Select Your Language

Notifications

webdunia
webdunia
webdunia
webdunia

2018ರಿಂದ ಐಪಿಎಲ್‌ನಲ್ಲಿ 10 ತಂಡಗಳನ್ನು ಆಡಿಸುವ ಸಾಧ್ಯತೆ

2018ರಿಂದ ಐಪಿಎಲ್‌ನಲ್ಲಿ 10 ತಂಡಗಳನ್ನು ಆಡಿಸುವ ಸಾಧ್ಯತೆ
ಕೋಲ್ಕತಾ , ಶುಕ್ರವಾರ, 28 ಆಗಸ್ಟ್ 2015 (15:36 IST)
ಕೋಲ್ಕತಾದಲ್ಲಿ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಗುರುವಾರ ಒಂದೂವರೆ ಗಂಟೆ ಚರ್ಚೆಯ ಬಳಿಕ ಬಿಸಿಸಿಐ ಯಾವುದೇ ಪ್ರಗತಿ ಸಾಧಿಸಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್‌ಗೆ ಮಧ್ಯಂತರ ಪರಿಹಾರಕ್ಕೆ ಚೆನ್ನೈ ಹೈಕೋರ್ಟ್ ನಿರಾಕರಿಸಿದ ಬಳಿಕ, ಬಿಸಿಸಿಐಗೆ ಬೇರೆ ದಾರಿಯಿಲ್ಲದೇ ಎರಡು ತಂಡಗಳ ಶೂನ್ಯತೆ ತುಂಬಲು ಹೊಸದಾಗಿ ಟೆಂಡರ್ ಕರೆಯುವುದು ಮಾತ್ರ ಬಾಕಿ ಉಳಿದಿದೆ.
ವಿಶ್ವಸನೀಯ ಮೂಲಗಳ ಪ್ರಕಾರ, ನಾಲ್ವರು ಸದಸ್ಯರ ಕಾರ್ಯಕಾರಿ ಗುಂಪು ಆಡಳಿತ ಮಂಡಳಿ ಸದಸ್ಯರಿಗೆ ಎರಡು ಸಲಹೆಗಳನ್ನು ನೀಡಿತು.  ಮೊದಲ ಆಯ್ಕೆಯು ಚೆನ್ನೈ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳ ಗೈರಿನಲ್ಲಿ 2 ವರ್ಷಗಳ ಅವಧಿಗೆ ಎರಡು ಹೊಸ ಐಪಿಎಲ್ ತಂಡಗಳಿಗೆ ಟೆಂಡರ್ ಕರೆಯುವುದು.

ಎರಡನೇ ಆಯ್ಕೆ  ಎರಡು ಹೊಸ ತಂಡಗಳಿಗೆ 10 ವರ್ಷಗಳ ಟೆಂಡರ್ ಕರೆದು 2018ರಿಂದ ಸಿಎಸ್‌ಕೆ ಮತ್ತು ರಾಜಸ್ಥಾನ ಹಿಂತಿರುಗಿದ ಮೇಲೆ ಐಪಿಎಲ್‌‍‌ನಲ್ಲಿ ಒಟ್ಟು 10 ತಂಡಗಳನ್ನು ಆಡಿಸುವುದು. ಈ ಸಲಹೆಗಳನ್ನು ಶುಕ್ರವಾರ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಂಡಿಸಲಾಗುತ್ತದೆ.
 
ಬಿಸಿಸಿಐ ಒಳಗಿನವರ ಪ್ರಕಾರ, ಮೊದಲ ಆಯ್ಕೆಯನ್ನು ಕಾರ್ಯಕಾರಿ ಸಮಿತಿ ತಳ್ಳಿಹಾಕುವ ಸಂಭವವಿದೆ. ಎರಡನೇ ಆಯ್ಕೆ ತಾರ್ಕಿಕವಾಗಿದ್ದು, ಮುಂದಿನ ಎರಡು ಸೀಸನ್‌‍ಗೆ ಹಣವನ್ನು ತಂದುಕೊಡುತ್ತದೆ ಮತ್ತು 2018ರಿಂದ ದೊಡ್ಡ ಐಪಿಎಲ್‌ಗೆ ಅವಕಾಶ ಕಲ್ಪಿಸುತ್ತದೆ. 
 

Share this Story:

Follow Webdunia kannada