Webdunia - Bharat's app for daily news and videos

Install App

ರಿಷಬ್ ಪಂತ್ ಮನೋಜ್ಞ ಅರ್ಧಶತಕ: ಡೆವಿಲ್ಸ್‌ಗೆ 8 ವಿಕೆಟ್ ಜಯ

Webdunia
ಬುಧವಾರ, 4 ಮೇ 2016 (11:38 IST)
ರಿಷಬ್ ಪಂತ್ ಅವರ ಮನೋಜ್ಞ ಅರ್ಧ ಶತಕದ ನೆರವಿನಿಂದ ಡೆಲ್ಲಿ ಡೇರ್ ಡೆವಿಲ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಲಯನ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ. ಮೂರನೇ ಐಪಿಎಲ್ ಪಂದ್ಯದಲ್ಲಿ ಆಡುತ್ತಿರುವ ಪಂತ್, 40 ಎಸೆತಗಳಲ್ಲಿ 69 ರನ್ ಸಿಡಿಸುವ ಮೂಲಕ ಗಮನ ಸೆಳೆದರು. ಅವರ ಸ್ಕೋರಿನಲ್ಲಿ ನಾಲ್ಕು ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳಿದ್ದವು. ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೇರ್‌ಡೆವಿಲ್ಸ್ ತಂಡವು 150 ರನ್ ಗುರಿಯನ್ನು 16 ಎಸೆತಗಳು ಬಾಕಿಇರುವಂತೆಯೇ ಗುರಿಮುಟ್ಟಿತು.
 
 
18 ವರ್ಷ ವಯಸ್ಸಿನ ಬ್ಯಾಟ್ಸ್‌ಮನ್ ಪಂತ್ ಜೇಮ್ಸ್ ಫಾಕ್ನರ್ ಮತ್ತು ರೈನಾ ಬೌಲಿಂಗ್‌ನಲ್ಲಿ ಸಿಕ್ಸರ್ ಸೇರಿದಂತೆ  ಕ್ವಿಂಟನ್ ಡಿ ಕಾಕ್ ಜತೆ ಆರಂಭಿಕ ವಿಕೆಟ್‌ಗೆ 115 ರನ್ ಜತೆಯಾಟವಾಡಿದರು. ಇದು ಲಯನ್ಸ್ ತಂಡವನ್ನು ಸೋಲಿನ ದವಡೆಗೆ ನೂಕಿ ಸತತ ಎರಡನೇ ಸೋಲನ್ನು ಲಯನ್ಸ್ ಅನುಭವಿಸಿತು.
 
 ಇದಕ್ಕೆ ಮುಂಚೆ ಬ್ಯಾಟಿಂಗ್ ಮಾಡಿದ ದಿನೇಶ್ ಕಾರ್ತಿಕ್ ಸುಭದ್ರ ಅರ್ಧ ಶತಕ ಬಾರಿಸಿ ಏಳುವಿಕೆಟ್‌ಗೆ 149 ರನ್ ಬಾರಿಸಿದರು.  ಲಯನ್ಸ್ ಆರಂಭದಲ್ಲೇ 24ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಗೆ ತಲುಪಿತು. ಕಾರ್ತಿಕ್ ಮತ್ತು ಸುರೇಶ್ ರೈನಾ ಅವರ 51 ರನ್ ಜತೆಯಾಟದಿಂದ 150ರ ಗಡಿ ಸಮೀಪ ತರಲು ಸಾಧ್ಯವಾಯಿತು. ರವೀಂದ್ರ ಜಡೇಜಾ 26 ಎಸೆತಗಳಲ್ಲಿ 36 ರನ್ ಸಿಡಿಸಿ ಅಜೇಯರಾಗಿ ಉಳಿದರು.
 
ಡೇರ್‌ಡೆವಿಲ್ಸ್ ಪರ ಶಹಬಾಜ್ ನದೀಮ್ ಎರಡು ವಿಕೆಟ್ ಕಬಳಿಸಿದರೆ, ಜಹೀರ್ ಖಾನ್, ಕ್ರಿಸ್ ಮೋರಿಸ್, ಶಮಿ ಮತ್ತು ಅಮಿತ್ ಮಿಶ್ರಾ ತಲಾ ಒಂದು ವಿಕೆಟ್ ಕಬಳಿಸಿದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Digvesh Rathi: ಎರಡು ಭಾರಿ ದಂಡ ವಿಧಿಸಿದರು ನಿಲ್ಲಿಸದ ನೋಟ್‌ಬುಕ್‌ ಸೆಲೆಬ್ರೇಶನ್‌

IPL 2025: ಚೆನ್ನೈ ತಂಡದ ಮಹಾ ಎಡವಟ್ಟು: ನಿಯಮ ಮರೆತು ಪಂದ್ಯ ಸೋತ ಧೋನಿ ಪಡೆ

IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 16 ವರ್ಷಗಳ ಬಳಿಕ ಈ ದಾಖಲೆ ಬರೆದ ಆರ್‌ಸಿಬಿ

IPL 2025: ಚೆನ್ನೈ ವಿರುದ್ಧದ ರೋಚಕ ಪಂದ್ಯದಲ್ಲಿ ಗೆದ್ದ ಆರ್‌ಸಿಬಿ: ಮತ್ತೆ ಅಗ್ರಸ್ಥಾನದೊಂದಿಗೆ ಪ್ಲೇಆಫ್‌ಗೆ ಸನಿಹ

RCB vs CSK Match:ಶೆಫರ್ಡ್‌ ಅಬ್ಬರದ ಬ್ಯಾಟಿಂಗ್‌ಗೆ ನಲುಗಿದ ಚೆನ್ನೈ, ಆರ್‌ಸಿಬಿಯಿಂದ ಬಿಗ್ ಟಾರ್ಗೆಟ್‌

ಮುಂದಿನ ಸುದ್ದಿ
Show comments