾದ್ ಮತ್ತು ಅಕ್ಮಲ್ ಅವರು ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ರೀತಿಯಲ್ಲಿ ಪ್ರದರ್ಶನ ನೀಡಬೇಕೆಂದು ನಿರೀಕ್ಷಿಸುವುದು ತಪ್ಪು ಎಂದು ಅಫ್ರಿದಿ ಜಿಯೊ ಸುದ್ದಿ ಚಾನೆಲ್‌ಗೆ ತಿಳಿಸಿದರು. 
 
ಶೆಹಜಾದ್ ಮತ್ತು ಉಮರ್ ಕೊಹ್ಲಿ ಮತ್ತು ಡಿ ವಿಲಿಯರ್ಸ್ ಮಟ್ಟವನ್ನು ಮುಟ್ಟಲು ನಿಜವಾಗಲೂ ಅವರ ಆಟಗಳಲ್ಲಿ ಮತ್ತು ಸಾಗುತ್ತಿರುವ ಮಾರ್ಗದಲ್ಲಿ ಕಷ್ಟಪಡಬೇಕು ಎಂದು ಅಫ್ರಿದಿ ಹೇಳಿದರು. ಶಿಸ್ತಿನ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಆದರೆ ಅವರಿಂದ ಅತಿಯಾದ ನಿರೀಕ್ಷೆ ಮಾಡುವುದು ತಪ್ಪು. ಅವರು ಆಡುತ್ತಿರುವ ರೀತಿಯಲ್ಲೇ ಆಡಲು ಬಿಟ್ಟರೆ ಒಳ್ಳೆಯದು ಎಂದರು.
 
 ಹೆಚ್ಚು ಅನುಭವದೊಂದಿಗೆ ಅವರು ಇನ್ನಷ್ಟು ಸುಧಾರಿಸುವುದು ಖಂಡಿತ. ಆದರೆ ಕೊಹ್ಲಿ ಮತ್ತು ಡಿ ವಿಲಿಯರ್ಸ್ ರೀತಿಯಲ್ಲಿ ಅವರು ಪ್ರದರ್ಶನ ನೀಡಬೇಕೆಂದು ನಿರೀಕ್ಷಿಸುವುದು ತಪ್ಪು. ಇಂತಹ ಹೋಲಿಕೆಗಳನ್ನು ಮಾಡಬೇಡಿ ಎಂದು ಅಫ್ರಿದಿ ಸಲಹೆ ಮಾಡಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಬಂಗಾಳ ಪಿಚ್ ಕ್ಯುರೇಟರ್ ಪ್ರಭೀರ್ ಮುಖರ್ಜಿ ನಿಧನ