ಐಪಿಎಲ್: ಶಿಖರ್ ಧವನ್ ಅಬ್ಬರಕ್ಕೇ ಸೊರಗಿತು ರಾಜಸ್ಥಾನ್ ರಾಯಲ್ಸ್

Webdunia
ಮಂಗಳವಾರ, 10 ಏಪ್ರಿಲ್ 2018 (09:23 IST)
ಹೈದರಾಬಾದ್: ಎರಡು ವರ್ಷಗಳ ನಂತರ ಕಣಕ್ಕೆ ಮರಳಿದ ರಾಜಸ್ಥಾನ್ ರಾಯಲ್ಸ್ ಗೆ ಮೊದಲ ಪಂದ್ಯದಲ್ಲೇ ಹೈದರಾಬಾದ್ ಸನ್ ರೈಸರ್ಸ್ ಸೋಲಿನ ಆಘಾತ ನೀಡಿದೆ.

ಭುವನೇಶ್ವರ್ ಕುಮಾರ್ ವೇಗದ ದಾಳಿಗೆ ತತ್ತರಿಸಿ ರಾಯಲ್ಸ್ ಕೇವಲ 125 ರನ್ ಗಳಿಸಲಷ್ಟೇ ಶಕ್ತವಾಯಿತು. ಶಿಖರ್ ಧವನ್ ರಂತಹ ಅಬ್ಬರಿಸುವ ಬ್ಯಾಟ್ಸ್ ಮನ್ ಇರಬೇಕಾದರೆ ಈ ಮೊತ್ತ ಹೈದರಾಬಾದ್ ಗೆ ಸವಾಲು ಎನಿಸಲೇ ಇಲ್ಲ.

ಆರಂಭದಲ್ಲೇ ವೃದ್ಧಿಮಾನ್ ಸಹಾ (5) ವಿಕೆಟ್ ಕಳೆದುಕೊಂಡರೂ ನಾಯಕ ಕೇನ್ ವಿಲಿಯಮ್ಸ್ ಮತ್ತು ಶಿಖರ್ ಧವನ್ ವಿಕೆಟ್ ಕಳೆದುಕೊಳ್ಳದೇ ಮೊತ್ತ ಬೆನ್ನತ್ತಿದರು. ಧವನ್ 57 ಎಸೆತಗಳಲ್ಲಿ 77 ರನ್ ಗಳಿಸಿದರೆ ವಿಲಿಯಮ್ಸ್ 35 ಎಸೆತಗಳಲ್ಲಿ 36 ರನ್ ಗಳಿಸಿದರು. ಕೇವಲ 15.5 ಓವರ್ ಗಳಲ್ಲಿ ಹೈದರಾಬಾದ್ ಕೇವಲ 1 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿವಾದಗಳ ಬೆನ್ನಲ್ಲೇ ಏರ್ ಪೋರ್ಟ್ ನಲ್ಲಿ ಆಯ್ಕೆ ಸಮಿತಿಯ ಪ್ರಗ್ಯಾನ್ ಓಝಾ ಜೊತೆ ಕೊಹ್ಲಿ ಗಂಭೀರ ಚರ್ಚೆ video

ವಿರಾಟ್ ಕೊಹ್ಲಿ ಶತಕ ಸಿಡಿಸಿದಾಗ ಅಗ್ರೆಸಿವ್ ಆಗಿ ರೋಹಿತ್ ಶರ್ಮಾ ಹೇಳಿದ್ದೇನು: ಕೊನೆಗೂ ರಿವೀಲ್

ಗೌತಮ್ ಗಂಭೀರ್ ವಿರುದ್ಧ ಸೀನಿಯರ್ ಆಟಗಾರರು ಸಿಟ್ಟಾಗಿರುವುದಕ್ಕೆ ಕಾರಣ ಬಯಲು

ವಿರಾಟ್ ಕೊಹ್ಲಿ, ಧೋನಿ ಮೇಲೆ ಗೌತಮ್ ಗಂಭೀರ್ ಗೆ ವೈಮನಸ್ಯ ಹುಟ್ಟಿಕೊಂಡಿದ್ದು ಇದೇ ಕಾರಣಕ್ಕಾ

ಸ್ಮೃತಿ ಜತೆಗಿನ ಮದುವೆ ಮುಂದೂಡಿಕೆ ಬಳಿಕ ಮೊದಲ ಬಾರಿ ಪಲಾಶ್ ಮುಚ್ಚಲ್ ಕಾಣಿಸಿಕೊಂಡಿದ್ದು ಹೀಗೆ

ಮುಂದಿನ ಸುದ್ದಿ
Show comments