Select Your Language

Notifications

webdunia
webdunia
webdunia
webdunia

ಕೊಹ್ಲಿ, ರವಿ ಶಾಸ್ತ್ರಿಯನ್ನು ದೂರಿದ ಇಶಾಂತ್ ಶರ್ಮಾ ಕೋಚ್

ಕೊಹ್ಲಿ,  ರವಿ ಶಾಸ್ತ್ರಿಯನ್ನು ದೂರಿದ ಇಶಾಂತ್ ಶರ್ಮಾ ಕೋಚ್
ಕೊಲಂಬೊ , ಗುರುವಾರ, 3 ಸೆಪ್ಟಂಬರ್ 2015 (13:58 IST)
ಇಶಾಂತ್ ಶರ್ಮಾ ಅವರಿಗೆ ಮಂಗಳವಾರ ಒಂದು ಟೆಸ್ಟ್‌ಗೆ ನಿಷೇಧ ವಿಧಿಸಿದ ಬಳಿಕ ಮೊದಲ ಟೆಸ್ಟ್ ಸರಣಿ ಜಯಕ್ಕೆ ಭಾರತಕ್ಕೆ ನೆರವು ನೀಡಿದ ಇಶಾಂತ್ ಶರ್ಮಾ ಖುಷಿ ಹೆಚ್ಚು ಹೊತ್ತು ಉಳಿದಿಲ್ಲ. ಭಾರತದ ಸರಣಿ ಜಯದಲ್ಲಿ  ಪ್ರವರ್ತಕ ಪಾತ್ರವಹಿಸಿದ್ದ ಇಶಾಂತ್ , ಸರಣಿಯಲ್ಲಿ 13 ವಿಕೆಟ್ ಕಬಳಿಸಿದರು. ಅದರಲ್ಲಿ 8 ವಿಕೆಟ್‌ಗಳು ಅಂತಿಮ ಟೆಸ್ಟ್‌ನಲ್ಲಿ ಬಂದಿದ್ದು, ಸರಣಿಯನ್ನು 2-1ರಿಂದ ಗೆದ್ದಿದ್ದರು. ಆದರೆ ಈ ಪ್ರಕ್ರಿಯೆಯಲ್ಲಿ ಆಕ್ರಮಣಕಾರಿ ಪ್ರವೃತ್ತಿಯ ಗೆರೆಯನ್ನು ಇಶಾಂತ್ ದಾಟಿ ಪಂದ್ಯ ರೆಫರಿ ಆಂಡಿ ಪಿಕ್ರಾಫ್ಟ್ ಗಮನ ಸೆಳೆದಿದ್ದರು.

ಇದರ ಫಲವಾಗಿ ನವೆಂಬರ್‌ನಲ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಮಿಸ್ ಮಾಡಿಕೊಳ್ಳಲಿದ್ದಾರೆ.  ಕೊಹ್ಲಿ ಅವರು ಇಶಾಂತ್ ಆಕ್ರಮಣಕಾರಿ ಪ್ರವೃತ್ತಿಯು ಭಾರತ ತಂಡಕ್ಕೆ ಸಕಾಲಿಕವಾಗಿತ್ತು ಎಂದು ಹೇಳಿದ್ದರೂ, ಇಶಾಂತ್ ಬಾಲ್ಯದ ಕೋಚ್ ಶ್ರವಣ್ ಕುಮಾರ್  ಇಶಾಂತ್ ಗೆರೆ ದಾಟಿ ಹೋಗಲು ಅವಕಾಶ ನೀಡಿದ ಭಾರತದ ನಾಯಕ ಕೊಹ್ಲಿ ಮತ್ತು ಟೀಂ ನಿರ್ದೇಶಕ ರವಿಶಾಸ್ತ್ರಿ ಅವರನ್ನು  ದೂರಿದ್ದಾರೆ.
 
 ಇಶಾಂತ್ ಈ ಬಾರಿ ಮಿತಿಯನ್ನು ಮೀರಿದ್ದಾರೆ. ಸ್ಲೆಡ್ಜಿಂಗ್ ಆಟದ ಒಂದು ಭಾಗ. ಆದರೆ ಸಂಜ್ಞೆಗಳನ್ನು ಮಾಡುವ ಮೂಲಕ ಮ್ಯಾಚ್ ರೆಫರಿಯಿಂದ ತೊಂದರೆಗೆ ಸಿಕ್ಕಿಬಿದ್ದರು. ಬಹುಶಃ ಆಕ್ರಮಣಕಾರಿ ಪ್ರವೃತ್ತಿ ಬಗ್ಗೆ ತುಂಬಾ ಮಾತನಾಡುವ ನಾಯಕ ಮತ್ತು ಟೀಮ್ ನಿರ್ದೇಶಕರಿರುವ ಡ್ರೆಸಿಂಗ್ ರೂಂ ವಾತಾವರಣದಿಂದ ಇಶಾಂತ್ ಆಕ್ರಮಣ ಪ್ರವೃತ್ತಿ ತೋರಿದರು ಎಂದು ಕುಮಾರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
 
 ನಾನು ಖಂಡಿತವಾಗಿ ಅವರ ಆಕ್ರಮಣಕಾರಿ ಪ್ರವೃತ್ತಿಯನ್ನು ನಿಯಂತ್ರಣದಲ್ಲಿಡುವಂತೆ ಕೇಳುತ್ತೇನೆ. ಈ ಘಟನೆಯಿಂದ ಇಶಾಂತ್ ತೊಂದರೆಗೆ ಒಳಗಾದರು. ತಂಡದ ಮ್ಯಾನೇಜ್‌ಮೆಂಟ್ ಇಶಾಂತ್ ನಿಷೇಧ ತೆಗೆಯುವಂತೆ ಮ್ಯಾಚ್ ರೆಫರಿಯನ್ನು ಕೇಳಬೇಕಿತ್ತು. ಇಶಾಂತ್ ಅವರಿಗೆ ಸಲಹೆ ನೀಡುವ ಅಗತ್ಯವಿದ್ದು, ಸ್ಲೆಡ್ಜಿಂಗ್ ಕಲೆ ಕಲಿಯಬೇಕಾಗಿದೆ ಎಂದು ಕೋಚ್ ಹೇಳಿದರು. 

Share this Story:

Follow Webdunia kannada